ಐತಿಹಾಸಿಕ, ಪೌರಾಣಿಕ ಕಥೆ, ಭಕ್ತಿ, ಪುರಾಣ ಅಂದಿನ ಕಾಲದ ಉಡುಗೆ ತೊಡುಗೆ ಎಲ್ಲವೂ ಅವರ ಸಿನಿಮಾದಲ್ಲಿ ಜನರಿಗೆ ಒಂದು ಮೌಲ್ಯಯುತವಾಗಿ ತಿಳಿಸುವ ಕೆಲಸ ಮಾಡಿವೆ. ನಟನೆಗೆ ಶಿಕ್ಷಣದ ಅವಶ್ಯಕತೆಯಿಲ್ಲ ಸ್ಪಷ್ಟವಾದ ಮಾತುಗಾರಿಕೆ, ಉಚ್ಛಾರ ಒಂದು ದೇವರ ವರ. ಅದು ಡಾ. ರಾಜಕುಮಾರ್ ಅವರಿಗೆ ಇತ್ತು. ಐತಿಹಾಸಿಕ ಸಿನಿಮಾದಲ್ಲಿ ಹೇಳುವಂತಹ ಸಂಭಾಷಣೆಯನ್ನು ನೋಡಬಹುದು. ರಾಜನಾಗಿ, ರಾಕ್ಷಸ, ದರೋಡೆಕೋರ, ಕಳ್ಳ, ಖಳನಾಯಕ, ಭಕ್ತನಾಗಿ, ಬಡವನಾಗಿ, ಹುಚ್ಚನಾಗಿ ಕೊನೆಗೆ ದೇವರಾಗಿ ನಟಿಸಿದಂತಹ ಏಕೈಕ ವ್ಯಕ್ತಿಯಾಗಿದ್ದಾರೆ ಎಂದರು.