ಹೈಟೆಕ್​ ಜನತಾ ಬಜಾರ್​ ನಿರ್ಮಾಣ ಗುರಿ / DODDABALLAPUR

ದೊಡ್ಡಬಳ್ಳಾಪುರದ ಟಿಎಪಿಸಿಎಂಎಸ್​ನ ನೂತನ ಅಧ್ಯಕ್ಷ ಡಿ.ಸಿದ್ದರಾಮಯ್ಯ ಮತ್ತು ಉಪಾಧ್ಯಕ್ಷ ಜಗನ್ನಾಥ ಅವರನ್ನು ಡಿಪಿಎ ಅಧ್ಯಕ್ಷ ಚುಂಚೇಗೌಡ ಸನ್ಮಾನಿಸಿದರು. ಮುಖಂಡರಾದ ರಾಮಣ್ಣ, ಆಂಜನಮೂರ್ತಿ, ಬೈರೇಗೌಡ, ಕೆ.ಪಿ.ಜಗನ್ನಾಥ, ರವಿಕುಮಾರ್​, ನಿರ್ದೇಶಕರಾದ ವೆಂಕಟೇಶ್​, ಕೆಂಪೇಗೌಡ, ಆನಂದ್​, ಲಕ್ಷಿ$್ಮ ನಾಗೇಶ್​ ಇದ್ದರು.

Published on
ದೊಡ್ಡಬಳ್ಳಾಪುರ : ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಮಂಡಳಿಗೆ ಅಧ್ಯಕ್ಷರಾಗಿ ಡಿ.ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಎನ್​.ಜಗನ್ನಾಥ್​ ಅವಿರೋಧ ಆಯ್ಕೆಯಾದರು.
ಅಧ್ಯಕ್ಷ ಡಿ.ಸಿದ್ದರಾಮಯ್ಯ ಮಾತನಾಡಿ, ಟಿಎಪಿಸಿಎಂಎಸ್​ನ ಎಲ್ಲ ಸಿಬ್ಬಂದಿಗೂ ಉತ್ತಮ ಸೌಕರ್ಯ ಒದಗಿಸುತ್ತೇನೆ. ನಗರದ ಕೊಂಗಾಡಿಯಪ್ಪ ಕಾಲೇಜು, ಸಾಸಲು, ದೊಡ್ಡಬೆಳವಂಗಲ, ಮಧುರೆ, ಹೊಸಹಳ್ಳಿಯಲ್ಲಿ ಜನತಾ ಬಜಾರ್​ ಸ್ಥಾಪಿಸಲು ಚಿಂತನೆ ನಡೆಸಿದ್ದು, ವಿವಿಧ ಸಾಮಾಗ್ರಿ ಒಳಗೊಂಡ ಜನತಾ ಬಜಾರ ಅನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಡಿ.ಮಾರ್ಟ್​ ಮಾದರಿ ಹೈಟೆಕ್​ ಜನತಾ ಬಜಾರ್​ ಸ್ಥಾಪಿಸುವ ಗುರಿ ಹೊಂದಿದ್ದೇವೆ ಎಂದರು.
ತಾಲೂಕಿನ ಜನತೆಗೆ ಸಮರ್ಪಕ ಪಡಿತರ ವಿತರಣೆಗೆ ಕ್ರಮವಹಿಸಲಾಗುತ್ತದೆ. ಹಾಗೂ ರೈತರಿಗೆ ವಿಎಸ್​ಎಸ್​ಎನ್​ಗಳಲ್ಲಿ ಗೊಬ್ಬರ ಮಾರಾಟದ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ನಗರದ ಟಿಎಪಿಸಿಎಂಎಸ್​ ಕಚೇರಿಯಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ, ವಿವಿಧ ಮುಖಂಡರು ಸನ್ಮಾಣಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net