ವಡಗೇರಾ ತಾಲೂಕಿನ ಸುೇತ್ರ ಕೃಷ್ಣವೇಣಿ&ಭೀಮಾ ಸಂಗಮದಲ್ಲಿ ಶುಕ್ರವಾರ ಹಮ್ಮಿಕೊಂಡ 109ನೇ ಶಿವಾನುಭವ ಚಿಂತನಾಗೋಷ್ಠಿ ಕಾರ್ಯಕ್ರಮವನ್ನು ತುಮಕೂರಿನ ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿದರು. ಶ್ರೀ ಕರುಣೇಶ್ವರ ಶಿವಾಚಾರ್ಯ, ವೇಣುಗೋಪಾಲ್ ಗುರೂಜಿ, ವೇ.ವೀರಭದ್ರಯ್ಯ ಸ್ವಾಮಿ ದೇವಸೂಗೂರ, ಶಿವಯ್ಯ ಸ್ವಾಮಿ ಸಾತಕೇಡ ಇತರರಿದ್ದರು.
Published on:
Copied
Follow Us
ವಡಗೇರಾ: ನಮ್ಮ ಕರುನಾಡು ಅತ್ಯಂತ ಪವಿತ್ರ ಪುಣ್ಯ ಭೂಮಿಯಾಗಿದ್ದು, ಸಂತರು, ಶರಣರು, ಕವಿ&ಸಾಹಿತಿಗಳಿಂದ ಶೋಭಿಸುವ ದೇಶದಲ್ಲಿಯೇ ಅತ್ಯಂತ ಶ್ರೇಷ್ಠ ನಾಡು ನಮ್ಮದಾಗಿದೆ ಎಂದು ತುಮಕೂರ ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಶ್ರೀ ಶಿವಸಿದ್ಧೇಶ್ವರ ಮಹಾಸ್ವಾಮೀಜಿ ನುಡಿದರು.
ತಾಲೂಕಿನ ಸುೇತ್ರ ಕೃಷ್ಣವೇಣೆ&ಭೀಮಾ ಸಂಗಮದ ಸಂಗಮೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಹಮ್ಮಿಕೊಂಡ 109ನೇ ಶಿವಾನುಭವ ಚಿಂತನಾಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ಸಂದೇಶವನ್ನು ಉಲ್ಲೇಖಿಸಿದ ಅವರು, ಶುದ್ಧ ಮನಸ್ಸಿನಿಂದ ಮಾಡುವ ಕೆಲಸಗಳಿಂದಲೇ ಮನುಷ್ಯನು ಮುಕ್ತಿಹೊಂದಲು ಸಾಧ್ಯ. ಕಾಯಕವೇ ಶ್ರೇಷ್ಠವಾಗಿದ್ದು, ಈ ಭಾಗದ ಜನರು ತಮ್ಮ ಬದುಕಿನಲ್ಲಿ ತ್ಯಾಗ, ಪರಿಶ್ರಮ ಮತ್ತು ಸೇವಾ ಮನೋಭಾವಅಳವಡಿಸಿಕೊಂಡಾಗ ಸಮಾಜ ಪರಿವರ್ತನೆ ಸಾಧ್ಯವಾಗಲಿದೆ ಎಂದರು.
ನಮ್ಮ ಸಂಸತಿಯಲ್ಲಿ ಕಾವಿ ಪರಂಪರೆ ಪವಿತ್ರವಾಗಿ ಬೆಳೆದುಕೊಂಡಿದ್ದು, ಬಸವಣ್ಣನವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಷ್ಠೆಯಿಂದ ಕೆಲಸ ಮಾಡುವುದರ ಜತೆಗೆ, ದುಡಿದ ಸಂಪತ್ತಿನಲ್ಲಿ ಒಂದು ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿದಾಗ ಮಾತ್ರ ಬದುಕಿನ ಮೌಲ್ಯ ವೃದ್ಧಿಯಾಗಿ ಆತ್ಮತೃಪ್ತಿಯ ಜೀವನ ನಮ್ಮದಾಗಲಿದೆ ಎಂದರು.
ಇಂತಹ ಶಿವಾನುಭವ ಚಿಂತನಾ ಗೋಷ್ಠಿಗಳು ಮನುಷ್ಯನ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತವೆ. ಬಡತನ, ಮೂಢನಂಬಿಕೆ ಮತ್ತು ಅನಕ್ಷರತೆ ಇವುಗಳನ್ನು ದೂರ ಮಾಡಲು ಶಿಕ್ಷಣವೇ ಮುಖ್ಯ ಸಾಧನವಾಗಿದ್ದು, ಪ್ರತಿಯೊಬ್ಬರೂ ಶಿಕ್ಷಣ, ಸ್ವಚ್ಛತೆ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗಮೇಶ್ವರ ಮಠದ ಶ್ರೀ ಕರುಣೇಶ್ವರ ಶಿವಾಚಾರ್ಯರು ವಹಿಸಿದ್ದರು. ಈ ವೇಳೆ ರಾಮಕೃಷ್ಣ ಆಶ್ರಮದ ಶ್ರೀ ವೇಣುಗೋಪಾಲ್ ಗುರೂಜಿ, ವೇದಮೂರ್ತಿ ವೀರಭದ್ರಯ್ಯ ಸ್ವಾಮಿ ದೇವಸೂಗೂರ, ಶಿವಯ್ಯ ಸ್ವಾಮಿ ಸಾತಕೇಡ ಸೇರಿ ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.