ಜೂನ್ ೭ರಿಂದ ೧೫ರವರೆಗೆ ಸರಾಸರಿ ೪೫ ಮಿಮೀ ಬದಲು ೨೧ ಮಿಮೀ ಮಳೆಯಾಗಿದ್ದು, ಶೇ.೨೪ ಮಿಮೀ ಅಭಾವ. ಈ ನಡುವೆ ಆಷಾಢ ಮಾಸದ ಗಾಳಿ ವೇಗವೂ ವರ್ಷಧಾರೆ ದೂರ ಸರಿಯುವಂತೆ ಮಾಡಿದೆ. ಸುರಪುರ, ಕೊಡೇಕಲï, ಶಹಾಪುರ ತಾಲೂಕಿನ ಸಗರ, ಗೋಗಿ ವಲಯ ಮತ್ತು ವಡಗೇರಾ ವ್ಯಾಪ್ತಿಯ ಹಲವೆಡೆ ಮಳೆ ಪ್ರಮಾಣ ಹೆಚ್ಚಾಗಿದ್ದರೆ, ಯಾದಗಿರಿ ಮತ್ತು ಗುರುಮಠಕಲï ತಾಲೂಕುಗಳಲ್ಲಿ ಪ್ರಮಾಣ ಕಡಿಮೆ. ಮಳೆಯನ್ನೇ ನಂಬಿ ಬಿತ್ತಿದ ರೈತರು ಮುಗಿಲತ್ತ ಮುಖ ಮಾಡಿದ್ದು, ಮಳೆರಾಯ ಕೂಡಲೇ ಧರೆಗಿಳಿದರೆ ರೈತರು ಸ್ವಲ್ಪ ಮಟ್ಟಿಗಾದರೂ ಉಸಿರಾಡಬಹುದಾಗಿದೆ.