ಹಣ ಕದ್ದು ಸಿಕ್ಕಿ ಬಿದ್ದ ಖದೀಮರು! money

ಹಣ ಕದ್ದು ಸಿಕ್ಕಿ ಬಿದ್ದ ಖದೀಮರು! money
ಹಣ ಕದ್ದು ಸಿಕ್ಕಿ ಬಿದ್ದ ಖದೀಮರು! money
Published on

ಪ್ರಮುಖ ಮುಖ್ಯಾಂಶಗಳು

  • ಕಳ್ಳರನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಸ್ಥಳಿಯರು
  • ದುಡ್ಡಿನ ಸಮೇತ ಇಬ್ಬರು ಪರಾರಿ
ಚಿಕ್ಕಬಳ್ಳಾಪುರ: ತಾಲೂಕಿನ ಚೊಕ್ಕಹಳ್ಳಿ ಸಮೀಪದ ಎಪಿಎಂಸಿಯಲ್ಲಿ 6.50 ಲಕ್ಷ ರೂ. ಕಳವು ಮಾಡಿದ್ದ ನಾಲ್ವರ ಪೈಕಿ ಇಬ್ಬರನ್ನು ಸ್ಥಳಿಯರೇ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಹಣದ ಸಮೇತ ಇನ್ನಿಬ್ಬರು ಪರಾರಿಯಾಗಿದ್ದಾರೆ.money
ಆಂಧ್ರದ ತಿರುಪತಿಯ ಉಷಾ ರಮೇಶ್​ ಹಣ ಕಳೆದುಕೊಂಡವರು.
ಒಡವೆ ಅಡಮಾನ ಇಟ್ಟ ಹಣ ಮತ್ತು ಎಲ್​ಐಸಿ ವಿಮೆಯಿಂದ ಸಿಕ್ಕ 6.50 ಲಕ್ಷ ರೂ.ಗಳನ್ನು ಅಕ್ಕನ ಮಗಳ ಮದುವೆಗೆ ಹಣ ಕೊಡಲು ಉಷಾ ರಮೇಶ್​ ಬೆಂಗಳೂರಿಗೆ ಕಾರಿನಲ್ಲಿ ತೆರಳುತ್ತಿದ್ದರು. ಮಾರ್ಗ ಮಧ್ಯೆ ಊಟ ಮಾಡಲು ಚೊಕ್ಕಹಳ್ಳಿ ಸಮೀಪದ ಡಾಬಾ ಬಳಿ ಬಿಲ್​ ಕೊಡಲು ಹಣದ ಕಟ್ಟಿನಲ್ಲಿ ನೋಟನ್ನು ತೆಗೆದಿದ್ದು, ಇದನ್ನು ಗಮನಿಸಿದ ಕಳ್ಳರು ಹತ್ತಿರಕ್ಕೆ ಬಂದು ಅವರನ್ನು ಥಳಿಸಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಉಷಾ ರಮೇಶ್​ ನೆರವಿಗಾಗಿ ಕೂಗಿಕೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ರೈತರು, ವರ್ತಕರು ಇಬ್ಬರು ಕಳ್ಳರನ್ನು ಹಿಡಿದುಕೊಂಡಿದ್ದಾರೆ.
ಬಳಿಕ ಕಳ್ಳರಿಬ್ಬರನ್ನು ಎಳೆದುತಂದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ನಂದಿ ಗಿರಿಧಾಮ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸಿಗದ ಹಣ: ನಾಲ್ವರು ಕಳ್ಳರ ಪೈಕಿ ಇಬ್ಬರು ಹಣ ಕಿತ್ತುಕೊಂಡರೆ, ಇನ್ನಿಬ್ಬರು ಅವರಿಂದ ಹಣ ಪಡೆದುಕೊಂಡು ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾರೆ. ಆರೋಪಿಗಳು ಚೇಳೂರು ತಾಲೂಕಿನವರು ಎಂಬುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net