ಶಿವಧ್ಯಾನದಿಂದ ಮನಸ್ಸು ಶಾಂತವಾಗುತ್ತದೆ; ಶ್ರೀಶೈಲ ಜಗದ್ಗುರುಗಳ ಅಭಿಮತ

ಗುರುಪೌರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸಮಾರಂಭವನ್ನು ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು. ವಿವಿಧ ಮಠಗಳ ಶ್ರೀಗಳು, ಗಣ್ಯರು ಉಪಸ್ಥಿತರಿದ್ದರು.
ಗುರುಪೌರ್ಣಿಮೆ ಅಂಗವಾಗಿ ಹಮ್ಮಿಕೊಂಡಿದ್ದ ಶ್ರೀಶೈಲ ಜಗದ್ಗುರುಗಳ ಇಷ್ಟಲಿಂಗ ಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಸಮಾರಂಭವನ್ನು ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು. ವಿವಿಧ ಮಠಗಳ ಶ್ರೀಗಳು, ಗಣ್ಯರು ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿವಧ್ಯಾನದಿಂದ ಮನುಷ್ಯನ ಮನಸ್ಸು ಶಾಂತವಾಗುತ್ತದೆ
  • ಶ್ರೀಶೈಲ ಜಗದ್ಗುರುಗಳ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯರ ಅಭಿಮತ
  • ಬೆಂಗಳೂರಿನಲ್ಲಿ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ

ಬೆಂಗಳೂರು:ಶಿವಧ್ಯಾನತತ್ಪರನೂ ಶಿವತತ್ವದ ವಿವೇಕವುಳ್ಳವನಾಗಿರುವುದರಜೊತೆಗೆ ಶಿವಧ್ಯಾನದಿಂದ ಮನಸ್ಸುಕ್ರಮೇಣ ಶಾಂತ ಸ್ಥಿತಿಯನ್ನುಹೊಂದುತ್ತದೆ ಎಂದು ಶ್ರೀಶೈಲಜಗದ್ಗುರು ಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಭಗವತ್ಪಾದರುಅಭಿಪ್ರಾಯಿಸಿದ್ದಾರೆ.

ವಿಜಯನಗರದಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನೌಂಡೇಶನ್ ಮತ್ತು ಶ್ರೀಶೈಲಜಗದ್ಗುರುಗಳ ಕಾರ್ಯಕ್ರಮ ಸೇವಾಸಮಿತಿ ಆಶ್ರಯದಲ್ಲಿ ಗುರು ಪೂರ್ಣಿಮೆಅಂಗವಾಗಿ ಆಯೋಜಿಸಿರುವ ಇಷ್ಟಲಿಂಗಮಹಾಪೂಜೆ ಹಾಗೂ ಶ್ರೀಸಿದ್ಧಾಂತಶಿಖಾಮಣಿ ಆಧ್ಯಾತ್ಮಿಕ ಪ್ರವಚನಸಮಾರಂಭದ ಸಾನ್ನಿಧ್ಯ ವಹಿಸಿಆಶೀರ್ವಚನ ನೀಡಿದರು.

ವಿದ್ಯಾವಿನಯಾದಿ ಸದ್ಗುಣ ಸದಾಚರಣೆಗಳು ಸ್ವಭಾವಗತವಾಗಿ ಬೇರೂರಬೇಕಾದರೆಜನ್ಮ ತಾಳಿದ ನಂತರ ನೀಡುವ ಸಂಸ್ಕಾರದಜೊತೆಗೆ ಸತ್ಕುಲ ಪ್ರಸೂತನೂಆಗಿರಬೇಕು. ಗುರುಸ್ಥಾನವನ್ನು ಅಲಂಕರಿಸಬೇಕಾದವನುವಿದ್ಯಾ ವಿನಯ ಸದ್ಗುಣಾದಿಗಳಿಂದಸುಶೋಭಿತ ಸಂಜಾತನಾಗಿರಬೇಕು.ದುರ್ವಿಚಾರಮತ್ತು ದುರ್ಮಾರ್ಗಗಳಿಂದ ದೂರಇದ್ದು, ಆಧ್ಯಾತ್ಮಿಕಸಂಗತಿಗಳನ್ನು ಅಳವಡಿಸಿಕೊಂಡಿರಬೇಕು.ಆಗ ಮಾತ್ರ ಅವನುಪರಿಪೂರ್ಣ ಸದ್ಗುರುವಾಗಬಲ್ಲನುಮತ್ತು ಸಮಾಜಕ್ಕೆ ಎಲ್ಲ ರೀತಿಯಿಂದಲೂಅತ್ಯುತ್ತಮ ಮಾರ್ಗದರ್ಶನ ಮಾಡಲುಸಮರ್ಥನಾಗುತ್ತಾನೆ ಎಂದುಜಗದ್ಗುರುಗಳು ವಿವರಿಸಿದರು.

ಕಾರ್ಯಕ್ರಮದಮೊದಲಿಗೆ ಇತ್ತೀಚೆಗೆ ಯಶಸ್ವಿಮಾನಸಸರೋವರ ಕೈಲಾಸ ಪರ್ವತದಪರಿಕ್ರಮ ಯಾತ್ರೆಯನ್ನು ಪೂರೈಸಿಬಂದಿರುವ ಶ್ರೀಶೈಲ ಜಗದ್ಗುರುಗಳಪಾದಪೂಜೆ ನೆರವೇರಿಸಲಾಯಿತು

ಕಾರ್ಯಕ್ರಮವನ್ನುಸಂಸದ ಗೋವಿಂದ ಕಾರಜೋಳ ದೀಪ ಬೆಳಗಿಸಿಉದ್ಘಾಟಿಸಿದರು.ಸಮಾರಂಭದಲ್ಲಿ ಅಖಿಲ ಭಾರತ ಶಿವಾಚಾರ್ಯ ಸಂಸ್ಥೆಯಅಧ್ಯಕ್ಷರಾದ ಸಿಂಧಗಿ ಸಾರಂಗಮಠದಶ್ರೀಪ್ರಭುಸಾರಂಗದೇವ ಶಿವಾಚಾರ್ಯಸ್ವಾಮೀಜಿ ಸಮ್ಮುಖ ವಹಿಸಿದ್ದರು.ವಿಭೂತಿಪುರ,ಶಿವಗಂಗೆ ಮತ್ತಿತರಮಠಗಳ ಶ್ರೀಗಳು,ವೀರಶೈವ ಲಿಂಗಾಯತಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷಬಿ.ಎಸ್.ಪರಮಶಿವಯ್ಯ,ಅಖಿಲ ಭಾರತವೀರಶೈವ ಮಹಾಸಭೆ ಬೆಂಗಳೂರು ಘಟಕದಅಧ್ಯಕ್ಷ ಗುರುಸ್ವಾಮಿ,ಸಮಿತಿಯ ಕೋಶಾಧ್ಯಕ್ಷಜಿ.ಎಸ್.ಮೃತ್ಯುಂಜಯಸ್ವಾಮಿ,ಉದ್ಯಮಿಗಳಾದಎಂ.ಮಾದಯ್ಯ,ಸಮಿತಿ ಸದಸ್ಯರಾದಶಿವಶಂಕರ ಶಾಸಿಗಳು,ಮಂಗಳಮ್ಮವಿರೂಪಾಕ್ಷಯ್ಯ,ಶಿವಲಿಂಗಮ್ಮಮತ್ತಿತರರು ಉಪಸ್ಥಿತರಿದ್ದರು.

ಭಾನುವಾರದ ಕಾರ್ಯಕ್ರಮ 

 ಭಾನುವಾರ ಬೆಳಗ್ಗೆ 8ಕ್ಕೆ ಶ್ರೀಶೈಲ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಸಂಜೆ 6ಕ್ಕೆ ಧರ್ಮ ಜಾಗೃತಿ ಸಮಾರಂಭ ನಡೆಯಲಿದೆ. ಶ್ರೀಶೈಲ ಜಗದ್ಗುರುಗಳ ಸಾನಿಧ್ಯ, ಕೊಟ್ಟೂರು, ಅಕ್ಕಿ ಆಲೂರು ಮತ್ತಿತರ ಮಠಗಳ ಶ್ರೀಗಳು, ಸಂಸದ ಈರಣ್ಣ ಕಡಾಡಿ, ಶಾಸಕ ಸಮರ್ಥ ಶಾಮನೂರು ಸೇರಿ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net