ಜೋಡು ಬಸವೇಶ್ವರನ ರಥೋತ್ಸವ ವೈಭವ

ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ ಭಕ್ತರ ಜೈೂಷದೊಂದಿಗೆ ಶ್ರೀ ಜೋಡು ಬಸವೇಶ್ವರ ದೇವರ  ಮಹಾರಥೋತ್ಸವ ಜರುಗಿತು.
ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ ಭಕ್ತರ ಜೈೂಷದೊಂದಿಗೆ ಶ್ರೀ ಜೋಡು ಬಸವೇಶ್ವರ ದೇವರ ಮಹಾರಥೋತ್ಸವ ಜರುಗಿತು.
Published on
ಚಿಂಚೋಳಿ: ಗಾರಂಪಳ್ಳಿಯಲ್ಲಿ ಅಸಂಖ್ಯಾತ ಭಕ್ತರ ಜೈೂಷದೊಂದಿಗೆ ಸಂಭ್ರಮದಿಂದ ಶ್ರೀ ಜೋಡು ಬಸವೇಶ್ವರ ದೇವರ ಮಹಾರಥೋತ್ಸವ ಮಂಗಳವಾರ ಸಂಜೆ ನಡೆಯಿತು. ಬೆಳಗ್ಗೆ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ, ಮಹಾಮಂಗಳಾರತಿ ನಡೆಯಿತು. ಬಳಿಕ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿತು. ಅಪಾರ ಭಕ್ತರು ಅಗ್ಗಿ ತುಳಿದು ಭಕ್ತಿ ಸಮರ್ಪಿಸಿದರು. ಸಂಜೆ ಅಸಂಖ್ಯ ಭಕ್ತರ ಜೈೂಷದೊಂದಿಗೆ ಮಹಾರಥೋತ್ಸವ ನಡೆಯಿತು. ಶ್ರೀ ಜೋಡು ಬಸವೇಶ್ವರ ಮಹಾರಾಜ್​ಕಿ ಜೈ.. ಜೈ ಬಸವೇಶ್ವರ.. ಸೇರಿ ವಿವಿಧ ಜೈೂಷ ಮೊಳಗಿದವು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ನಾಣ್ಯ ಸಮರ್ಪಿಸಿ ಭಕ್ತಿ ಸಲ್ಲಿಸಿದರು. ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠದ ಶ್ರೀ ಕರುಣೇಶ್ವರ ಶಿವಾಚಾರ್ಯರು, ಪ್ರಮುಖರಾದ ನೀಲಕಂಠರಾವ ದೇಶಮುಖ, ವೀರಭದ್ರಪ್ಪ ಮಲಕೂಡ, ಗುರುಪ್ರಸಾದ ಅಂಬಲಗಿ, ಬಸವಂತಪ್ಪ ಮಾಳಗಿ, ಚಂದ್ರಶೇಖರ ಗುತ್ತೇದಾರ್​, ಸಂಗಯ್ಯಸ್ವಾಮಿ ಮಠ, ವೀರಶೆಟ್ಟಿ ಮಗಿ, ವಿದ್ಯಾಸಾಗರ ದೇಶಮುಖ, ಸುಭಾಷ ಗುತ್ತೇದಾರ್​, ರಜನಿಕಾಂತ ಬುಳ್ಳಾ, ಫಜಲ್​ರೈಮಾನ, ಗೋಪಾಲ ಎಂ.ಪಿ., ಅಮೃತ ಮಡಿವಾಳ, ಚನ್ನಯ್ಯ ಸ್ವಾಮಿ, ಬಸವರಾಜ ಭೂತಾಳಿ, ರೇವಣಸಿದ್ದಪ್ಪ ಪೂಜಾರಿ, ಮೋಹನ ಗುತ್ತೇದಾರ್​, ಹಣಮಂತ ಭೋವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net