ಗ್ಯಾರಂಟಿ ಯೋಜನೆ ನಿಲ್ಲಲ್ಲ

The guarantee scheme will not stop.
The guarantee scheme will not stop.
Published on
ಮಧುಗಿರಿ: ಸವಾಜದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಏನೇ ಟೀಕೆಗಳು ಬರಲಿ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದರು.
ತಾಲೂಕಿನ ಪುರವರ ಹೋಬಳಿಯ ಕೊಂಡವಾಡಿ ಗ್ರಾಮದಲ್ಲಿ ಸೋಮವಾರ ನೂತನ ವಿಎಸ್ಸೆಸ್ಸೆಎನ್ ಸಹಕಾರ ಸಂ ಉದ್ಘಾಟಿಸಿ ವಾತನಾಡಿದ ಅವರು, ಗ್ಯಾರಂಟಿ ಯೋಜನೆಗಳನ್ನು ನೀಡಲು ತೀರ್ವಾನಿಸಿ ಪ್ರಣಾಳಿಕೆ ರೂಪದಲ್ಲಿ ಜಾರಿಗೆ ತಂದಿದ್ದು, ನಾನೇ ಅದನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜಾರಿಗೆ ತರಲಾಗಿದ್ದು, ಗ್ಯಾರಂಟಿಗಳಿಗೆ ಟೀಕೆಗಳು ಕೇಳಿ ಬರುತ್ತಿದ್ದು, ಯಾರು ಬಡವರ ಪರ ಯೋಜನೆಗಳನ್ನು ಜಾರಿಗೆ ತರುತ್ತಾರೋ ಅಂತವರಿಗೆ ಟೀಕೆಗಳು ಸಾವಾನ್ಯ ಎಂದರು.
ಶಾಸಕ ಕೆ.ಎನ್. ರಾಜಣ್ಣ ವಾತನಾಡಿ, ರೈತರ ಅನುಕೂಲಕ್ಕಾಗಿ ಕೊಂಡವಾಡಿ ಗ್ರಾಮದಲ್ಲಿ ವಿಎಸ್ಸೆಸ್ಸೆಎನ್ ಸೊಸೈಟಿ ಪ್ರಾರಂಭಿಸಲಾಗಿದ್ದು, ಈ ಹಿಂದೆ 1984ರಲ್ಲಿ ಗ್ರಾಮದಲ್ಲಿ ಸೊಸೈಟಿ ಇತ್ತು. ಆದರೆ, ಕಾರಣಾಂತರಗಳಿಂದ ಇದನ್ನು ಬ್ಯಾಲ್ಯ ಗ್ರಾಮಕ್ಕೆ ವಿಲೀನ ವಾಡಲಾಯಿತು. ಈಗ ಮತ್ತೆ ಸಹಕಾರ ಸಂಸ್ಥೆ ಪ್ರಾರಂಭಿಸಲಾಗಿದೆ ಎಂದರು.
ಏಪ್ರಿಲ್ನಲ್ಲಿ ಎಲ್ಲ ರೈತರಿಗೂ ಬಡ್ಡಿ ರಹಿತ ಸಾಲ ನೀಡಲಾಗುವುದು. ಸಹಕಾರ ಸಂಸ್ಥೆಗಳಿಂದ ರೈತರಿಗೆ ನೀಡುವ ಸಾಲ ಸರ್ಕಾರ ಹಣ ಅಲ್ಲ. ಅದು ಜನರ ದುಡ್ಡು. ಉಳ್ಳವರ ಠೇವಣೆ ಹಣ, ನಬಾರ್ಡ್ ಸಾಲ ಮತ್ತು ಅಪೆಕ್ಸ್ ಬ್ಯಾಂಕ್‌ನಿಂದ ಸಾಲ ಪಡೆದು ರೈತರಿಗೆ ಸಾಲ ನೀಡುತ್ತಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ರೈತರ ಸಾಲ ಮನ್ನಾ ಮಾಡಿದ್ದಾರೆ. ಇಂದು ರೈತರ ಆತ್ಮಹತ್ಯೆ ಪ್ರಸಂಗಗಳು ವರದಿಯಾಗುತ್ತಿಲ್ಲ. ಇದಕ್ಕೆ ರೈತರ ಮೇಲೆ ಸಾಲದ ಹೊರೆ ಕಡಿಮೆಯಾಗಿರುವುದೇ ಕಾರಣ ಎಂದರು.
ರಾಜಕಾರಣದಲ್ಲಿ ದುಡ್ಡು ಇರಬೇಕು, ಇಲ್ಲ ಜಾತಿ ಇರಬೇಕು. ಇವೆರಡೂ ಇಲ್ಲದೇ ನಿಮ್ಮ ಆಶಿರ್ವಾದದಿಂದ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರು.ಡಿವೈಎಸ್ಪಿ ಮಂಜುನಾಥ್, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕರಾದ ನಾಗೇಶ್ ಬಾಬು, ಹನುವಾನ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬೈರಪ್ಪ, ತಹಸೀಲ್ದಾರ್ ಶ್ರೀನಿವಾಸ್, ಕೊಂಡವಾಡಿ ವಿಎಸ್ಸೆಸ್ಸೆಎನ್ ಅಧ್ಯಕ್ಷ ಕೊಂಡವಾಡಿ ರಾಜಕುವಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net