ರಾಜ್ಯದಲ್ಲಿ ಅತಿ ಹೆಚ್ಚು ಬಡಾವಣೆ ನಿರ್ಮಾಣ ಮಾಡಿದ ಹೌಸಿಂಗ್ ಬೋರ್ಡ್: ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ; ಸೂರಿಲ್ಲದವರಿಗೆ ಸೂರು ನೀಡಲು ಕಂಕಣಬದ್ಧವಾದ ಸರ್ಕಾರ

-ಬಿ.ಝಡ್.ಜಮೀರ್ ಅಹಮದ್,
-ಬಿ.ಝಡ್.ಜಮೀರ್ ಅಹಮದ್,
Published on

ಪ್ರಮುಖ ಮುಖ್ಯಾಂಶಗಳು

  • 943.46 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ
  • ಸೂರ್ಯನಗರದ 4ನೇ ಹಂತದಲ್ಲಿ ನಿರ್ಮಾಣ
ಬೆಂಗಳೂರು:
ರಾಜ್ಯದಲ್ಲಿ ಅತಿ ಹೆಚ್ಚು ಹೌಸಿಂಗ್ ಬೋರ್ಡ್ ಬಡಾವಣೆಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ಕರ್ನಾಟಕ ಗೃಹ ಮಂಡಳಿಯದ್ದು. ಮನೆ ಮತ್ತು ನಿವೇಶನವನ್ನು ಮಾತ್ರವೇ ಅಭಿವೃದ್ಧಿ ಮಾಡಿ ಕೊಡುತ್ತಿದ್ದ ಕರ್ನಾಟಕ ಗೃಹ ಮಂಡಳಿ, ಹೊಸ ಸಾಹಸಕ್ಕೆ ಕೈ ಹಾಕಿದ್ದು, ಅಂತಾರಾಷ್ಟ್ರೀಯ ಕ್ರೀಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದೆ. ಈ ಹೊಸ ಯೋಜನೆ ಬೆಂಗಳೂರಿಗೆ ಹೊಸ ಮೆರಗು ತರಲಿದೆ. ಈ ಮಹತ್ವಾಕಾಂಕ್ಷಿಯ ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಮೇ 23ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸಾಮಾಜಿಕ ಬದ್ಧತೆ ಹಾಗೂ ಕ್ರೀಡಾ ಸ್ಪರ್ಧಿಗಳಿಗೆ ಉತ್ತೇಜಿಸುವ ಸಲುವಾಗಿ ಕರ್ನಾಟಕ ಗೃಹ ಮಂಡಳಿಯು, 943.46 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ಸೂರ್ಯನಗರದ 4ನೇ ಹಂತದಲ್ಲಿ ನಿರ್ಮಾಣ ಮಾಡಲು ಯೋಜಿಸಿದೆ. ಕ್ರೀಡಾ ಪಟುಗಳಿಗೆ ಅನುಕೂಲವಾಗುವಂತೆ ಕೆ.ಹೆಚ್.ಬಿ. ಸೂರ್ಯ ಕ್ರೀಡಾ ಗ್ರಾಮವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಸ್ವಂತ ಸೂರು ನಿರ್ಮಿಸಿಕೊಳ್ಳುವ ನಿವೇಶನಕ್ಕಾಗಿ ಕಾದಿರುವ ಕೆಳ, ಮಧ್ಯಮ ಸೇರಿದಂತೆ ವಿವಿಧ ವರ್ಗದ ಸಾವಿರಾರು ಜನರಿಗೆ ಕರ್ನಾಟಕ ಗೃಹ ಮಂಡಳಿಯಿಂದ ನಿವೇಶನ ನೀಡುವ ಯೋಜನೆ ರೂಪಿಸಲಾಗಿದೆ.
ಹಲವು ಯೋಜನೆಗೆ ಚಾಲನೆ:
ಇದೇ ಸಂದರ್ಭದಲ್ಲಿ ನಮ್ಮ ಮನೆ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ಸೂರ್ಯ ಶೈನ್, ಸೂರ್ಯ ಡಿವೈನ್ ವಸತಿ ಸಮುಚ್ಛಾಯ ಕಾಮಗಾರಿಗಳಿಗೂ ಶಂಕುಸ್ಥಾಪನೆ ಮಾಡಲಿದ್ದಾರೆ. ಅಲ್ಲದೆ, ವಸತಿಯೋಜನೆಗೆ ಭೂಮಿ ನೀಡಿದ ಭೂ ಮಾಲೀಕರುಗಳಿಗೆ ಸಾಂಕೇತಿಕ ನಿವೇಶನ ಹಂಚಿಕೆ ಮತ್ತು ಲಾಟರಿ ಮುಖಂಆತರ ಸಾರ್ವಜನಿಕ ಅರ್ಜಿದಾರರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.
ಜನರಿಗೆ 40331 ಸ್ವತ್ತುಗಳ ಹಂಚಿಕೆ:
ಹಿಂದಿನ ಈ ಸರ್ಕಾರದ ಅವಧಿಯಲ್ಲಿ 2013 ರಿಂದ 2018 ರ ಅವಧಿಯಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಒಟ್ಟು 37,180 ನಿವೇಶನಗಳು 3151 ಮನೆಗಳು ಹಾಗೂ ವಸತಿ ಸಮುಚ್ಚಯವನ್ನು ಒಳಗೊಂಡಂತೆ ಒಟ್ಟು 40,331 ಸ್ವತ್ತುಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದೆ.
ನಿವೇಶನ ಹಂಚಿಕೆ ಮಾಡಲು ಕ್ರಮ:
ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಈ ಸರ್ಕಾರದ ಅವಧಿಯಲ್ಲಿ 2023 ರಿಂದ ಇಲ್ಲಿಯವರೆಗೆ ಕರ್ನಾಟಕ ಗೃಹ ಮಂಡಳಿ ವತಿಯಿಂದ ಒಟ್ಟು 45645 ನಿವೇಶನಗಳು ಹಾಗೂ 134 ಫ್ಲಾಟ್ಸ್, ಮನೆಗಳು ಒಳಗೊಂಡಂತೆ ಒಟ್ಟು 45779 ಸ್ವತ್ತುಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದೆ. ಅಲ್ಲದೇ, ಈ ಸರ್ಕಾರದ ಮುಂದಿನ ಅವಧಿಯಲ್ಲಿ ಒಟ್ಟು 30,000 ಸಾರ್ವಜನಿಕರಿಗೆ ಹಾಗೂ 50,000 ಸಮುದಾಯದ ಶ್ರಮಿಕರಿಗೆ ನಿವೇಶನ ನೀಡಲು ಹೌಸಿಂಗ್ ಬೋರ್ಡ್ ಕ್ರಮ ವಹಿಸಿದೆ.
ವಿಶೇಷ ಯೋಜನೆಗಳು:
ಸಮಾಜದ ಸಮುದಾಯದ ಶ್ರಮಿಕರಿಗಾಗಿ ಮುಖ್ಯ ಮಂತ್ರಿಯವರ ನಮ್ಮ ಮನೆ ಯೋಜನೆಯಡಿ 50 ಸಾವಿರ ನಿವೇಶನಗಳನ್ನು ಶೇ.50 ರ ರಿಯಾಯಿತಿ ದರದಲ್ಲಿ ನೀಡಲು 2 ವರ್ಷದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಗುರಿ ಹೊಂದಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಮುದಾಯದ ಶ್ರಮಿಕರಿಗೆ ನಿವೇಶನ ಮತ್ತು ಮನೆ ಪಡೆಯಲು ಕಷ್ಟಸಾಧ್ಯವಾದ ಕಾರಣ ಇವರ ಅನುಕೂಲಕ್ಕಾಗಿ ಬೆಂಗಳೂರು ವ್ಯಾಪ್ತಿಯಲ್ಲಿ ಇರುವ ಮಂಡಳಿ ಬಡಾವಣೆಗಳಲ್ಲಿ 2 ಸಾವಿರ ಬಹುಮಹಡಿ ವಸತಿ ಸಮುಚ್ಚಯ ನಿರ್ಮಿಸಿ ಕೈಗೆಟಕುವ ವಸತಿ ಯೋಜನೆ (ಅ್ಛ್ಛಟ್ಟಚ್ಝಿಛಿ ಏಟ್ಠಜ್ಞಿಜ) ಯೋಜನೆ ಕೈಗೊಳ್ಳಲು ಉದ್ದೇಶಿಸಲಾಗಿದೆ.
--
ಗೃಹ ಮಂಡಳಿ ಇತಿಹಾಸ:
1956 ರಲ್ಲಿ ಮೈಸೂರು ಹೌಸಿಂಗ್ ಬೋರ್ಡ್ ಆಕ್ಟ್ ಜಾರಿಗೆ ತರುವುದರೊಂದಿಗೆ ಮೈಸೂರು ಹೌಸಿಂಗ್ ಬೋರ್ಡ್ ಸ್ಥಾಪಿಸಿ ಕಾರ್ಖಾನೆ ನೌಕರರಿಗಷ್ಟೇ ಅಲ್ಲದೆ ಸಮಾಜದ ಇತರೆ ವರ್ಗದವರಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗ (ಉಖ), ಅಲ್ಪ ಆದಾಯ ವರ್ಗಕ್ಕೂ (ಔಐಎ) ಸಹ ಮನೆ ಹಾಗೂ ನಿವೇಶನವನ್ನು ಕಲ್ಪಿಸಲಾಗುತ್ತಿತ್ತು.
1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ಆಧಾರದ ಮೇಲೆ ಏಕೀಕೃತ ಕರ್ನಾಟಕ ಅಸ್ಥಿತ್ವಕ್ಕೆ ಬಂದ ನಂತರ, ಕರ್ನಾಟಕ ಹೌಸಿಂಗ್ ಬೋರ್ಡ್ ಆಕ್ಟ್ 1962 ಜಾರಿಗೆ ಬಂದು ಅಲ್ಲಿಂದ ಕರ್ನಾಟಕ ಗೃಹ ಮಂಡಳಿ ಆರಂಭವಾಗಿ ಸಮಾಜದ ಎಲ್ಲಾ ವರ್ಗದ ಜನರಿಗೆ ನಿವೇಶನ ಮತ್ತು ಮನೆಗಳನ್ನು ನೀಡುವುದರ ಮೂಲಕ ವಸತಿಯನ್ನು ಕಲ್ಪಿಸಲಾಗುತ್ತಿದೆ.
ಖ್ಯಾತ ಕವಿ ಕೆ.ಎಸ್. ನರಸಿಂಹಸ್ವಾಮಿ ರವರು ಕರ್ನಾಟಕ ಗೃಹ ಮಂಡಳಿಯಲ್ಲಿ ಅಧೀಕ್ಷಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ 1970 ರಲ್ಲಿ ನಿವೃತ್ತಿಯಾಗಿರುವುದು ಹೆಮ್ಮೆಯ ವಿಷಯ. ಅಲ್ಲದೆ ಕರ್ನಾಟಕ ಕಂಡ ಹೆಮ್ಮೆಯ ಪರಿಸರ ವಾದಿ ಹಾಗೂ ವೃಕ್ಷ ಮಾತೆಯಾದ ಸಾಲು ಮರದ ತಿಮ್ಮಕ್ಕ ರವರಿಗೆ ಕರ್ನಾಟಕ ಗೃಹ ಮಂಡಳಿ ವತಿಯಿಂದ ಮಾರ್ಚ್ 2013 ರಲ್ಲಿ ಗೌರವ ಸೂಚಿತವಾಗಿ ಮನೆಯನ್ನು ನೀಡಲಾಗಿದೆ.
ಇಂದಿನ ಆಧುನಿಕತೆಗೆ ಅನುಗುಣವಾಗಿ ಆಧುನಿಕ ಮಾದರಿಯ ಮನೆಗಳು, ಬಹುಮಹಡಿ ವಸತಿ ಸಮುಚ್ಚಯ ನಿರ್ಮಾಣದ ಜೊತೆಗೆ ಮಂಡಳಿಯ ಆರ್ಥಿಕ ಸ್ಥಿತಿಯನ್ನು ಬಲವರ್ಧನೆಗೊಳಿಸಲು ವಾಣಿಜ್ಯ ಸಂಕೀರ್ಣಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳನ್ನು ಅಭಿವೃದ್ಧಿಪಡಿಸಿ ಬಡಾವಣೆ ನಿವಾಸಿಗಳಿಗೆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಇ- ಲಾಟರಿಗೆ ಸಿಎಂ ಚಾಲನೆ:
ಆನೇಕಲ್ ತಾಲೂಕಿನ ಸೂರ್ಯನಗರ 4ನೇ ಹಂತದಲ್ಲಿ ಅಭಿವೃದ್ಧಿಪಡಿಸಿರುವ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ’ಇ-ಲಾಟರಿ’ ಪ್ರಕ್ರಿಯೆಗೆ ಮೇ 23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಆರ್ಥಿಕ ಹಿಂದುಳಿದವರಿಗೆ
ಶೇ.50ರಷ್ಟು ನಿವೇಶನ:
ನಿವೇಶನ ಹಂಚಿಕೆಗೆ 2017-18ರಲ್ಲಿ ಅರ್ಜಿ ಕರೆದಿದ್ದರೂ, ನಾನಾ ತೊಡಕುಗಳು ಉಂಟಾಗಿತ್ತು. ಈಗ ಎಲ್ಲ ನಿವಾರಣೆಯಾದ ಬಳಿಕ ವಿವಿಧ ಅಳತೆಯ ನಿವೇಶನಗಳನ್ನು ನಿರ್ಮಾಣ ಮಾಡಲಾಗಿದೆ. ಚದರ ಅಡಿಗೆ 1425 ರಿಂದ 2,975 ರೂ ವರೆಗೆ ದರ ನಿಗದಿಪಡಿಸಲಾಗಿದೆ. ದರದಲ್ಲಿ ಆರ್ಥಿಕ ಹಿಂದುಳಿದ ವರ್ಗದವರಿಗೆ ಶೇ.50 ರಿಯಾಯಿತಿ ನೀಡಿದೆ.
50:50 ಅನುಪಾತದಲ್ಲಿ ಅಭಿವೃದ್ಧಿ:
ಆನೆಕಲ್ ತಾಲೂಕಿನ ಕಾಡುಜಕ್ಕನಹಳ್ಳಿ, ಇಂಡವಾಡಿ ಹಾಗೂ ಬಗ್ಗನದೊಡ್ಡಿ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 1938 ಎಕರೆ ಜಮೀನನ್ನು ಭೂಮಾಲೀಕರು ಮತ್ತು ಮಂಡಳಿ ನಡುವೆ 50:50 ಅನುಪಾತದಲ್ಲಿ ನಿವೇಶನ ಅಭಿವೃದ್ಧಿಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಈ ಪೈಕಿ ಸದ್ಯ 1200 ಎಕರೆಯಲ್ಲಿ ಬಡಾವಣೆಯನ್ನಾಗಿ ಅಭಿವೃದ್ಧಿಪಡಿಸಿದೆ. ಆರ್ಥಿಕವಾಗಿ ಹಿಂದುಳಿದ, ಅಲ್ಪ ಆದಾಯದ, ಮಧ್ಯಮ ಆದಾಯ, ಉನ್ನತ ಆದಾಯ 1 ಮತ್ತು 2 ಹೀಗೆ ಐದು ವರ್ಗಗಳಿಗೆ ವಿವಿಧ ಅಳತೆಯ ನಿವೇಶನ ನಿರ್ಮಾಣ ಮಾಡಿ ದರ ನಿಗದಿ ಮಾಡಿದೆ.
ಹಲವು ಯೋಜನೆಗಳು:
ಚಂದಾಪುರ-ಆನೇಕಲ್ ರಸ್ತೆಯಲ್ಲಿರುವ ಸೂರ್ಯನಗರ 1ನೇ ಹಂತದಲ್ಲಿ ಈಗಾಗಲೇ ಸುಮಾರು 101 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಫ್ಲ್ಯಾಟ್ ಗಳನ್ನು ಒದಗಿಸುವ ಮತ್ತು ’ಸೂರ್ಯ ಡಿವೈನ್’ ಎಂಬ ಎರಡು ಅಪಾರ್ಟ್‌ಮೆಂಟ್ ಯೋಜನೆಗಳನ್ನು ಆರಂಭಿಸಿದೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸೂರ್ಯನಗರ 2ನೇ ಹಂತ(ರಾಜಾಪುರ)ದಲ್ಲಿ ಸುಮಾರು ನಿವೇಶನಗಳನ್ನೂ ಹಂಚಿಕೆ ಮಾಡಿದೆ. ಈಗ ಸೂರ್ಯನಗರ 4ನೇ ಹಂತದಲ್ಲಿ ನಿವೇಶನ ಹಂಚಿಕೆ ಮಾಡಲು ಪ್ರಕ್ರಿಯೆ ಆರಂಭಿಸಲು ಮುಂದಾಗಿದೆ.

*ಮನೆ, ನಿವೇಶನ ಮಾತ್ರವೇ ಅಭಿವೃದ್ಧಿ ಮಾಡುತ್ತಿದ್ದ ಕರ್ನಾಟಕ ಗೃಹ ಮಂಡಳಿ (ಹೌಸಿಂಗ್ ಬೋರ್ಡ್) ಇದೇ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಹೆಜ್ಜೆ ಇಟ್ಟಿದೆ. ಬೆಂಗಳೂರಿನಲ್ಲಿ ಮತ್ತೊಂದು ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣ ಅಗತ್ಯವಿರುವುದನ್ನು ಮನಗಂಡು, 943.46 ಕೋಟಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ಸೂರ್ಯನಗರದ 4ನೇ ಹಂತದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

-ಬಿ.ಝಡ್.ಜಮೀರ್ ಅಹಮದ್, ವಸತಿ ಸಚಿವರು.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net