ಶಹಾಬಾದ್: ರಾವೂರ ಗ್ರಾಮದ 200 ವರ್ಷಗಳ ಇತಿಹಾಸ ಹೊಂದಿದ ಗುಗ್ಗುಳ ಬಸವೇಶ್ವರ ದೇವಸ್ಥಾನದ ನವೀಕರಣ ನಿಮಿತ್ತ ಸೋಮವಾರ ಅಪಾರ ಭಕ್ತರ ಜೈೂಷದೊಂದಿಗೆ ಪಲ್ಲಕ್ಕಿ ಉತ್ಸವ ನಡೆಯಿತು. ಬೆಳಗ್ಗೆ ಗುಗ್ಗುಳ ಬಸವೇಶ್ವರರಿಗೆ ವಿಶೇಷ ಪೂಜೆ, ಬಿಲ್ವಾರ್ಚನೆ ನಡೆಯಿತು. 8ಕ್ಕೆ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದಿಂದ ವಿವಿಧ ವಾದ್ಯವೃಂದದೊಂದಿಗೆ ಪಲ್ಲಕ್ಕಿ, ನೂತನ ಕಳಶದ ಭವ್ಯ ಮೆರವಣಿಗೆ ಶುರುವಾಯಿತು. ಮೆರವಣಿಗೆ ದೇವಸ್ಥಾನಕ್ಕೆ ಆಗಮಿಸಿದ ನಂತರ ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹಾಗೂ ಮಾಲಗತ್ತಿಯ ಶ್ರೀ ಡಾ.ಚನ್ನಬಸವ ಶರಣರ ನೇತೃತ್ವದಲ್ಲಿ ಕಳಶಾರೋಹಣ ನಡೆಯಿತು. ರಾವೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆಯಬೇಕು. ಸಂಪತ್ತು ಇದ್ದವರು ದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಧರ್ಮ ಜಾಗೃತಿಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು. ಪ್ರಮುಖರಾದ ಡಾ.ಗುಂಡಣ್ಣ ಬಾಳಿ, ಅಣ್ಣಾರಾವ ಬಾಳಿ, ಚನ್ನಪ್ಪ ಅಳ್ಳೊಳ್ಳಿ, ಪ್ರಭು ಕಾಳನೂರ, ಶಿವಾನಂದ ಮಿರಗೆ, ಅಮೃತರಾವ ಕೊರಳ್ಳಿ, ಶಿವಾನಂದ ಮೋರಟಗಿ, ಶಿವಶರಣಪ್ಪ ಮೋರಟಗಿ, ಮಲ್ಲಿನಾಥ ರಾವೂರ, ದೇವಿಂದ್ರಪ್ಪ ಗಣಿಯರ್, ದೇವಿಂದ್ರಪ್ಪ ರದ್ದೇವಾಡಗಿ, ಮಹೇಶ ಕಲ್ಯಾಣಿ, ಅಶೋಕ ಗೋಳಾ, ಅಂಬರೀಶ ಸಾಂಗ್ಲಿಯಾನಾ, ಸಿದ್ದಲಿಂಗ ಬಾಳಿ ಇತರರಿದ್ದರು.