ಪತ್ನಿ ಯಶೋದಾ (23) ಳನ್ನು ಪತಿ ಪುನೀತ್ ಹತ್ಯೆಮಾಡಿದ್ದಾನೆ. ಏಳು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಪುನೀತ್ ಮತ್ತು ಯಶೋದಾ ಕೆಲಕಾಲ ಸುಖ-ಜೀವನ ನಡೆಸಿದ್ದರಾದರೂ ಆನಂತರ ಪತ್ನಿಯ ನಡೆವಳಿಕೆಯ ಬಗ್ಗೆ ಅನುಮಾನ ಪಟ್ಟು ಪ್ರತಿ ನಿತ್ಯ ಹಿಂಸಿಸುತ್ತಿದ್ದ ಎನ್ನಲಾಗಿದೆ. ಬುಧವಾರ ರಾತ್ರಿ ಸಹ ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ, ಪುನೀತ್ ಯಶೋದಾಳನ್ನು ನೇಣು ಬಿಗಿದು ಕೊಲೆಗೈದಿದ್ದಾನೆ. ದಂಪತಿ ಕಲಹದ ಬಗ್ಗೆ ಅರಿವಿದ್ದ ಯಶೋದಾ ಗೆಳತಿ ಅರ್ಪಿತಾ ಪೊಲೀಸರಿಗೆ ಪುನೀತ್ ವಿರುದ್ಧ ದೂರು ನೀಡಿದ್ದಾರೆ.