ಫುಲೆ ದಂಪತಿಯ ಆದರ್ಶ ಅನುಕರಣೀಯ

ಸಂಡೂರು ತಾಲೂಕಿನ ಎನ್‌ಎಂಡಿಸಿ ಶಾಂತಿನಗರದಲ್ಲಿ ಎಐಡಿಎಸ್‌ಒನಿಂದ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಮಂಗಳವಾರ ಜರುಗಿತು. ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷೆ ಶಾಂತಿ, ವಿದ್ಯಾರ್ಥಿಗಳಿದ್ದರು.
ಸಂಡೂರು ತಾಲೂಕಿನ ಎನ್‌ಎಂಡಿಸಿ ಶಾಂತಿನಗರದಲ್ಲಿ ಎಐಡಿಎಸ್‌ಒನಿಂದ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಮಂಗಳವಾರ ಜರುಗಿತು. ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷೆ ಶಾಂತಿ, ವಿದ್ಯಾರ್ಥಿಗಳಿದ್ದರು.
Published on
ಸಂಡೂರು: ಸಮಾಜ ಸುಧಾರಕ ಜ್ಯೋತಿಬಾ ಫುಲೆ ಮತ್ತು ಭಾರತದ ಮೊಟ್ಟ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ದಣಿವರಿಯದ ಹೋರಾಟ, ಸಮಾಜ ಸೇವೆಯ ಮಾರ್ಗ ಎಲ್ಲರಿಗೂ ಆದರ್ಶವಾಗಿದೆ ಎಂದು ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷೆ ಶಾಂತಿ ಹೇಳಿದರು. 
ಜ್ಯೋತಿಬಾ ಫುಲೆ 200ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಎನ್‌ಎಂಡಿಸಿಯ ಶಾಂತಿನಗರದದಲ್ಲಿ ಎಐಡಿಎಸ್‌ಒ ವತಿಯಿಂದ ಮಕ್ಕಳಿಗೆ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು. 
ಜಾತಿ ಪದ್ಧತಿ ನಿರ್ಮೂಲನೆ, ಮಹಿಳಾ ಶಿಕ್ಷಣಕ್ಕೆ ಫುಲೆ ದಂಪತಿ ನೀಡಿದ ಕೊಡುಗೆ ಅನನ್ಯವಾಗಿದೆ.
ಅವರಂತೆಯೇ ಎಲ್ಲರೂ ಸಾಮಾಜಿಕ ಬದ್ಧತೆ ಮತ್ತು ಉನ್ನತ ಸಂಸ್ಕೃತಿ ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net