ಶ್ರೀ ಸೀಮಿ ನಾಗನಾಥ ದೇವರ ಸಂಭ್ರಮದ ಪಲ್ಲಕ್ಕಿ ಉತ್ಸವ

3 ನಾಗಪಂಚಮಿ ನಿಮಿತ್ತ  ಹಳ್ಳಿಖೇಡ(ಬಿ)ದ ಶ್ರೀ ಸೀಮಿ ನಾಗನಾಥ ದೇವಸ್ಥಾನದಲ್ಲಿ ಸೋಮವಾರ ಅಪಾರ ಭಕ್ತಾಧಿಗಳ ಮಧ್ಯೆ ಶ್ರೀ ನಾಗ ದೇವರ ಸಂಭ್ರಮದ ಪಲ್ಲಕ್ಕಿ ಉತ್ಸವ ಜರುಗಿತು. 4.ದೇವಸ್ಥಾನದಲ್ಲಿ ಸೋಮವಾರ ಅಂಲಕಾರಗೊಂಡ ಶ್ರೀ ಸೀಮಿನಾಗನಥ ದೇವರ ಮೂರ್ತಿ.
3 ನಾಗಪಂಚಮಿ ನಿಮಿತ್ತ ಹಳ್ಳಿಖೇಡ(ಬಿ)ದ ಶ್ರೀ ಸೀಮಿ ನಾಗನಾಥ ದೇವಸ್ಥಾನದಲ್ಲಿ ಸೋಮವಾರ ಅಪಾರ ಭಕ್ತಾಧಿಗಳ ಮಧ್ಯೆ ಶ್ರೀ ನಾಗ ದೇವರ ಸಂಭ್ರಮದ ಪಲ್ಲಕ್ಕಿ ಉತ್ಸವ ಜರುಗಿತು. 4.ದೇವಸ್ಥಾನದಲ್ಲಿ ಸೋಮವಾರ ಅಂಲಕಾರಗೊಂಡ ಶ್ರೀ ಸೀಮಿನಾಗನಥ ದೇವರ ಮೂರ್ತಿ.
Published on
ಹುಮನಾಬಾದ್​: ನಾಗರ ಪಂಚಮಿ ನಿಮಿತ್ತ ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಸೋಮವಾರ ನಾಗರಾಧನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ಹಳ್ಳಿಖೇಡ(ಬಿ)ದ ಐತಿಹಾಸಿಕ ಸೀಮಿ ನಾಗನಾಥ ದೇವಸ್ಥಾನದಲ್ಲಿ ಅಭಿಷೇಕ, ರುದ್ರಾಭಿಷೇಕ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಜರುಗಿದವು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ನಾಗನಾಥೇಶ್ವರನ ದರ್ಶನ ಪಡೆದು ಪುನೀತರಾದರು. ಮಹಿಳೆಯರು ದೇವಸ್ಥಾನಕ್ಕೆ ಆಗಮಿಸಿ ನಾಗನಾಥೇಶ್ವರನಿಗೆ ಪೂಜೆ ಸಲ್ಲಿಸಿ ಹಾಲೆರೆದರು. ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಭಕ್ತಿಭಾವದ ವಾತಾವರಣ ನಿಮಾರ್ಣವಾಗಿತ್ತು. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ಸೇರಿ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಸೀಮಿ ನಾಗನಾಥ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದರು. ನಾಗ ಮಾಲಾಧಾರಿಗಳಿಂದ ವಿಶೇಷ ಪೂಜೆ ಹಾಗೂ ಭಜನೆ ಕಾರ್ಯಕ್ರಮ ಜರುಗಿತು. ಸ್ಥಳಿಯ ಪುಟ್ಟರಾಜ ಗವಾಯಿ ಸಂಘದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಸೀಮಿ ನಾಗನಾಥ ದೇವರ ಪಲ್ಲಕ್ಕಿ ಉತ್ಸವವು ಮಾಲಾಧಾರಿಗಳ ನೇತೃತ್ವದಲ್ಲಿ ವೈಭವದಿಂದ ನಡೆಯಿತು. ಪುರವಂತಿಕೆ ಹಾಗೂ ವಿವಿಧ ವಾದ್ಯಗಳ ನಾದದೊಂದಿಗೆ ನಡೆದ ಉತ್ಸವ ಭಕ್ತರ ಗಮನ ಸೆಳೆಯಿತು. ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ಸಂಭ್ರಮಿಸಿದರು. ಬಳಿಕ ಭಕ್ತರು ಪ್ರಸಾದ ಸ್ವೀಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net