ಸರ್ವತೋಮುಖ ಅಭಿವೃದ್ಧಿಗೆ ನೊಳಂಬ ಸಮಾಜ ಕಟಿಬದ್ಧ election

ತಿಪಟೂರಿನಲ್ಲಿelection  ನೊಳಂಬ ಲಿಂಗಾಯತ ಸಂಘದ ಕಾರ್ಯಕಾರಿ ಸಮಿತಿಯ ಕಾಯಕ ತಂಡದ ಪಾಣಾಳಿಕೆ ಬಿಡುಗಡೆ ಮಾಡಲಾಯಿತು. ಸ್ಪರ್ಧಾಕಾಂಕ್ಷಿಗಳಾದ ಎಂ.ಎಂ.ಜಗದೀಶ್​, ಬಿ.ಆರ್​.ನಟರಾಜ್​, ಕೆ.ನಾಗೇಶ್​, ಎಂ.ಬಿ.ನಂದೀಶ್​, ಬರಗೂರು ಬಸವರಾಜು, ಟಿ.ಕೆ.ರಜನೀಶ್​ ಇದ್ದರು.
ತಿಪಟೂರಿನಲ್ಲಿelection ನೊಳಂಬ ಲಿಂಗಾಯತ ಸಂಘದ ಕಾರ್ಯಕಾರಿ ಸಮಿತಿಯ ಕಾಯಕ ತಂಡದ ಪಾಣಾಳಿಕೆ ಬಿಡುಗಡೆ ಮಾಡಲಾಯಿತು. ಸ್ಪರ್ಧಾಕಾಂಕ್ಷಿಗಳಾದ ಎಂ.ಎಂ.ಜಗದೀಶ್​, ಬಿ.ಆರ್​.ನಟರಾಜ್​, ಕೆ.ನಾಗೇಶ್​, ಎಂ.ಬಿ.ನಂದೀಶ್​, ಬರಗೂರು ಬಸವರಾಜು, ಟಿ.ಕೆ.ರಜನೀಶ್​ ಇದ್ದರು.
Published on

ತಿಪಟೂರು:

ವಿದ್ಯೆ, ವಸತಿ ನಿಲಯಗಳ ಸ್ಥಾಪನೆ ಮತ್ತು ಸಿದ್ದರಾಮೇಶ್ವರ ಜಯಂತಿಗೆ

election

ಸೀಮಿತವಾಗಿದ್ದ ನೊಳಂಬ ಸಮಾಜ ಇನ್ನು ಮುಂದೆ ಸರ್ವತೋಮುಖ ಅಭಿವೃದ್ಧಿಗೆ ಕಟಿಬದ್ಧವಾಗಿದೆ ಎಂದು ನೊಳಂಬ ಸಮಾಜದ ಸಂಚಾಲಕ ಎಂ.ಬಿ.ನಂದೀಶ್​ ಹೇಳಿದರು.

ನಗರದಲ್ಲಿ ಆ.23ರಂದು ನೊಳಂಬ ಲಿಂಗಾಯತ ಸಂಘದ ಕಾರ್ಯಕಾರಿ ಸಮಿತಿಯ ನಿರ್ದೇಶಕ ಚುನಾವಣೆಗೆ ರಚಿಸಿಕೊಂಡಿರುವ ಕಾಯಕ ತಂಡದ ಪಾಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, 700 ವರ್ಷಕಾಲ ರಾಜ್ಯವನ್ನಾಳಿದ ಭವ್ಯ ಇತಿಹಾಸ ಇರುವ ನೊಳಂಬ
ಸಮಾಜ, ಇಂದು ಎಲ್ಲ ಕ್ಷೇತ್ರಗಳಲ್ಲೂ ತನ್ನ ಉಪಸ್ಥಿತಿ ಕಳೆದುಕೊಂಡಿದೆ.
ನಮ್ಮ ಸಮಾಜದ ಹಿರಿಯರಾಗಿದ್ದ ಎಸ್​. ಮಲ್ಲಿಕಾಜುನಯ್ಯ ಪ್ರತಿನಿಧಿಸುತ್ತಿದ್ದ ಆಗ್ನೇಯ ಪದವೀಧರ ಕ್ಷೇತ್ರ ಮತ್ತು ಎಸ್​.ಚನ್ನಬಸವಯ್ಯ ಪ್ರತಿನಿಧಿಸುತ್ತಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರ ಮರಳಿ ನಮಗೆ ಸಿಕ್ಕಿಲ್ಲ. ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದ ಮತ್ತು ತುರುವೇಕೆರೆ ಕ್ಷೇತ್ರದಲ್ಲಿ ಕಳೆದ 40 ವರ್ಷಗಳಿಂದ ನೊಳಂಬ ಲಿಂಗಾಯಿತರು ಶಾಸಕರಾಗಿಲ್ಲ.
ಸಂಪುಟಗಳಲ್ಲಿ, ನಿಗಮ&ಮಂಡಳಿಗಳಲ್ಲಿ ನೊಳಂಬರನ್ನು ಕಡೆಗಾಣಿಸಲಾಗಿದೆ. ಈ ಎಲ್ಲ ಅವಕಾಶಗಳನ್ನು ಮರಳಿ ಪಡೆಯಲು ನಾವುಗಳು ರಚಿಸಿಕೊಂಡಿರುವ ಕಾಯಕ ತಂಡ ಶ್ರಮಿಸುತ್ತೆ ಎಂದು ಭರವಸೆ ನೀಡಿದರು.
ಮುಖಂಡ ರಾಯಸಂದ್ರ ರವಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಮುನ್ನೆಲೆಗೆ ಬಂದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಸ್ಪರ್ಧಾಕಾಂಕ್ಷಿಗಳಾದ ಎಚ್​.ಕೆ.ರೇಣುಕಾಪ್ರಸಾದ್​, ಎಚ್​.ಎಸ್​. ಶ್ರೀಕಾಂತ್​, ನಗರಸಭೆ ಮಾಜಿ ಸದಸ್ಯ ಪ್ರಸನ್ನಕುಮಾರ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net