

ವಿಜಯಪುರ :
ಶರಣರ ಇಷ್ಟಾರ್ಥಗಳನ್ನು ಈಡೇರಿಸುವ ಪರವಸ್ತು ಇಷ್ಟಲಿಂಗ. ನಮ್ಮಲ್ಲಿರುವ ಪ್ರಾಣಲಿಂಗವನ್ನೇ ಗುರುವಿನ ಮೂಲಕ ಕರಸ್ಥಳದಲ್ಲಿ ಪಡೆದು ಇಷ್ಟಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ. ಶರಣರು ಇಷ್ಟಲಿಂಗದ ಹೊರತಾಗಿ ಬೇರಾವ ದೇವತೆಗಳನ್ನೂ ಪೂಜಿಸುವುದಿಲ್ಲ ಎಂದು ಕೂಡಲಸಂಗಮದ ಶ್ರೀ ಪ್ರಭುಲಿಂಗ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಶ್ರೀ ನಗರೇಶ್ವರ ಸ್ವಾಮಿ ಜ್ಞಾನ ಮಂದಿರದಲ್ಲಿ ರಾಷ್ಟ್ರೀಯ ಬಸವದಳ, ನಗರ್ತ ಯುವಕ ಸಂಘ, ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ, ಅಕ್ಕನ ಬಳಗ, ನಗರ್ತ ಮಹಿಳಾ ಸಂಘ, ಮಹಂತಿನಮಠ, ಶ್ರೀ ಸರೋವರ ಗಣಪತಿ ದೇವಾಲಯ ಸಮಿತಿ, ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಕೋರಮಂಗಲ ರುದ್ರಪ್ಪನವರ ಟ್ರಸ್ಟ್ನಿಂದ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿ ಮಾತನಾಡಿದರು.
ರಾಷ್ಟ್ರೀಯ ಬಸವದಳದ ಮ.ಜಯದೇವ್ ಮಾತನಾಡಿ, ಅಷ್ಟವಿಧ ಆಚರಣೆ, ಲಿಂಗಸ್ತವನ, ಲಿಂಗಧ್ಯಾನ, ತ್ರಾಟಕ ಯೋಗದಿಂದ ಲಿಂಗಾನುಸಂಧಾನ, ಲಿಂಗ ಕರುಣೋದಕ ಹಾಗೂ ಲಿಂಗ ಪ್ರಸಾದದ ಮೂಲಕ ಐದು ವಿಧಗಳಲ್ಲಿ ಇಷ್ಟಲಿಂಗ ಪೂಜೆಯನ್ನು ನೆರವೇರಿಸಲಾಗುತ್ತದೆ ಎಂದರು.
ರಾಷ್ಟ್ರೀಯ ಬಸವದಳದ ಬೇಕರಿ ಶಿವಣ್ಣ, ಶರಣಪ್ಪ, ಶ್ರೀ ವೀರಭದ್ರ ಸ್ವಾಮಿ ಗೋಷ್ಠಿ ಅಕ್ಕನ ಬಳಗದ ಸಂಚಾಲಕ ಮ. ಸುರೇಶ್ ಬಾಬು, ಉಪಾಧ್ಯಕ್ಷೆ ಅಂಬಾ ಭವಾನಿ, ಕೋರಮಂಗಲ ರುದ್ರಪ್ಪ ಟ್ರಸ್ಟ್ ಅಧ್ಯಕ್ಷ ಸಿ.ಭಾಸ್ಕರ್, ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ದೀಪಾ ಮುರಳೀಧರ್, ಯುವಕ ಸಂಘದ ಖಜಾಂಚಿ ಎ.ಮಧು, ಶರಣ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಡಪದ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಭಾರತಿ ಪ್ರಭುದೇವ್, ಎಎಸ್ವಿಎನ್ವಿ ಸಂಘದ ನಿರ್ದೇಶಕಿ ಸುವರ್ಣ ಶಿವಕುಮಾರ್, ಬಾಬು ರಾಜೇಂದ್ರ ಪ್ರಸಾದ್, ನಿವೃತ್ತ ಆಯುಕ್ತ ವಿ. ಶಿವಕುಮಾರ್,
ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷ ಚಿ.ಮಾ.ಸುಧಾಕರ್, ಸುಮಂತ, ಪ್ರಭುದೇವ್ ಇದ್ದರು.
ಇದೇ ವೇಳೆ ವಿಶ್ವಗುರು ಬಸವಣ್ಣ ಹಾಗೂ ದಾಸೋಹ ಮೂರ್ತಿ ನೀಲಾಂಬಿಕೆ ತಾಯಿಯ 831ನೇ ಲಿಂಗೈಕ್ಯ ಸಂಸ್ಮರಣೆ ಆಚರಿಸಲಾಯಿತು. ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.