ಗುರುವಿಗಿದೆ ಅಜ್ಞಾನದ ಕತ್ತಲೆ ಓಡಿಸುವ ಶಕ್ತಿ

ಜೇವರ್ಗಿ ತಾಲೂಕಿನ ಗಂವ್ಹಾರದ ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಮಠದಲ್ಲಿ ಭಕ್ತರು ಶ್ರೀ ಸೋಪಾನನಾಥ ಸ್ವಾಮಿಗಳಿಗೆ ನಮನ ಸಲ್ಲಿಸಿದರು.
ಜೇವರ್ಗಿ ತಾಲೂಕಿನ ಗಂವ್ಹಾರದ ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಮಠದಲ್ಲಿ ಭಕ್ತರು ಶ್ರೀ ಸೋಪಾನನಾಥ ಸ್ವಾಮಿಗಳಿಗೆ ನಮನ ಸಲ್ಲಿಸಿದರು.
Published on
ಜೇವರ್ಗಿ: ಗಂವ್ಹಾರದ ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಮಠದ ಆವರಣದಲ್ಲಿ ಪೀಠಾಧಿಪತಿ ಶ್ರೀ ಸೋಪಾನನಾಥ ಸಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಗುರುಪೂರ್ಣಿಮೆ ಮಹೋತ್ಸವ ಬುಧವಾರ ಸಂಭ್ರಮದಿಂದ ನಡೆಯಿತು. ಬೆಳಗ್ಗೆ ಶ್ರೀ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿಗಳ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ, ಮಹಾರುದ್ರಾಭಿಷೇಕ, ಮಹಾಮಂಗಳಾರತಿ ಸೇವೆ ಜರುಗಿದವು. ಶ್ರೀಗಳು ಆಶೀರ್ವಚನ ನೀಡಿ, ಮಾನವ ಜೀವನದಲ್ಲಿ ಗುರು ಸ್ಥಾನ ಅತ್ಯಂತ ಶ್ರೇಷ್ಠವಾದದ್ದು, ಅಜ್ಞಾನದ ಕತ್ತಲೆ ಓಡಿಸಿ ಜ್ಞಾನದ ಬೆಳಕನ್ನು ತೋರುವ ಶಕ್ತಿ ಗುರುವಿಗೆ ಮಾತ್ರವಿದೆ ಎಂದರು. ಪ್ರಮುಖರಾದ ಪಾಂಡುರಂಗ ಜೋಶಿ, ಚಂದಪ್ಪ ತಾಯಪ್ಪಗೋಳ, ಶ್ರೀಪಾದ ಭಟ್ಟ ಜೋಶಿ, ರಮಾಕಾಂತ ಜೋಶಿ, ಉಮಾಕಾಂತ ಜೋಶಿ, ಲ್ಮಕಾಂತ ಕುಲಕರ್ಣಿ ಹೋತಿನಮಡು, ಸಂಜುಕುಮಾರ ಜೋಶಿ, ಶ್ರೀನಿವಾಸ ಕುಲಕರ್ಣಿ, ಶಿವಶಂಕರ ಯಾಳವಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net