ಎಲ್ಲರಿಗೂ ಶಿಕ್ಷಣದ ಹಕ್ಕು ನೀಡಿದ ಮಹಾನ್​ ಜ್ಞಾನಿ

ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್​ ಹಬ್ಬ ಕಾರ್ಯಕ್ರಮವನ್ನು ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಿದರು. ಭಂತೆ ವರಜ್ಯೋತಿ ಮಹಾಥೇರೋ, ಪೊ. ವಿಜಯಕುಮಾರ ಸಾಲಿಮನಿ, ಮರಿಯಪ್ಪ ಹಳ್ಳಿ, ಡಾ.ಫಾರೂಕ್​ ಮಣ್ಣೂರ್​ ಇತರರಿದ್ದರು.
ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್​ ಹಬ್ಬ ಕಾರ್ಯಕ್ರಮವನ್ನು ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಉದ್ಘಾಟಿಸಿದರು. ಭಂತೆ ವರಜ್ಯೋತಿ ಮಹಾಥೇರೋ, ಪೊ. ವಿಜಯಕುಮಾರ ಸಾಲಿಮನಿ, ಮರಿಯಪ್ಪ ಹಳ್ಳಿ, ಡಾ.ಫಾರೂಕ್​ ಮಣ್ಣೂರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಬಣ್ಣನೆ
  • ಶಹಾಬಾದ್​ನಲ್ಲಿ ಅಂಬೇಡ್ಕರ್​ ಹಬ್ಬ
ಶಹಾಬಾದ್​: ಡಾ.ಬಿ.ಆರ್​.ಅಂಬೇಡ್ಕರ್​ ಅವರು ದೇಶದ ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕನ್ನು ಕೊಟ್ಟ ಮಹಾನ್​ ಜ್ಞಾನಿಯಾಗಿದ್ದಾರೆ ಎಂದು ಮೈಸೂರಿನ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ರಾಯಲ್​ ಸಭಾಗೃಹದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ 135ನೇ ಜಯಂತ್ಯುತ್ಸವ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಅಂಬೇಡ್ಕರ್​ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಸಂವಿಧಾನದ ಮೂಲಕ ಕೊಟ್ಟಿರುವ ಓದಿನ ಹಕ್ಕನ್ನು ಎಸ್​ಐಆರ್​ ಮೂಲಕ ಸರ್ಕಾರ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಈ ಮೂಲಕ ಸಂವಿಧಾನವನ್ನು ಮುಗಿಸುವ ಪ್ರಯತ್ನ ನಡೆದಿದೆ. ಸಂಘಟನೆಗಳು ಮನೆಮನೆಗೆ ಹೋಗಿ ಜಾಗೃತಿ ಮೂಡಿಸಬೇಕು, ದಲಿತರು ಅಂಬೇಡ್ಕರ್​ ಅವರಂತೆ ಓದಿ ಲೀಡರ್​ ಆಗಬೇಕು. ಓದದಿದ್ದಲ್ಲಿ ಡೀಲರ್​ ಆಗಿ ಉಳಿಯುತ್ತೀರಿ ಎಂದು ಎಚ್ಚರಿಸಿದರು.
ಡಾ.ವಿಜಯಕುಮಾರ ಸಾಲಿಮನಿ ಮಾತನಾಡಿ, ಜಗತ್ತು ಇಂದು ಡಾ.ಅಂಬೇಡ್ಕರ್​ ಅವರ ವಿದ್ವತ್​ ಅನ್ನು ನೋಡುತ್ತಿದ್ದರೆ, ನಮ್ಮ ದೇಶದಲ್ಲಿ ಅವರ ಜಾತಿಯನ್ನು ನೋಡಲಾಗುತ್ತಿದೆ. ಸ್ವಾತಂತ್ರ್ಯದ ನಂತರ ನಮ್ಮ ನಾಯಕರು ಮಹಿಳಾ ಶಿಕ್ಷಣ ವಿರೋಧಿಸಿದರು. ಆದರೆ ಅಂಬೇಡ್ಕರ್​ ಅವರು ಮಹಿಳೆಯರಿಗೆ ಶಿಕ್ಷಣ ಹಕ್ಕನ್ನು ಸಂವಿಧಾನದ ಮೂಲಕ ನೀಡಿ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಿದರು. ಪ್ರಬುದ್ಧ ಭಾರತ ಕಟ್ಟುವ ಕನಸನ್ನು ಹೊಂದಿದ್ದರು ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್​ ಮಾತನಾಡಿದರು.
ಭಂತೆ ವರಜ್ಯೋತಿ ಮಹಾಥೇರೋ ಸಾನ್ನಿಧ್ಯ, ರಾಜೇಶ ಯನಗುಂಟಿಕರ್​ ಅಧ್ಯಕ್ಷತೆ ವಹಿಸಿದ್ದರು. ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ್​, ಪೌರಾಯುಕ್ತ ಫಕ್ರೋದ್ದಿನ್​, ಪ್ರಮುಖರಾದ ವಸಂತ ಕಾಂಬಳೆ, ಮರಿಯಪ್ಪ ಹಳ್ಳಿ, ಡಾ.ಫಾರೂಕ್​ ಮಣ್ಣೂರ, ಸುರೇಶ ಮೆಂಗನ್​, ಮೃತ್ಯುಂಜಯ ಸ್ವಾಮಿ ಹಿರೇಮಠ, ಮಾಣಿಕಗೌಡ ಪಾಟೀಲ್​, ಸೂರ್ಯಕಾಂತ ರದ್ದೇವಾಡಿ, ಶರಣಬಸ್ಸು ಸಿರನೂರಕರ್​, ಸುನೀಲ ಭಗತ್​, ದೇವೆಂದ್ರ ಕಾರೊಳ್ಳಿ, ಪಿ.ಎಸ್​.ವನಂಜಕರ್​, ಅಣ್ಣಾರಾವ ಪಾಟೀಕ್​, ಭೀಮುಗೌಡ ಖೇಣಿ, ಪೀರ್​ ಪಾಶಾ, ಶಿವಪುತ್ರ ಕರಣಿಕ, ಅನೀಲಕುಮಾರ ಮರಗೋಳ, ಮಲ್ಲಣ್ಣ ಮಸ್ಕಿ, ಮಲ್ಲಿಕಾರ್ಜುನ ಗೌಡ ಪಾಟೀಲ್​, ನರಸಿಂಹಲು ರಾಯಚೂಕರ್​, ಸುಭಾಷ ಸಾಕ್ರೆ, ಮಲ್ಲಿಕಾರ್ಜುನ ಮರತೂರ ಇತರರಿದ್ದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಶಂಕರಜಾನಾ, ರುನಾಥ ಜಾಯಿ, ಮಲ್ಕಣ್ಣ ಮಸ್ಕಿ, ಯಶೋಧಾ ದೊಡ್ಡಮನಿ, ಸಿದ್ದು ಹರವಾಳ ಅಂಬೇಡ್ಕರ್​ ಗೀತೆ, ಕ್ರಾಂತಿ ಗೀತೆ ಹಾಡಿದರು. ಪಿ.ಎಸ್​.ಮೇತ್ರೆ, ಪ್ರವಿಣ ರಾಜನ್​ ನಿರೂಪಣೆ ಮಾಡಿದರು. ಅಲ್ಲಮಪ್ರಭು ಮಸ್ಕಿ ಸ್ವಾಗತಿಸಿದರು. ಮರಿಯಪ್ಪ ಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸುನೀಲ ದೊಡ್ಡಮನಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net