ಮುಳಬಾಗಿಲು:ಜನಗಣತಿ ಸಿಬ್ಬಂದಿಗೆ ಅಗತ್ಯ ಸಾಮಗ್ರಿಗಳನ್ನು ತಾಲೂಕು ಆಡಳಿತ ಸೋಮವಾರ ಸಂಜೆ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿತು.census staff
ಜನಗಣತಿ ಮಾಡುವ ಗಣತಿದಾರರಿಗೆ ಬಿಸಿಲಿನ ಕ್ಯಾಪ್, ಪ್ಯಾಡ್, ಸ್ಕೆಚ್ ಸೇರಿ ಹಲವು ಅಗತ್ಯ ವಸ್ತುಗಳ ಕಿಟ್ ಬಿಡುಗಡೆಯಾಗದಿರುವ ಬಗ್ಗೆ ಭಾನುವಾರ ವಿಜಯವಾಣಿಯಲ್ಲಿ "ಜನಗಣತಿ ಸಿಬ್ಬಂದಿಗೆ ಬಿಸಿಲಿನ ಶಿಕ್ಷೆ' ಶೀರ್ಷಿಕೆಯಡಿ ಪ್ರಕಟಗೊಂಡ ವರದಿ ಬೆನ್ನಲ್ಲೇ ಸರ್ಕಾರ ಕೊನೆಗೂ ಜನಗಣತಿ ಸಿಬ್ಬಂದಿಗೆ ಅಗತ್ಯ ಸಾಮಗ್ರಿಗಳುಳ್ಳ ಕಿಟ್ ವಿತರಿಸುವ ಕಾರ್ಯ ಮಾಡಿದೆ.
ನಿಯೋಜಿತ ಸಿಬ್ಬಂದಿಗೆ ಸರ್ಕಾರ ಮೂಲ ಸಾಮಗ್ರಿಗಳನ್ನೇ ನೀಡಿಲ್ಲ, 15ನೇ ತಾರೀಖಿನಿಂದ ಕೆಲಸ ಶುರುವಾಗಿದ್ರೂ ಪರ್ಮನೆಂಟ್ ಮಾರ್ಕರ್, ನಕ್ಷೆ ತಯಾರಿಕಾ ಹಾಳೆ, ಬ್ಯಾಗ್, ಹಾಗೂ ಛತ್ರಿಗಳನ್ನು ಇನ್ನೂ ಸರಬರಾಜು ಮಾಡಿಲ್ಲ.
ಬಿಸಿಲಿನಲ್ಲಿ ಪರದಾಟ 35 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನದಲ್ಲಿ ಛತ್ರಿ ಇಲ್ಲದೆ ಸಿಬ್ಬಂದಿ ಮನೆ ಮನೆಗೆ ತೆರಳಬೇಕಿದೆ. ಹಾಗಾಗಿ ಸಿಬ್ಬಂದಿ ಸ್ವಂತ ಹಣದಲ್ಲಿ ಪೆನ್ನು, ಮಾರ್ಕರ್ ಖರೀದಿಸಿ ಕೆಲಸ ಮಾಡುತ್ತಿದ್ದಾರೆ ಎಂಬ ವರದಿ ನಂತರ ಗಣತಿ ಕಾರ್ಯ ಆರಂಭಗೊಂಡ 14ನೇ ದಿನ ಜನಗಣತಿ ಕಿಟ್ ಭಾಗ್ಯ ಸಿಕ್ಕಿದೆ.