ಶ್ರೀ ಯಲ್ಲಮ್ಮ ದೇವಿ ಪಲ್ಲಕ್ಕಿ ವೈಭವ

ಕರಜಗಿ ವಲಯದ ಮಣ್ಣೂರ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು.
ಕರಜಗಿ ವಲಯದ ಮಣ್ಣೂರ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಮಣ್ಣೂರಿನಲ್ಲಿ ಗ್ರಾಮದೇವತೆ ಜಾತ್ರೋತ್ಸವ
  • ನೈವೇದ್ಯ ಸಮರ್ಪಿಸಿ ದರ್ಶನ ಪಡೆದ ಭಕ್ತಜನ
ಕರಜಗಿ: ಮಣ್ಣೂರ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಯಲ್ಲಮ್ಮ ದೇವಿ ಜಾತ್ರೋತ್ಸವ ನಿಮಿತ್ತ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಪಲ್ಲಕ್ಕಿ ಉತ್ಸವ ನಡೆಯಿತು.
ಏ.29ರಂದು ಶಿವಬಾಳನಗರದ ಭಕ್ತರಿಂದ ಅದ್ದೂರಿ ಮೆರವಣಿಗೆ ಮೂಲಕ ನಂದಿಕೋಲುಗಳನ್ನು ದೇವಸ್ಥಾನಕ್ಕೆ ತರುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ಏ.30ರಂದು ಯಲ್ಲಮ್ಮ ದೇವಿ ಬಾಸಿಂಗ್​ವೂ ಪ್ರಮುಖ ಬೀದಿಗಳಲ್ಲಿ ಸಾಗಿ ರಾತ್ರಿ ದೇವಿ ಮಂದಿರ ತಲುಪಿತು. ಬಳಿಕ ಪ್ರೇಮಾ ಅಫಜಲಪುರ ಹಾಗೂ ಸಂಗಡಿಗರಿಂದ ಚೌಡಕಿ ಆಟ, ಪದಗಳು ನಡೆದವು.
ಹುಣ್ಣಿಮೆ ನಿಮಿತ್ತ ಶುಕ್ರವಾರ ಬೆಳಗ್ಗೆ 5ಕ್ಕೆ ಪಡಸಾವಳಗಿಯ ಶ್ರೀ ಶಂಭುಲಿಂಗ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ದೇವಿಗೆ ಕುಂಕುಮಾರ್ಚನೆ, ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. 7ಕ್ಕೆ ದೇವಿಯ ವಸಾಭರಣ ನಡೆದು, ನಂತರ ಅಸಂಖ್ಯ ಜನರು ನೈವೇದ್ಯ ಸಮರ್ಪಿಸಿದರು. ಸಂಜೆ ದೇವಿ ನವಿಲು, ಕರಡಿ, ಕುದುರೆ ಹಾಗೂ ಗೊಂಬೆ ಕುಣಿತದೊಂದಿಗೆ ಡೊಳ್ಳಿನ ವಾಲಗ ಸೇರಿ ವಿವಿಧ ವಾದ್ಯ ವೈಭವಗಳೊಂದಿಗೆ ಭೀಮಾ ನದಿಯಲ್ಲಿರುವ ದೇವಿ ಮಂದಿರಕ್ಕೆ ಪಲ್ಲಕ್ಕಿ ಆಗಮಿಸಿತು. ಶಾಸೊಕ್ತವಾಗಿ ದೇವಿಯನ್ನು ಸ್ವಾಗತಿಸಲಾಯಿತು. ದಾರಿಯುದ್ದಕ್ಕೂ ಭಕ್ತರಿಂದ ಯಲ್ಲಮ್ಮ ದೇವಿಗೆ ನಮೋ ನಮ@.. ನಮೋ ಜಗನ್ಮಾತೆ.. ಜೈ ಯಲ್ಲಮ್ಮ.. ಸೇರಿ ವಿವಿಧ ೂಷಗಳು ಮೊಳಗಿದವು. ರಾತ್ರಿ ಬಣ್ಣ&ಬಣ್ಣದ ಮದ್ದು ಸುಡುವ ಕಾರ್ಯಕ್ರಮ ಗಮನಸೆಳೆಯಿತು.
ಶನಿವಾರ ಬೆಳಗ್ಗೆ ವಿದ್ಯಾಶ್ರೀ ಮಸಬಿನಾಳ, ಹರದೇಶ, ನಾಗೇಶ ಹಾಗೂ ಮಕ್ತುಮಸಾಬ್​ ಸೊನ್ನಾಳ ಅವರು ಗೀಗೀ ಪದಗಳನ್ನು ಪ್ರಸ್ತುತಪಡಿಸಿದರು. ಸಂಜೆ ಕುಸ್ತಿ ಪಂದ್ಯಾವಳಿಗಳು ನಡೆದವು. ಹೊಸ ಪಾದಗಟ್ಟೆ ಹಾಗೂ ಬನ್ನಿ ಮಹಾಕಾಳಿ ದೇವಸ್ಥಾನದ ಹತ್ತಿರ ಜಾನುವಾರು ಹಾಗೂ ಕುರಿಗಳ ಜಾತ್ರೆ ನಡೆಯುತ್ತಿದೆ.
ಯಲ್ಲಮ್ಮ ದೇವಿ ದೇವಸ್ಥಾನ ಟ್ರಸ್ಟ್​ ಅಧ್ಯ ಮಹಾದೇವಗೌಡ ಕರೂಟಿ, ಪ್ರಮುಖರಾದ ರಾಚಪ್ಪ ಕೊಪ್ಪಾ, ಗುರುಬಾಳ ಜಾಕಾಪುರ, ಮಲ್ಲನಗೌಡ ಬಗಲಿ, ಶಿವಶರಣಪ್ಪ ರೋಡಗಿ, ಜೆಟ್ಟೆಪ್ಪ, ವೇಣುಮಾದವ ಅವಧಾನಿ, ಸಂಜು ಪ್ಯಾಟಿ, ಶೀಕಾಂತ, ಶಂಕರಲಿಂಗ ಈಶ್ವರಗೊಂಡ, ಸೈಬಣ್ಣ ಕರುಟಿ, ಶ್ರೀಕಾಂತ ಮುಜಗೊಂಡ, ಚಂದಪ್ಪ ಕುಂಬಾರ್​, ಚನ್ನಬಸಪ್ಪ ಕುಂಬಾರ ಇತರರಿದ್ದರು. ರಾಜ್ಯ ಸೇರಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣದಿಂದ ಅಸಂಖ್ಯಾತ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಕೃತಾರ್ಥರಾದರು.
ಭಕ್ತರ ಆರೋಗ್ಯ ತಪಾಸಣೆ
ಯಲ್ಲಮ್ಮ ದೇವಿ ಜಾತ್ರೋತ್ಸವ ನಿಮಿತ್ತ ಪ್ರಾಥಮಿಕ ಹಾಗೂ ಸಮದಾಯ ಆರೋಗ್ಯ ಕೇಂದ್ರದಿಂದ ಶನಿವಾರ, ಭಾನುವಾರ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ವೈದ್ಯಾಧಿಕಾರಿ ಡಾ.ಸಂಜೀವಿನಿ ಜಾಧವ್​ ಅವರು ಜನರ ಆರೋಗ್ಯ ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಿದರು. ವಿಠ್ಠಲ್​ ಬಡಿಗೇರ, ಪ್ರಕಾಶ ಬಿರಾದಾರ, ಹಣಮಂತ ಅಲ್ಲಾಪುರ, ಶ್ರೀಶೈಲ ಕಲಶೆಟ್ಟಿ, ರವಿಕುಮಾರ ಭುರಲಿ, ಗೌತಮ ಮೈಸಲಗಿ, ಶಿವರಾಜ, ಎಸ್​.ವಾರಿಕ್​, ನಾಜ್ಮಿನ್​ ಸಾತ್ಕೇಡ, ಜ್ಯೋತಿ ಹಾಲು, ಮಾಲಾಶ್ರೀ ಶಿವಾನಂದ, ಬೌರಮ್ಮ ಲೋಹಾರ, ಶಬಾನಾ ಕೊರಬು, ಗೌರಬಾಯಿ ಮೋಸಲಗಿ ಇತರರಿದ್ದರು
ಪ್ರಸಾದ ವಿತರಣೆ
ಯಲ್ಲಮ್ಮ ಜಾತ್ರೆ ನಿಮಿತ್ತ ಮಣ್ಣೂರಿನ ಬಜಾರಕಟ್ಟೆ ಆವರಣದಲ್ಲಿ ಆದರ್ಶ ಗೆಳೆಯರ ಬಳಗದಿಂದ ಯಲ್ಲಮ್ಮ ದೇವಿ ಜಾತ್ರೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಭಾನುವಾರ ಪ್ರಸಾದ ವಿತರಣೆ ಮಾಡಲಾಯಿತು. ಅಪಾರ ಜನರಿಗೆ ಬಳದ ಸದಸ್ಯರು ಸಿರಾ, ಉಪ್ಪಿಟ್ಟು, ಮಜ್ಜಿಗೆ, ಬೂಂದೆ ವಿತರಿಸಿದರು. ಕಳೆದ 11 ವರ್ಷದಿಂದ ಪ್ರಸಾದ ವ್ಯವಸ್ಥೆ ಮಾಡಿಕೊಂಡು ಸಾಗುತ್ತಿದೆ. ಅಲ್ಲದೆ ದೇವಸ್ಥಾನ ಸಮಿತಿಯಿಂದಲೂ ಅನ್ನದಾಸೋಹ ನಡೆಸಲಾಯಿತು. ಹಾಲಯ್ಯ ಹಿರೇಮಠ, ಮಹಾದೇವಪ್ಪ ಕರೂಟಿ, ವಿಶ್ವನಾಥ ಅಜಗೊಂಡ, ರಮೇಶ ಬಾಕೆ, ಯಲ್ಲಾಲಿಂಗ ಪೂಜಾರಿ, ಪ್ರಸನ್ನ ಆಲೂರ, ಮಲ್ಲಿಕಾರ್ಜುನ ಬಾಗೇವಾಡಿ, ಮಲ್ಲಿನಾಥ ರೋಡಗಿ, ಪ್ರಭುಲಿಂಗ ಆಲೂರ, ಚಂದ್ರಕಾಂತ ಹಳಗೋದಿ, ಜಗದೀಶ ದೇಶೆಟ್ಟಿ, ಶಿವಾನಂದ ಬಲ್ಲಾ, ಅನೀಲಗೌಡ ಕರೂಟಿ, ಸಚಿನ್​ ಕೊಪ್ಪ, ಶಿವಾನಂದ ವಾಲಿ, ಪ್ರಭುಲಿಂಗ ಮಠಪತಿ, ಪ್ರವಿಣ ಬಾಕೆ, ಸೋಮನಾಥ ನಂದಿಮಠ, ಮಲ್ಲಿಕಾರ್ಜುನ ಸೂಗೂರ, ಸಾಯಬಣ್ಣ ಕುಂಬಾರ, ದಾನಪ್ಪ ಕೊಪ್ಪ, ರಾಹುಲ್​ ಅಜಗೊಂಡ, ಶಿವಯ್ಯ ಕಳ್ಳಿಮಠ, ಮಿಥುನ್​ ನಂದಿ, ಚನ್ನಪ್ಪ ಅಜಗೊಂಡ, ಪಿಂಟು ಠಕ್ಕಾ, ಕಾಶಿನಾಥ ಭಜಂತ್ರಿ, ದತ್ತಾತ್ರೇಯ ಬಾಗೇವಾಡಿ, ಇಮಾಮಸಾಬ್​ ಬೇನೂರ, ಯಲ್ಲಾಲಿಂಗ ಬಾಗೇವಾಡಿ, ಸಿದ್ದು ಆಲೂರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net