ಶ್ರೀ ಭಗೀರಥ ಮಹರ್ಷಿಗಳ ಹಾದಿ ನಮಗೆಲ್ಲರಿಗೂ ಆದರ್ಶ: ರಂಗನಾಥ ಎಸ್.ಜಡಿ

,
,
Published on
ಕಲಬುರಗಿ: ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಕಂಡು ದೃತಿಗೆಡದೆ, ದೃಢ ಸಂಕಲ್ಪದಿAದ ಮುನ್ನುಗ್ಗಿದರೆ ಅಸಾಧ್ಯವಾದುದನ್ನು ಸಾಧಿಸಬಹುದು ಎಂಬುದಕ್ಕೆ ಭಗೀರಥ ಮಹರ್ಷಿಗಳೇ ಶ್ರೇಷ್ಠ ಉದಾಹರಣೆ. ಅವರ ಹಾದಿ ನಮಗೆಲ್ಲರಿಗೂ ಆದರ್ಶ ಎಂದು ಸಹಕಾರ ಸಂಘಗಳ ಹಿರಿಯ ಲೆಕ್ಕಪರಿಶೋಧಕ ರಂಗನಾಥ ಎಸ್. ಜಡಿ ಅವರು ತಿಳಿಸಿದರು.
ನಗರದಲ್ಲಿ ಗುರುವಾರ ಡಾ.ಎಸ್.ಎಂ ಪಂಡಿತ ರಂಗ ಪಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತ ಇಲಾಖೆ, ಮಹನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ‘ ಭಗೀರಥ ಮಹರ್ಷಿಗಳ ಜೀವನ ಪಥ ' ಕುರಿತು ಉಪನ್ಯಾಸ ನಿಡಿದ ಅವರು ಪುರಾಣದ ಹಿನ್ನೆಲೆಯನ್ನು ಮೆಲುಕು ಹಾಕಿದರು. ಸಗರ ಚಕ್ರವರ್ತಿಯ ಅರವತ್ತು ಸಾವಿರ ಪುತ್ರರು ಕಪಿಲ ಮುನಿಗಳ ಶಾಪಕ್ಕೆ ತುತ್ತಾಗಿ ಭಸ್ಮವಾದಾಗ ಅವರ ಆತ್ಮಕ್ಕೆ ಸದ್ಗತಿ ದೊರಕಿಸಲು ಭಗೀರಥನು ಪಟ್ಟ ಶ್ರಮ ಇತಿಹಾಸದಲ್ಲಿ ಅಚ್ಚಳಿಯದಂತಿದೆ ಎಂದರು.
ತನ್ನ ಸುಖ-ಭೋಗಗಳನ್ನು ತ್ಯಜಿಸಿ, ಘೋರ ತಪಸ್ಸನ್ನಾಚರಿಸಿ ಆಕಾಶಗಂಗೆಯನ್ನು ಧರೆಗೆ ತಂದ ಭಗೀರಥನ ಕಾರ್ಯವು ಕೇವಲ ಒಂದು ವಂಶದ ಮುಕ್ತಿಯಲ್ಲ, ಅದು ಇಡೀ ಮನುಕುಲಕ್ಕೆ ದೊರೆತ ಮಹಾನ್ ಕೊಡುಗೆಯಾಗಿದೆ ಎಂದು ಹೇಳಿದರು.
ಇಂದಿನ ಯುವ ಪೀಳಿಗೆಯು ಅಲ್ಪ ಹಿನ್ನಡೆಗೂ ಅಧೀನರಾಗುತ್ತಿದ್ದಾರೆ. ಆದರೆ ಭಗೀರಥನ ಕಥೆಯು ನಮಗೆ ಸೋಲೊಪ್ಪದ ಛಲವನ್ನು ಕಲಿಸುತ್ತದೆ. 'ಭಗೀರಥ ಪ್ರಯತ್ನ' ಎಂಬ ಪದವೇ ಇಂದು ಕಠಿಣ ಪರಿಶ್ರಮಕ್ಕೆ ಪರ್ಯಾಯ ಪದವಾಗಿದೆ. ಗುರಿ ಮುಟ್ಟುವ ತನಕ ವಿಶ್ರಮಿಸದ ಅಪ್ರತಿಮ ವ್ಯಕ್ತಿತ್ವ ಅವರದ್ದು ಎಂದು ಎಂದು ತಿಳಿಸಿದರು.
ಉಪ್ಪಾರ ಸಂಘ ಜಿಲ್ಲಾ ಅಧ್ಯಕ್ಷ ಗೋವಿಂದ ಸಗರ ಅವರು ಮಾತನಾಡಿ ನಗರದಲ್ಲಿ ಶ್ರೀ ಭಗೀರಥ ಮಹರ್ಷಿ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಗುರುಗಳ ಸನ್ನಿಧಿಯಲ್ಲಿ ವಿಜೃಂಭಣೆಯಿAದ ಆಚರಿಸೋಣ. ಈ ಬಾರಿ ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗದಿದ್ದಕ್ಕೆ ವಿಷಾದಿಸಿದ ಮುಖಂಡರು, ಶೀಘ್ರದಲ್ಲೇ ಕಾರ್ಯಕ್ರಮದ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ಜಗದೀಶ್ವರಿ ಅ. ನಾಸಿ ಸ್ವಗತಿಸಿದರು. ಭಗವಂತ ಆರ್.ಡೊಣೂರ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಾರ್ಯಲಯದ ಪ್ರಥಮ ದರ್ಜೆ ಸಹಾಯಕ ನಾಗರಾಜ, ಭಗೀರಥ ಸೌಹಾರ್ದ ಸಹಕಾರಿ ಬ್ಯಾಂಕ್ ಅಧ್ಯಕ್ಷ ವೆಂಕಟೇಶ್ ನೀರಡಗಿ, ಸತೀಶ್ ಸಗರ, ಗೋಪಾಲ ದೊಡ್ಡಮನಿ, ಬಸವರಾಜ್ ನಾಲ್ವಾರ್, ಭೀಮರಾಯ ವಿ.ಪಿ, ಮೌನೇಶ್ ಪೂಜಾರಿ, ಭೀಮರಾಯ ರಾಮಪುರಹಳ್ಳಿ, ನರಸಪ್ಪ ಜಡಿ, ರಾಘವೇಂದ್ರ ಶಾಂತ್‌ಪುರ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net