ಬಂಗಾರಪೇಟೆ: ಸುಮಾರು 80ನೇ ವರ್ಷದ ಐತಿಹಾಸಿಕ ಶ್ರೀ ದ್ರೌಪದಾಂಬಾ, ಧರ್ಮರಾಯಸ್ವಾಮಿಯ ಮಲ್ಲಿಗೆ ಹೂವಿನ ಕರಗ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಅದ್ದೂರಿಯಾಗಿ ನೆರವೇರಿತು.
ಶನಿವಾರ ರಾತ್ರಿ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಗರ್ಭಗುಡಿಯಿಂದ ಕರಗ ಹೊರಬರುತ್ತಿದ್ದಂತೆಯೇ ದೇವಸ್ಥಾನ ಆವರಣದಲ್ಲಿ ಗೋವಿಂದ, ಗೋವಿಂದ ಎಂಬ ನಾಮಸ್ಮರಣೆ ಮೊಳಗಿತು. ಭಕ್ತರು, ವೀರಕುಮಾರರು ಹಾಗೂ ಮಹಿಳೆಯರು ಭಕ್ತಿ ಪರವಶತೆಯಲ್ಲಿ ಕರಗದ ದರ್ಶನ ಪಡೆದರು.jasmine flower
ಕರಗದ ಪೂಜಾರಿ ಕೃಷ್ಣಮೂರ್ತಿ ಕರಗ ಎತ್ತಿದರು. ದೇವಸ್ಥಾನದ ಸುತ್ತ ಮೂರು ಪ್ರದಣೆ ಹಾಕಿದ ಕರಗವು ನಂತರ ಸಾರ್ವಜನಿಕ ವೇದಿಕೆಯತ್ತ ಆಗಮಿಸಿತು. ಅಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿವಿಧ ಭಂಗಿಗಳಲ್ಲಿ ನಡೆದ ಕರಗ ನೃತ್ಯ ಸಾವಿರಾರು ಜನರನ್ನು ಮಂತ್ರಮುಗ್ಧರನ್ನಾಗಿಸಿತು. ಭರತನಾಟ್ಯ ಶೈಲಿಯ ಹೆಜ್ಜೆಗಳು ಕರಗ ನೃತ್ಯಕ್ಕೆ ವಿಶೇಷ ಮೆರುಗು ನೀಡಿದವು.
ಕರಗವು ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸಂಚರಿಸಿತು. ಮಹಿಳೆಯರು ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು. ದೇವಾಲಯದ ಆವರಣದಲ್ಲಿ ಸಿದ್ಧಪಡಿಸಿದ್ದ ಅಗ್ನಿಕುಂಡದಲ್ಲಿ ಕರಗದ ಆಚರಣೆ ನಡೆಯಿತು.
ಕರಗ ಮಹೋತ್ಸವಕ್ಕೂ ಮುನ್ನ ಕರಗದ ಪೂಜಾರಿ ಕೃಷ್ಣಮೂರ್ತಿ ಕರಗದ ತವರು ಗ್ರಾಮವಾದ ಕಾರಹಳ್ಳಿಯಲ್ಲಿ ವಿಧಿವಿಧಾನಗಳೊಂದಿಗೆ ಮೈ ತುಂಬಿಸಿಕೊಂಡು ನಂತರ ಬಂಗಾರಪೇಟೆಗೆ ಆಗಮಿಸಿ ಕರಗ ಎತ್ತಿದರು. ಇದು ಕರಗ ಸಂಪ್ರದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.
ಕರಗದ ಇತಿಹಾಸದ ಮೆಲುಕು: ಕರಗ ಮಹೋತ್ಸವವು ಕೇವಲ ಹಬ್ಬವಲ್ಲ. ಇದು ಧರ್ಮ, ಶಕ್ತಿ ಮತ್ತು ಜನಪದ ಸಂಸತಿಯ ಪ್ರತಿಕವಾಗಿದೆ. ಮಹಾಭಾರತ ಕಾಲದ ದ್ರೌಪದಿ ಅಮ್ಮನ ಆರಾಧನೆಗೆ ಸಂಬಂಧಿಸಿದ ಈ ಆಚರಣೆ ದಣ ಕರ್ನಾಟಕದ ಅನೇಕ ಭಾಗಗಳಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಬಂಗಾರಪೇಟೆಯ ಕರಗವೂ ಅದೇ ಪರಂಪರೆಯ ಒಂದು ಮಹತ್ವದ ಕೊಂಡಿಯಾಗಿದ್ದು, ಸ್ಥಳಿಯ ಜನರ ಭಕ್ತಿ ಮತ್ತು ಐಕ್ಯತೆಯ ಸಂಕೇತವಾಗಿದೆ.
ಸಂಸದ ಮಲ್ಲೆಶ್ ಬಾಬು, ಮಾಜಿ ಸಂಸದ ಎಸ್.ಮುನಿಸ್ವಾಮಿ, ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯ ಗೋವಿಂದ, ಪಲ್ಲವಿ ಮಣಿ, ಎಲ್.ಎ.ವಿಜಯಕುಮಾರ್, ಚಿನ್ನವೆಂಕಟೇಶ್, ನಾರಾಯಣ ಇದ್ದರು.