ದೇವರ ದರ್ಶನದಿಂದ ಮನಸ್ಸು ಹಗುರ

ಯಾದಗಿರಿ ಸಮೀಪದ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಸೋಮವಾರ ನಡೆದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ಮಾತನಾಡಿದರು. ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಇತರರಿದ್ದರು.
ಯಾದಗಿರಿ ಸಮೀಪದ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಸೋಮವಾರ ನಡೆದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶಾಸಕ ಚನ್ನಾರಡ್ಡಿ ಪಾಟೀಲ್​ ಮಾತನಾಡಿದರು. ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರೆಡ್ಡಿ ಪಾಟೀಲ್​ ಅನಿಸಿಕೆ
  • ಅಬ್ಬೆತುಮಕೂರು ಮಠದಲ್ಲಿ ಶಿವಾನುಭವ ಗೋಷ್ಠಿ
ಯಾದಗಿರಿ: ಮನುಷ್ಯರಿಗೆ ನಿಜವಾದ ಆತ್ಮಶಾಂತಿ ಸಿಗುವುದು ದೇವರು ನೆಲೆಸಿರುವ ತಾಣಗಳಲ್ಲಿ ಮಾತ್ರ ಎಂದು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ಇಲ್ಲಿಗೆ ಸಮೀಪದ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದಲ್ಲಿ ಸೋಮವಾರ ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಅಮಾವ್ಯಾಸೆ ನಿಮಿತ್ತ ನಡೆದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದರು. ಬದುಕಿನ ಜಂಜಾಟಗಳಿಂದ ಬಳಲುವ ನಾವುಗಳು ಸಮಯ ಮಾಡಿಕೊಂಡು ಇಂತಹ ಪುಣ್ಯಕ್ಷೇತ್ರಗಳಿಗೆ ಭೇಟಿ ದೇವರ ದರ್ಶನ ಪಡೆದರೇ ಮನಸ್ಸು ಹಗುರವಾಗುವುದರ ಜತೆಗೆ ತಾಳ್ಮೆ, ಸಹನೆ, ಶಾಂತಿ ಲಭಿಸುತ್ತದೆ ಎಂದರು.
ವಿಶ್ವಾರಾಧ್ಯರು ನೆಲೆಸಿರುವ ಈ ತಾಣ ನಿಜಕ್ಕೂ ಪುಣ್ಯಕ್ಷೇತ್ರ. ಪವಾಡಪುರುಷರಾಗಿದ್ದ ಇವರಲ್ಲಿ ಪವಿತ್ರ ಮನಸ್ಸಿನಿಂದ ಬಂದು ಗದ್ದುಗೆ ಹಣೆಹಚ್ಚಿ ಬೇಡಿಕೊಂಡರೆ ಬೇಡಿದ್ದನ್ನು ಕರುಣಿಸುವ ಕಾರುಣಿಕ ಪುರುರಾಗಿದ್ದರೆ. ಜಾತಿರಹಿತ ಮಠವಾಗಿರುವ ವಿಶ್ವಾರಾಧ್ಯರ ಈ ಐಕ್ಯ ಸ್ಥಳವನ್ನು ನಾಡಿನ ಬಹುದೊಡ್ಡ ಪುಣ್ಯಕ್ಷೇತ್ರ ಮಾಡಿರುವ ಮಠಾಧೀಶ ಡಾ.ಗಂಗಾಧರ ಸ್ವಾಮಿಗಳ ಕಾರ್ಯ ನಿಜಕ್ಕೂ ಮೆಚ್ಚುವಂತಹದು ಎಂದು ಬಣ್ಣಿಸಿದರು.
ಸಾನ್ನಿಧ್ಯ ವಹಿಸಿದ್ದ ಪೀಠಾಧಿಪತಿ ಶ್ರೀ ಡಾ.ಗಂಗಾಧರ ಸ್ವಾಮೀಜಿ ಮಾತನಾಡಿ, ಹಲವು ಕ್ಷೇತ್ರಗಳಲ್ಲಿ ಮೇರು ಸಾಧನೆ ಮಾಡಿರುವ ವಿಶ್ವಾರಾಧ್ಯರು ಅಷ್ಠಸಿದ್ಧಿಗಳನ್ನು ಒಲಿಸಿಕೊಂಡು ಬಂದವರ ಕಷ್ಟಗಳನ್ನು ನೀಗಿಸುವ ಕೆಲಸ ಇಂದಿಗೂ ನಡೆದಿದೆ ಎಂದರು. ಕಾಶಿಪಂಡಿತರಾಗಿದ್ದ ಅವರು ಭವರೋಗಗಳನ್ನು ಕಳೆಯುವ ವೈದ್ಯಮಹಾಂತರೂ ಆಗಿದ್ದಾರೆ ಎಂದರು. ಮಠದ ಕಿರಿಯ ಶ್ರೀಗಳಾದ ಶಿವಶೇಖರ ವಿಶ್ವಾರಾಧ್ಯ ಸ್ವಾಮೀಜಿ, ಬಸವರಾಜ ಶಾಸಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net