ಇದೇ ವೇಳೆ ಜೆಡಿಎಸ್ ಪಕ್ಷದ ಸ್ಥಾನಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುತ್ತಿರುವ ಹೇಳಿಕೆಗಳಿಗೆ ತಿರುಗೇಟು ನೀಡಿದ ಕೇಂದ್ರ ಸಚಿವರು, ಜೆಡಿಎಸ್ ಪಕ್ಷವನ್ನು ಮುಗಿಸಿದ್ದೇವೆ, ಕುಮಾರಸ್ವಾಮಿ ಇದ್ದಾಗ 58 ಸೀಟು ಗೆದ್ದಿದ್ದರು, ಈಗ 17ಕ್ಕೆ ಬಂದಿದ್ದಾರೆ ಎಂದು ಸಿಎಂ ಪದೇಪದೆ ಹೇಳುತ್ತಿದ್ದಾರೆ. ಹಲವಾರು ಕುತಂತ್ರದ ರಾಜಕಾರಣದಿಂದಾಗಿ ನಾವು ತಾತ್ಕಾಲಿಕವಾಗಿ 17 ಸ್ಥಾನಗಳಿಗೆ ಕುಸಿದಿರಬಹುದು. ಆದರೆ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ 75 ರಿಂದ 80 ಸೀಟುಗಳನ್ನು ಗೆದ್ದು ಬೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.