ಮಚ್ಚು ತೋರಿಸಿದ ಕೈಗೆ ಬಿತ್ತು ಕೋಳ!

The hand that showed the mace got a stick!
The hand that showed the mace got a stick!
Published on
ಚಿಂತಾಮಣಿ: ಬೆಂಗಳೂರು ಜೋಡಿ ರಸ್ತೆಯ ತಹಸೀಲ್ದಾರ್​ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್​ ಪೇದೆಗೆ ಸೋಮವಾರ ಬೆಳಗ್ಗೆ ಮಚ್ಚಿನಿಂದ ಕೊಲೆ ಮಾಡಲು ಯತ್ನಿಸಿದ ಆರೋಪಿಯನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಿಂತಾಮಣಿ ನಗರದ 4ನೇ ವಾರ್ಡ್​ನ ಟ್ಯಾಂಕ್​ ಬಂಡ್​ ರಸ್ತೆಯ ನಿವಾಸಿ ರಾಜೇಶ್​ ಕುಮಾರ್​ (37) ಬಂಧಿತ.
ಇಸ್ಪೀಟ್​, ಜೂಜಾಟ, ಮಟ್ಕಾ ಬಗ್ಗೆ ಮಾಹಿತಿ ಸಂಗ್ರಹಿಸಲು ಮತ್ತು ಶಾಲಾ ಕಾಲೇಜುಗಳ ಬಳಿ ಹೆಣ್ಣು ಮಕ್ಕಳ ಹಿಂದೆ ಓಡಾಡುವ ಪುಂಡರ ಪತ್ತೆಗೆ ನಗರಠಾಣೆ ಪೊಲೀಸ್​ ಪೇದೆ ಸುನಿಲ್​ ಕುಮಾರ್​ ಮಫ್ತಿಯಲ್ಲಿ ವಿಶೇಷ ಕರ್ತವ್ಯಕ್ಕೆ ನೇಮಿಸಲಾಗಿತ್ತು.
ಈ ವೇಳೆ ಸುನೀಲ್​ ಕುಮಾರ್​ಗೆ ಬೈಕ್​ ಸವಾರ ಟಿಪು$್ಪನಗರ ನಿವಾಸಿ ಇಮ್ರಾನ್​ (34) ಅಡ್ಡಬಂದಿದ್ದು, ಆತನನ್ನು ತಡೆದು ಬುದ್ಧಿ ಹೇಳುತ್ತಿದ್ದಾಗ ಅಲ್ಲಿಗೆ ಬಂದ ರಾಜೇಶ್​ ಕುಮಾರ್​ ಪೇದೆಗೆ ಧಮ್ಕಿ ಹಾಕಿದ್ದಲ್ಲದೆ, ಸಮೀಪದಲ್ಲಿ ಎಳನೀರು ವ್ಯಾಪಾರಿ ಇಟ್ಟಿದ್ದ ಮಚ್ಚು ಎತ್ತಿಕೊಂಡು ಬಂದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಸುನೀಲ್​ ಕುಮಾರ್​ ನೀಡಿದ ದೂರಿನ ಮೇರೆಗೆ ನಗರಠಾಣೆ ಪೊಲೀಸರು ಸ್ಥಳ ಮಹಜರು ನಡೆಸಿ, ಆರೋಪಿ ರಾಜೇಶ್​ ಕುಮಾರ್​ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net