ದರ್ಪ ತೋರಿದವನಿಗೆ ದಂಡದ ಬಿಸಿ!

The one who shows arrogance will be punished!
The one who shows arrogance will be punished!
Published on
ಚಿಂತಾಮಣಿ: ನಗರದ ರಾಷ್ಟ್ರೀಯ ಹೆದ್ದಾರಿಯ ಕಾಂಪ್ಲೆಕ್ಸ್​ ಬಳಿ ಸೋಮವಾರ ನಗರಠಾಣೆ ಪೊಲೀಸರು ದ್ವಿಚಕ್ರವಾಹನಗಳ ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾಗ ದಾಖಲಾತಿ ಹಾಜರುಪಡಿಸದೆ ದರ್ಪ ಪ್ರದರ್ಶಿಸಿದ ಬೈಕ್​ ಸವಾರನಿಗೆ ಒಂದು ಸಾವಿರ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಲಾಗಿದೆ.
ಮಹಿಳಾ ಪಿಎಸ್​ಐ ಪದ್ಮಾ ನೇತೃತ್ವದ ತಂಡ ವಾಹನಗಳ ದಾಖಲೆಗಳ ಜತೆಗೆ ಹೆಲ್ಮೆಟ್​ ಧರಿಸದ ಸವಾರರನ್ನು ತಡೆದು ತಪಾಸಣೆ ಮಾಡುತ್ತಿದ್ದಾಗ ನೋಂದಣಿ ಸಂಖ್ಯೆ ಇಲ್ಲದ ಬೈಕ್​ ಚಾಲನೆ ಮಾಡಿಕೊಂಡು ಬಂದವನನ್ನು ಪ್ರಶ್ನಿಸಿದ್ದಕ್ಕೆ ದರ್ಪ ತೋರಿದ್ದ.
ಕರ್ತವ್ಯನಿರತ ಮಹಿಳಾ ಪೊಲೀಸ್​ ಪೇದೆ, ಎಎಸ್​ಐ ಮತ್ತು ಪುರುಷ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರೂ ಯಾರನ್ನೂ ಲೆಕ್ಕಿಸದೆ ಏರುಧ್ವನಿಯಲ್ಲಿ ನಿಂದಿಸಿ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಬೈಕ್​ ಏರಿ ಹೊರಡಲು ಮುಂದಾಗಿದ್ದ. ಈ ವೇಳೆ ಆತನನನ್ನು ಹಿಡಿದು ಗೂಡ್ಸ್​ ವಾಹನದ ಮೂಲಕ ನಗರಠಾಣೆಗೆ ಕಳುಹಿಸಿಕೊಟ್ಟರು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಬೈಕ್​ ಸವಾರ ಸಾವಿರಾರು ರೂ. ದಂಡ ಕಟ್ಟಿ ವಾಹನ ಪಡೆದುಕೊಂಡು ತೆರಳಿದನು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net