ವಿಜೃಂಭಣೆಯ ಶ್ರೀ ಭದ್ರಕಾಳಮ್ಮ, ಶ್ರೀ ವೀರಭದ್ರಸ್ವಾಮಿ ರಥೋತ್ಸವ

ಮಳವಳ್ಳಿ ಪಟ್ಟಣದ ಭದ್ರಕಾಳಮ್ಮ ಹಾಗೂ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಪೂಜಾ ವಿಧಿ ವಿಧಾನಗಳ ಜತೆಗೆ ಮಂಗಳ ವಾದ್ಯದೊಡನೆ ವೀರಗಾಸೆಯ ಕಲಾವಿದರು ವೀರಭದ್ರ ಕುಣಿತದೊಡನೆ ದಿವ್ಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮಳವಳ್ಳಿ ಪಟ್ಟಣದ ಭದ್ರಕಾಳಮ್ಮ ಹಾಗೂ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಪೂಜಾ ವಿಧಿ ವಿಧಾನಗಳ ಜತೆಗೆ ಮಂಗಳ ವಾದ್ಯದೊಡನೆ ವೀರಗಾಸೆಯ ಕಲಾವಿದರು ವೀರಭದ್ರ ಕುಣಿತದೊಡನೆ ದಿವ್ಯ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Published on

ಮಳವಳ್ಳಿ:

ಪಟ್ಟಣದ ಮಂಟೇಸ್ವಾಮಿ ಮಠದ ಬೀದಿಯಲ್ಲಿರುವ ಶ್ರೀ ಭದ್ರಕಾಳಮ್ಮ ಹಾಗೂ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಪೂಜಾ ವಿಧಿವಿಧಾನಗಳೊಂದಿಗೆ ವಿಜೃಂಭಣೆಯಿಂದ ರಥೋತ್ಸವ ಜರುಗಿತು.

ಮುಂಜಾನೆಯಿಂದ ಅರ್ಚಕರು ದೇವಾಲಯದಲ್ಲಿ ಹೋಮ, ಹವನಗಳನ್ನು ನಡೆಸಿ ವೀರಭದ್ರಸ್ವಾಮಿ ಮೂರ್ತಿಗೆ ಪಂಚಾಮೃತ, ಕ್ಷೀರ, ಜೇನುತುಪ್ಪ ಸೇರಿದಂತೆ ಹಲವು ಅಭಿಷೇಕಗಳನ್ನು ನೆರವೇರಿಸಲಾಯಿತು. ನಂತರ ವಿವಿಧ ಹೂಗಳಿಂದ ದೇವರಮೂರ್ತಿಯನ್ನು ಅಲಂಕಾರಗೊಳಿಸುವ ಮೂಲಕ ಮಹಾ ಮಂಗಳಾರತಿ ಅರ್ಪಿಸಲಾಯಿತು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸರದಿಯಲ್ಲಿ ನಿಂತು ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.
ಮಧ್ಯಾಹ್ನದ ವೇಳೆಗೆ 1.22 ರಿಂದ 1.30 ರ ಸಮಯದಲ್ಲಿ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಉತ್ಸವಮೂರ್ತಿಗಳಿಗೆ ಪೂಜೆ ಸಲ್ಲಿಸಿ ಸಿಂಗರಿಸಲಾಗಿದ್ದ ರಥಕ್ಕೆ ಪ್ರತಿಷ್ಠಾಪನೆ ಮಾಡಲಾಯಿತು. ಇದೇ ವೇಳೆ ಮಂಗಳ ವಾದ್ಯದೊಡನೆ ವೀರಗಾಸೆಯ ಕಲಾವಿದರು ವೀರಭದ್ರ ಕುಣಿತದೊಡನೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿದ ರಥೋತ್ಸವಕ್ಕೆ ಭಕ್ತರು ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಇದೇ ಸಂಧರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ನೆರೆದ ಭಕ್ತಸಮೂಹಕ್ಕೆ ಪ್ರಸಾದ ವಿನಿಯೋಗ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net