ಚಿಂಚೋಳಿ ಚಂದಾಪುರದಲ್ಲಿ ಮಂಗಳವಾರ ಏರ್ಪಡಿಸಿದ್ದ ಕನ್ನಡ ಸಹಿತ್ಯ ಪರಿಷತ್ನ 112ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರಾದ ಸೂರ್ಯಕಾಂತ ಹುಲಿ, ಮಹ್ಮದ್ ಹಾದಿ, ಮಲ್ಲಪ್ಪ ಬೈಗೊಂಡ, ಆರ್.ಗಣಪತರಾವ, ಉಮಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಸುರೇಶ ದೇಶಪಾಂಡೆ, ಕಾಶಿನಾಥ ಹುಣಜೆ, ಯಲ್ಲಾಲಿಂಗ ದಂಡಿನ್, ಮಹ್ಮದ್ ಸೌದಾಗರ, ಶಿವಕುಮಾರ ಸ್ವಾಮಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರಗತಿಪರ ರೈತ ಅಶೋಕ ಪಾಟೀಲ್ ಒತ್ತಾಸೆ
ಚಿಂಚೋಳಿ: ಗಡಿ ತಾಲೂಕಿನಲ್ಲಿ ನೆಲ&ಜಲ, ಭಾಷೆ ಮತ್ತು ಕನ್ನಡ ಶಾಲೆ ಉಳಿವಿಗೆ ಸರ್ಕಾರ ಜತೆ ಕನ್ನಡ ಸಾಹಿತ್ಯ ಪರಿಷತ್, ಜನಸಾಮಾನ್ಯರು ಶ್ರಮಿಸಬೇಕು ಎಂದು ಪ್ರಗತಿಪರ ರೈತ ಅಶೋಕ ಪಾಟೀಲ್ ಹೇಳಿದರು.
ಚಂದಾಪುರದ ಶ್ರೀಮತಿ ಚಿನ್ನಮ್ಮ ಬಸಪ್ಪ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಸಾಪ 112ನೇ ಸಂಸ್ಥಾಪನಾ ದಿನ, ವಿಶೇಷ ಉಪನ್ಯಾಸ ಮತ್ತು ಹಿರಿಯ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ, ವಿಶ್ವದಲ್ಲೆ ಶ್ರೇಷ್ಠವಾಗಿದೆ. ಎಲ್ಲರಲ್ಲೂ ಅರಿವು ಮೂಡಿಸುವ ಕೆಲಸ ಕಸಾಪ ಮಾಡುತ್ತಿದೆ. ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡುವಂತಾಗಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದರು.
ಆಧುನಿಕ ಯುಗದಲ್ಲಿ ಮಕ್ಕಳು ಉತ್ತಮ ಹವ್ಯಾಸ ಬೆಳುಸಿಕೊಂಡು ಹೆತ್ತವರು ಮತ್ತು ಈ ನಾಡಿನ ಖುಣ ತೀರಿಸುವ ಕೆಲಸ ಮಾಡಬೇಕು. ೇತ್ರದ ಕುಂಚಾವರಂ ಭಾಗದ ಗಡಿ ಸಮಸ್ಯೆ ನಿವಾರಣೆ ಜತೆ ಅರಣ್ಯ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕು ಎಂದರು.