ಸತ್ಕಾರ್ಯಗಳಿಗೆ ಶ್ರಾವಣ ಮಾಸ ಪ್ರೇರಣೆ

ಔರಾದ್​ ಅಮರೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಪ್ರವಚನಕ್ಕೆ ತಹಸೀಲ್ದಾರ್​ ಮಹೇಶ ಪಾಟೀಲ್​ ಗುರುವಾರ ಚಾಲನೆ ನೀಡಿ ಮಾತನಾಡಿದರು. ವೇದಮೂರ್ತಿ ಗುರುಪಾದಯ್ಯ, ಪ್ರವಚನ ಸಮಿತಿ ಅಧ್ಯ ಬಸವರಾಜ ದೇಶಮುಖ, ರೇವಣ್ಣಪ್ಪ ಕೇದಾರೆ, ಬಸವರಾಜ ಚ್ಯಾರೆ, ಕಲ್ಯಾಣರಾವ ಶೆಂಬೆಳ್ಳೆ, ಡಾ.ಧನರಾಜ ರಾಗಾ, ಸೂರ್ಯಕಾಂತ ಬುಟ್ಟೆ ಇದ್ದರು.
ಔರಾದ್​ ಅಮರೇಶ್ವರ ಮಂದಿರದಲ್ಲಿ ಶ್ರಾವಣ ಮಾಸದ ಪ್ರವಚನಕ್ಕೆ ತಹಸೀಲ್ದಾರ್​ ಮಹೇಶ ಪಾಟೀಲ್​ ಗುರುವಾರ ಚಾಲನೆ ನೀಡಿ ಮಾತನಾಡಿದರು. ವೇದಮೂರ್ತಿ ಗುರುಪಾದಯ್ಯ, ಪ್ರವಚನ ಸಮಿತಿ ಅಧ್ಯ ಬಸವರಾಜ ದೇಶಮುಖ, ರೇವಣ್ಣಪ್ಪ ಕೇದಾರೆ, ಬಸವರಾಜ ಚ್ಯಾರೆ, ಕಲ್ಯಾಣರಾವ ಶೆಂಬೆಳ್ಳೆ, ಡಾ.ಧನರಾಜ ರಾಗಾ, ಸೂರ್ಯಕಾಂತ ಬುಟ್ಟೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಔರಾದ್​ ತಹಸೀಲ್ದಾರ್​ ಮಹೇಶ ಪಾಟೀಲ್​ ಅನಿಸಿಕೆ
ಔರಾದ್​: ಧಾರ್ಮಿಕ ಆಚರಣೆಗಳ ಜತೆ ಆತ್ಮಚಿಂತನೆ, ಸತ್ಕಾರ್ಯ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುವ ಪವಿತ್ರ ಮಾಸ ಶ್ರಾವಣ ಎಂದು ತಹಸೀಲ್ದಾರ್​ ಮಹೇಶ ಪಾಟೀಲ್​ ಹೇಳಿದರು.
ಶ್ರಾವಣ ಮಾಸದ ಅಂಗವಾಗಿ ಶ್ರೀ ಉದ್ಭವಲಿಂಗ ಅಮರೇಶ್ವರ ದೇವಸ್ಥಾನದಲ್ಲಿ ಶ್ರೀ ಯಡಿಯೂರು ಸಿದ್ಧಲಿಂಗೇಶ್ವರರ ತಿಂಗಳ ಪುರಾಣ ಪ್ರವಚನಕ್ಕೆ ಗುರುವಾರ ಚಾಲನೆ ನೀಡಿದ ಅವರು, ಪ್ರವಚನಗಳು ಕೇವಲ ಧಾರ್ಮಿಕ ವಿಚಾರಗಳಿಗೆ ಸೀಮಿತವಾಗದೆ ಸಮಾಜದಲ್ಲಿ ಶಾಂತಿ, ಸೌಹಾರ್ದ, ನೈತಿಕತೆ ಮತ್ತು ಸಹಬಾಳ್ವೆ ಸಂದೇಶ ಸಾರಬೇಕು ಎಂದರು.
ಪ್ರವಚನಕಾರರಾದ ವೇದಮೂರ್ತಿ ಗುರುಪಾದಯ್ಯ ಶಾಸ್ತ್ರಿ ಮಾತನಾಡಿ, ಶ್ರಾವಣದ ಮಹತ್ವ, ಶಿವಭಕ್ತಿ, ಸಂತ ಶರಣರ ಜೀವನ ಮತ್ತು ಅಧ್ಯಾತ್ಮದ ಸಾರ ಹಾಗೂ ಉತ್ತಮ ಜೀವನ ಮೌಲ್ಯಗಳ ಕುರಿತು ಭಕ್ತರಿಗೆ ತಿಳಿಹೇಳಿದರು.
ಪ್ರವಚನ ಸಮಿತಿ ಅಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿ, ಶ್ರಾವಣ ಪ್ರಯುಕ್ತ ಪ್ರತಿದಿನ ವಿಶೇಷ ಪೂಜೆ, ಭಜನೆ, ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಧ್ಯಾತ್ಮಿಕ ಚಿಂತನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.
ಪ್ರಮುಖರಾದ ರೇವಣ್ಣಪ್ಪ ಕೇದಾರೆ, ಬಸವರಾಜ ಚ್ಯಾರೆ, ಕಲ್ಯಾಣರಾವ ಶೆಂಬೆಳ್ಳೆ, ಡಾ.ಧನರಾಜ ರಾಗಾ, ಸೂರ್ಯಕಾಂತ ಬುಟ್ಟೆ, ಅಮೃತರಾವ ಬಿರಾದಾರ, ಶೇಷೆರಾವ ಬಂಡೆ, ಪ್ರಕಾಶ ಅಲ್ಮಾಜೆ, ಶ್ರೀಕಾಂತ ಅಲ್ಮಾಜೆ, ಸರುಬಾಯಿ ರಾಗಾ, ನೀಲಮ್ಮ ಚ್ಯಾರೆ, ಪತ್ರಕರ್ತ ಮನ್ಮಥ ಸ್ವಾಮಿ, ಅಮರ ಸ್ವಾಮಿ ಸ್ಥಾವರಮಠ ಇತರರಿದ್ದರು. ಕಲಾವಿದ ಪುರುಷೋತ್ತಮ ದೇಸಾಯಿ, ತಬಲಾ ವಾದಕ ಮಾಣಿಕರಾವ ಗುಡುರೆ ಸಂಗೀತ ಸೇವೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net