ಮಠ ಯಾವತ್ತಿಗೂ ರೈತರ ಪರ farmers

ಮಠ ಯಾವತ್ತಿಗೂ ರೈತರ ಪರ farmers
ಮಠ ಯಾವತ್ತಿಗೂ ರೈತರ ಪರ farmers
Published on

ಪ್ರಮುಖ ಮುಖ್ಯಾಂಶಗಳು

  • ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭರವಸೆ
ಶಿಡ್ಲಘಟ್ಟ: ದೇಶದಲ್ಲಿ ಶೇ.50ಕ್ಕಿಂತಲೂ ಹೆಚ್ಚು ಮಂದಿ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕೃಷಿ ಕ್ಷೇತ್ರದ ಜಿಡಿಪಿ ಶೇ.16 ಮಾತ್ರ ಇದು ರೈತರ ಸ್ಥಿತಿಯನ್ನು ಸೂಚಿಸುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.farmers
ನಗರದ ಕೋಟೆ ವೃತ್ತದಲ್ಲಿ ನೂತನವಾಗಿ ಜೀಣೋರ್ದ್ಧಾರಗೊಂಡ ಶ್ರೀಕೋಟೆ ಸೋಮೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಆಶೀವರ್ಚನ ನೀಡಿದರು.
ಈ ಭಾಗದ ಜಂಗಮಕೋಟೆಯಲ್ಲಿ ಕೈಗಾರಿಕೆ ಪ್ರದೇಶ ಸ್ಥಾಪನೆಗೆ ಚಟುವಟಿಕೆ ನಡೆಯುತ್ತಿವೆ. ಮಠವು ಕೂಡ ಸೂಕ್ಷ$್ಮವಾಗಿ ಎಲ್ಲವನ್ನೂ ಗಮನಿಸುತ್ತಿದ್ದು, ಮಠವು ರೈತರ ಪರ ಇದೆ ಎಂದು ಶ್ರೀಗಳು ರೈತರಿಗೆ ಭರವಸೆ ನೀಡಿದರು.
ರೇಷ್ಮೆ, ತೋಟಗಾರಿಕೆ, ಹೈನುಗಾರಿಕೆ ಸೇರಿ ಕೃಷಿಯಲ್ಲಿ ಶೇ.50ಕ್ಕೂ ಹೆಚ್ಚು ಜನರು ತೊಡಗಿಸಿಕೊಂಡಿದ್ದಾರೆ. ಕೃಷಿಯಲ್ಲಿ ಜಿಡಿಪಿ ಶೇ.30&40 ಸಾಧಿಸಿದ್ದರೆ ರೈತರು ಯಾವ ಸಾಫ್ಟ್​ವೇರ್​ ಇಂಜಿನಿಯರ್​, ವೈದ್ಯರಿಗಿಂತಲೂ ಕಡಿಮೆ ಇಲ್ಲದಂತೆ ಜೀವನ ನಡೆಸುತ್ತಿದ್ದರು ಎಂದರು.
ರೈತರು ಆಡಂಬರದ ಮದುವೆ, ಸಮಾರಂಭ ಮಾಡದೆ ಹಣ ಉಳಿತಾಯ ಮಾಡಿ ಭವಿಷ್ಯಕ್ಕೆ ಹೂಡಿಕೆ ಮಾಡಬೇಕು.
ಶಿಕ್ಷಣ ನಮ್ಮನ್ನು ಬದಲಾವಣೆಗೆ ಒಳಪಡಿಸುತ್ತದೆ. ಅಂಥೆಯೇ ಕೃಷಿಕರು ಕೂಡ ಬದಲಾಗಿ ಪ್ರಗತಿ ಕಾಣಬೇಕು ಎಂದರು.ಕೋಟೆ ಶ್ರೀ ಸೋಮೇಶ್ವರ ದೇವಾಲಯದ ಜೀಣೋರ್ದ್ಧಾರದ 48ನೇ ದಿನದ ಮಂಡಲ ಪೂಜಾ ಕಾರ್ಯಕ್ಕೂ ಮುನ್ನ ದಿನ ದೇವಾಲಯಕ್ಕೆ ಭೇಟಿ ನೀಡಿ ದೇವಾಲಯದ ಮೇಲಿನ ಕಲಶಕ್ಕೆ ಪೂಜೆ ಸಲ್ಲಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net