ಡಾ.ಮಲ್ಲಿಕಾರ್ಜುನ ಖರ್ಗೆಗೆ ಅವಮಾನ ಹೀನ ಕೃತ್ಯ

ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಎಚ್​.ಟಿ.ಪೋತೆ, ಡಾ.ಜೆ.ಎಸ್​.ಪಾಟೀಲ್​, ಡಾ.ಸೂರ್ಯಕಾಂತ ಸುಜ್ಯಾತ್​, ಡಾ.ಶಿವರಂಜನ ಸತ್ಯಂಪೇಟೆ ಇದ್ದರು.
ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಎಚ್​.ಟಿ.ಪೋತೆ, ಡಾ.ಜೆ.ಎಸ್​.ಪಾಟೀಲ್​, ಡಾ.ಸೂರ್ಯಕಾಂತ ಸುಜ್ಯಾತ್​, ಡಾ.ಶಿವರಂಜನ ಸತ್ಯಂಪೇಟೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್​.ಟಿ.ಪೋತೆ ಟೀಕೆ
  • ಗುಲ್ಬರ್ಗ ವಿವಿಯಲ್ಲಿ ಉಪನ್ಯಾಸ ಕಾರ್ಯಕ್ರಮ
ಕಲಬುರಗಿ: ಡಾ.ಬಿ.ಆರ್​.ಅಂಬೇಡ್ಕರ್​ ಶೋಷಿತರಿಗೆ ಮಾತ್ರ ಸಂವಿಧಾನ ಬರೆದಿಲ್ಲ, ಪ್ರತಿ ವ್ಯಕ್ತಿಯೂ ಸಂವಿಧಾನದ ಸೌಲಭ್ಯ ಪಡೆಯುತ್ತಿದ್ದಾನೆ. ಸಂವಿಧಾನ ರಕ್ಷಕರಾಗಿ ಶ್ರಮಿಸುತ್ತಿರುವ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಮಾನಿಸಿರುವುದು ಬುದ್ಧ-ಬಸವ-ಗಾಂಧಿ ಹಾಗೂ ಡಾ.ಅಂಬೇಡ್ಕರ್​ ನೆಲದಲ್ಲಿ ನಡೆದ ಹೀನ ಕೃತ್ಯವಾಗಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್​, ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್​.ಟಿ.ಪೋತೆ ಹೇಳಿದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಮತ್ತು ಅಸ್ಪಶ್ಯತೆ: ಸಮಕಾಲೀನ ತಲ್ಲಣಗಳು ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಹುಟ್ಟಿನಿಂದ ಸಂಕಟ, ಅವಮಾನ, ಅಪಮಾನ ಅನುಭವಿಸಿದ ಡಾ.ಬಿ.ಆರ್​.ಅಂಬೇಡ್ಕರ್​ ಅವರನ್ನು ಇಂದಿಗೂ ಅವಮಾನಿಸಲಾಗುತ್ತಿದೆ. ಸಾಂಪ್ರದಾಯವಾದಿಗಳ ವ್ಯವಸ್ಥೆ ಮತ್ತು ಗುಲಾಮಗಿರಿಯಿಂದ ಹೊರಬಂದು ಅನ್ಯಾಯ, ಅವಮಾನ ಖಂಡಿಸದಿದ್ದರೆ ಶೋಷಣೆಯಿಂದ ಮುಕ್ತಿ ಸಾಧ್ಯವಿಲ್ಲ ಎಂದರು.
ಶರಣ ಸಾಹಿತಿ ಡಾ.ಜೆ.ಎಸ್​.ಪಾಟೀಲ್​ ಉಪನ್ಯಾಸ ನೀಡಿ, ಭಾರತ ಸಂರ್ಷ ಮತ್ತು ಚಳವಳಿಗಳ ನೆಲ. ಮನುಸ್ಮತಿ ನೆಲೆಯಲ್ಲಿ ದೇವರು ಮತ್ತು ಧರ್ಮದ ಹೆಸರಿನಲ್ಲಿ ಅಸ್ಪಶ್ಯರ ಮೇಲೆ ನಿರಂತರ ಶೋಷಣೆ ನಡೆಯುತ್ತಿದೆ. ಬುದ್ಧ, ಬಸವಣ್ಣನ ಕಾಲದಿಂದಲೂ ಸಮ ಸಮಾಜ, ಶೋಷಿತರ ಏಳಿಗೆಗಾಗಿ ಚಳವಳಿ ನಡೆದಿವೆ. ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ತಾರತಮ್ಯ ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ಡಾ.ಎಂ.ಬಿ.ಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಂದರ್ಶಕ ಪ್ರಾಧ್ಯಾಪಕ ಡಾ.ಸೂರ್ಯಕಾಂತ್​ ಸುಜ್ಯಾತ್​, ಡಾ.ಶಿವರಂಜನ ಸತ್ಯಂಪೇಟೆ ಇತರರಿದ್ದರು. ಸಂಗೀತ ವಿಭಾಗದ ಅಧ್ಯಾಪಕಿ ಡಾ.ಜಯ ದಾನಮ್ಮ ವಚನ ಗಾಯನ ಪ್ರಸ್ತುತಪಡಿಸಿದರು. ಡಾ.ಶಿವಗಂಗಾ ಬಿಲಗುಂದಿ ವಂದಿಸಿದರು. ಡಾ.ನಂದಕುಮಾರ ನಿರ್ವಹಿಸಿದರು.
"

ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರುದ್ಯೋಗವಿದೆ. 371(ಜೆ) ತಿದ್ದುಪಡಿ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಅಭಿವೃದ್ಧಿಗೆ ಹಲವು ನಾಯಕರ ಹೋರಾಟವಿದೆ. ರಾಷ್ಟ್ರ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಶುಚಿಗೊಳಿಸಿರುವುದು ದೇಶಕ್ಕೆ ಮಾಡಿದ ಅಪಮಾನ. ರಾಜ್ಯ ಮತ್ತು ರಾಷ್ಟ್ರದ ನಾಯಕರು ಈ ಕೃತ್ಯದ ವಿರುದ್ಧ ಮಾತನಾಡದೆ ಮೌನವಹಿಸಿರುವುದು ಬೇಸರದ ಸಂಗತಿ.

— > ಡಾ.ಜೆ.ಎಸ್​.ಪಾಟೀಲ್​, ವೈಚಾರಿಕ ಚಿಂತಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net