ಯುವಕರ ಕೈಯಲ್ಲಿದೆ ದೇಶದ ಭವಿಷ್ಯ

ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ನ್ಯಾಯಾಧೀಶ ನಾಗರಾಜ್​ ಬಾರ್ಕಿ ಉದ್ಘಾಟಿಸಿದರು. ರಮೇಶ ರಾಠೋಡ್​, ಡಾ.ಬಸವರಾಜ ಹಿರೇಮಠ, ಶ್ರೀಕಾಂತ, ದೇವರಾಜ ಮಾಲಗತ್ತಿ ಇದ್ದರು.
ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ನ್ಯಾಯಾಧೀಶ ನಾಗರಾಜ್​ ಬಾರ್ಕಿ ಉದ್ಘಾಟಿಸಿದರು. ರಮೇಶ ರಾಠೋಡ್​, ಡಾ.ಬಸವರಾಜ ಹಿರೇಮಠ, ಶ್ರೀಕಾಂತ, ದೇವರಾಜ ಮಾಲಗತ್ತಿ ಇದ್ದರು.
Published on

ಶಹಾಬಾದ್​: ಯುವಕರು ರಾಷ್ಟ್ರ ನಿಮಾರ್ಪಕರಾಗಿದ್ದು, ದೇಶದ ಭವಿಷ್ಯ ಅವರ ಕೈಯಲ್ಲಿದೆ. ಯುವಜನತೆ ಸದೃಢರಾಗುವುದರ ಜತೆಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಿವಿಲ್​ ನ್ಯಾಯಾಧೀಶ ನಾಗರಾಜ ಬಾರ್ಕಿ ಸಲಹೆ ನೀಡಿದರು. ಎಸ್​.ಎಸ್​.ಮರಗೋಳ ಕಾಲೇಜಿನಲ್ಲಿ ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದಿಂದ ಬುಧವಾರ ಆಯೋಜಿಸಿದ್ದ ಕಾನೂನು ಅರಿವು&ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ತಿಳಿದುಕೊಂಡಾಗ ಮಾತ್ರ ಜೀವನ ಉಜ್ಜಲಗೊಳ್ಳಲು ಸಾಧ್ಯ ಎಂದು ಹೇಳಿದರು. ರಮೇಶ ರಾಠೋಡ್​ ಅವರು ಯುವ ಬಲಿಷ್ಠ ಭಾರತ ವಿಷಯ ಕುರಿತು ಉಪನ್ಯಾಸ ನೀಡಿ, ಯುವಕರು ಒಳ್ಳೆಯ ನಾಗರಿಕರಾಗುವುದರ ಜತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ದುಶ್ಚಟಗಳಿಗೆ ಬಲಿಯಾಗದೆ ಸದೃಢ ಸಮಾಜ ನಿರ್ಮಿಸಬೇಕು ಎಂದು ಕರೆ ನೀಡಿದರು. ಎಎಸ್​ಐ ಶ್ರೀಕಾಂತ, ವಕೀಲ ದೇವರಾಜ ಮಾಲಗತ್ತಿ ಮಾತನಾಡಿದರು. ಪ್ರಾಚಾರ್ಯ ಡಾ.ಬಸವರಾಜ ಹಿರೇಮಠ ಅಧ್ಯಕತೆವಹಿಸಿದ್ದರು. ಡಾ.ಹನುಮಂತಪ್ಪ ಸೇಡಂಕರ್​ ಸ್ವಾಗತಿಸಿದರು. ಡಾ.ಸುರೇಖಾ ವಂದಿಸಿದರು. ಶಿವಶಂಕರ ಹಿರೇಮಠ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net