ಕನ್ನಡದ ನಾಟಕ ಜಗತ್ತಿನ ಇತಿಹಾಸ ದೊಡ್ಡದು

ತುಮಕೂರಿನಲ್ಲಿ ಪ್ರಕಾಶರಾಜ್ ಅವರ ನಿರ್ದಿಗಂತ ತಂಡ ಪ್ರಾಜೆಕ್ಟ್ ಪಂಚತಂತ್ರ ಎಂಬ ನಾಟಕ ಪ್ರದರ್ಶಿತು.
ತುಮಕೂರಿನಲ್ಲಿ ಪ್ರಕಾಶರಾಜ್ ಅವರ ನಿರ್ದಿಗಂತ ತಂಡ ಪ್ರಾಜೆಕ್ಟ್ ಪಂಚತಂತ್ರ ಎಂಬ ನಾಟಕ ಪ್ರದರ್ಶಿತು.
Published on
ತುಮಕೂರು: ಕಥೆ, ಕಥೆಗೊಂದು ಉಪಕಥೆ, ಉಪಕಥೆಗೊಂದು ವ್ಯಾಖ್ಯಾನ ಹೀಗೆ ಕಥಾ ಜಗತ್ತನ್ನು ಲೇಖಕರು ಹಿಗ್ಗಿಸುತ್ತಲೇ ಇರುತ್ತಾರೆ. ಕನ್ನಡದ ನಾಟಕ ಜಗತ್ತಿಗೆ ದೊಡ್ಡ ಇತಿಹಾಸವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಅಭಿಪ್ರಾಯಪಟ್ಟರು.
ಕರ್ನಾಟಕ ನಾಟಕ ಅಕಾಡೆಮಿ, ಝೆನ್ ಟೀಮ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾ ನಾಟಕೋತ್ಸವದ ಅಂಗವಾಗಿ ನಡೆದ ನಿರ್ದಿಗಂತ ತಂಡ ಪ್ರಸ್ತುತಪಡಿಸಿದ ‘ಪ್ರಾಜೆಕ್ಟ ಪಂಚತಂತ್ರ’ ನಾಟಕ ಉದ್ಘಾಟಿಸಿ ವಾತನಾಡಿದರು.
ನಾಟಕಗಳ ಕಥಾ ವಸ್ತುಗಳು ಮುಂದಿನ ತಲೆವಾರನ್ನು ಪ್ರಭಾವಿಸುವಂತಿರಬೇಕು. ನಟರ ಆಂಗಿಕ ಅಭಿನಯ, ಪರಿಕರ, ಧ್ವನಿ ಬೆಳಕು ಹೀಗೆ ಎಲ್ಲ ಆಯಾಮಗಳಲ್ಲೂ ವೃತ್ತಿಪರತೆ ಮೆರೆಯುವಂತಾಗಬೇಕು. ಅಂತಹ ಪ್ರಯತ್ನವನ್ನು ಕನ್ನಡ ರಂಗಭೂಮಿ ವಾಡುತ್ತಲೇ ಇದೆ.
ನಾಟಕಗಳು ಹೊಸತನದಿಂದ ಕೂಡಿದ್ದು ಪ್ರತಿ ಪ್ರದರ್ಶನವೂ ಒಂದೊಂದು ಅರ್ಥ ಮೂಡುವಂತೆ ವಾಡುವ ಕೆಲಸವನ್ನು ನಿರ್ದೇಶಕರು ವಾಡಬೇಕು. ಆಗ ನಾಟಕ ಸೇರಿದಂತೆ ಯಾವುದೇ ಕೃತಿ ತಲೆವಾರುಗಳನ್ನು ಪ್ರಭಾವಿಸುತ್ತದೆ ಎಂದರು.
ಜಾನಪದ ಕಲಾವಿದ ಕಂಟಲಗೆರೆ ಸಣ್ಣ ಹೊನ್ನಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಇದ್ದರು.
01ಟಿಎಂಕೆ ನಾಟಕ ಪಂಚತಂತ್ರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net