ಸಂತರ ಬದುಕು ಆದರ್ಶನೀಯ / DEVANAHALLI

ದೇವನಹಳ್ಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲರ 287ನೇ ಜಯಂತಿಯಲ್ಲಿ ಸಂಘದ ಕಾರ್ಯದರ್ಶಿ ರವಿಕುಮಾರ್​ ನಾಯಕ್​, ಖಜಾಂಚಿ ಪ್ರೇಮಸಿಂಗ್​ ರಾಥೋಡ್​, ನಿರ್ದೇಶಕರಾದ ಜಯಾನಾಯಕ್​, ರಮೇಶನಾಯಕ್​, ಲೋಕೇಶ್​, ಬಸವರಾಜ್​ ರಾಥೋಡ್​, ಪವಾರ್​, ನಾಗಿಬಾಯಿ, ಕೊಕಿಲಾ ಇತರರಿದ್ದರು.

Published on
ದೇವನಹಳ್ಳಿ : ಎಲ್ಲ ಸಮುದಾಯಗಳಲ್ಲಿಯೂ ದಾರ್ಶನಿಕರು ಜನಿಸುತ್ತಾರೆ. ಅಂತವರಲ್ಲಿ ಸದ್ಗುರು ಸೇವಾಲಾಲರೂ ಪ್ರಮುಖರು. ಅವರ ಬದುಕು ಆದರ್ಶಮಯ ನಡೆಯನ್ನು ಅನುಸರಿಸಿ ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಬಂಜಾರ ನೌಕರರ ಸಾಂಸತಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಾಜಿ ನಾಯಕ್​ ಹೇಳಿದರು. 
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ಬಂಜಾರ ಸಮುದಾಯದ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಂತ ಸೇವಾಲಾಲರ 287ನೇ ಜಯಂತಿಯಲ್ಲಿ ಮಾತನಾಡಿದರು. ಬಂಜಾರ ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗೆ ಸೇವಾಲಾಲರ ಆದರ್ಶ ದಾರಿದೀಪ. ಹಿಂದೆ ತಾಂಡಾಗಳಲ್ಲಿ ವಾಸವಿದ್ದ ಸಮುದಾಯವು ಇಂದಿಗೆ ಉನ್ನತ ಶಿಕ್ಷಣ ಪಡೆದು ವಿವಿಧ ಹುದ್ದೆಗಳನ್ನು ಅಲಂಕರಿಸುತ್ತಿದೆ ಎಂದರು.
ಜಿಲ್ಲಾ ಬಂಜಾರ ಸಂಘದ ರಾಜು ನಾಯಕ್​ ಮಾತನಾಡಿ, -ತಾರತಮ್ಯವಿಲ್ಲದೆ ಮಾನವೀಯ ಮೌಲ್ಯ ಸಾರಿದ ಮಹಾಸಂತರು ಎಂದರು. ಉಪಾಧ್ಯಕ್ಷ ಶೆಟ್ಟಿ ನಾಯಕ್​ ಮಾತನಾಡಿ, ಸೇವಾಲಾಲರು ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿದ್ದು, ಅವರ ಸ್ಮರಣಾರ್ಥ ಹಲವು ಸ್ಥಳಗಳಲ್ಲಿ ದೇವಾಲಯಗಳು ನಿಮಾರ್ಣಗೊಂಡಿವೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net