

ಸೇಡಂ: ರಾಷ್ಟ್ರಕೂಟರ ನಾಡು ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಸಾಕಷ್ಟು ಶ್ರೀಮಂತಿಕೆಯಿಂದ ಕೂಡಿದ್ದು, ಈ ನೆಲದ ಸಾಧಕ ಪತ್ರಕರ್ತರಿಗೆ ಪ್ರಶಸ್ತಿಗಳು ಲಭಿಸಿದ್ದು ಸಂತಸ ತಂದಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದರು. ನಗರದಲ್ಲಿ ಶನಿವಾರ ವಿವಿಧ ಪ್ರಶಸ್ತಿ ಪುರಸತ ಪತ್ರಕರ್ತರಾದ ಪ್ರಭಾಕರ ಜೋಶಿ, ಮಹಿಪಾಲರೆಡ್ಡಿ ಮುನ್ನೂರ, ಶರಣು ಮಹಾಗಾಂವ್, ಸಿದ್ದಯ್ಯಸ್ವಾಮಿ ಅವರನ್ನು ವಿಶೇಷವಾಗಿ ಸತ್ಕರಿಸಿ ಮಾತನಾಡಿ, ಇಲ್ಲಿ ಜನ್ಮ ತಾಳಿದ ಅನೇಕರು ರಾಜ್ಯದ ನಾನಾ ಭಾಗಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ನಮ್ಮ ನೆಲದಲ್ಲಿ ಇದ್ದುಕೊಂಡು ಸಮಾಜಕ್ಕೆ ತಮ್ಮದೆ ಕೊಡುಗೆ ನೀಡಿರುವ ನಾಲ್ವರು ಸಾಧಕರಿಗೆ ಪ್ರಶಸ್ತಿ ಲಭಿಸಿದ್ದು ಸಂತಸ ತಂದಿದೆ ಎಂದರು. ಹಿರಿಯ ಪತ್ರಕರ್ತರಾದ ಪ್ರಭಾಕರ ಜೋಶಿ, ಮಹಿಪಾಲರೆಡ್ಡಿ ಮುನ್ನೂರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪತ್ರಕರ್ತ ಸಂದ ಅಧ್ಯಕ್ಷ ಶರಣು ಮಹಾಗಾಂವ್, ಪ್ರಧಾನ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಆಡಕಿ, ಕೆರಳ್ಳಿ ಗುರುನಾಥರೆಡ್ಡಿ ಪ್ರತಿಷ್ಠಾನದ ಅಧ್ಯಕ್ಷ ಸಿದ್ದಪ್ಪ ತಳ್ಳಳ್ಳಿ, ಬಿಜೆಪಿ ಜಿಲ್ಲಾ ಉಪಾಧ್ಯೆ ಸಂತೋಷಿರಾಣಿ ಪಾಟೀಲ್ ತೆಲ್ಕೂರ, ಕಾರ್ಯದರ್ಶಿ ಓಂಪ್ರಕಾಶ ಪಾಟೀಲ್, ತಾಲೂಕು ಅಧ್ಯಕ್ಷ ಶರಣು ಮೆಡಿಕಲ್, ಪ್ರಧಾನ ಕಾರ್ಯದರ್ಶಿಗಳಾದ ತಿರುಪತಿ ಮದಕಲ್, ರಾವೇಂದ್ರ ಮೆಕಾನಿಕ್, ಡಾ.ರಮೇಶ ಐನಾಪುರ, ನಾಗಪ್ಪ ಕೊಳ್ಳಿ, ರವೀಂದ್ರ ಭಂಟನಹಳ್ಳಿ, ನಾಗಯ್ಯಸ್ವಾಮಿ ಬೊಮ್ನಳ್ಳಿ, ಬನ್ನಪ್ಪ ಬಿ.ಕೆ, ಅಂಜಯ್ಯಗೌಡ್ಸ್, ಪ್ರಭುಲಿಂಗಯ್ಯಸ್ವಾಮಿ, ರೇವಣಸಿದ್ದಪ್ಪ ಬಿರಾದಾರ ಇತರರಿದ್ದರು.