ಕಲಬುರಗಿಯ ಗೋದುತಾಯಿ ಕಾಲನಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಾರ್ಷಿಕೋತ್ಸವ ಆಚರಿಸಲಾಯಿತು. ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಶಾಸಕ ಅಲ್ಲಮಪ್ರಭು ಪಾಟೀಲ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಾರ್ತಿಕೇಶ್ವರ ಶ್ರೀ ನುಡಿ
ಮಲ್ಲಿಕಾರ್ಜುನ ದೇವಸ್ಥಾನ ವಾರ್ಷಿಕೋತ್ಸವ
ಕಲಬುರಗಿ: ಕರ್ಮದ ಫಲದಿಂದ ನಮ್ಮ ಬುದ್ಧಿ ಮತ್ತು ಸುಖ-ದು-ಖ ಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನಾವು ಈ ಜನ್ಮದಲ್ಲಾದರೂ ಒಳ್ಳೆಯ ಕರ್ಮಗಳನ್ನ ಮಾಡಬೇಕು ಎಂದು ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ನುಡಿದರು.
ನಗರದ ಗೋದುತಾಯಿ ಕಾಲನಿಯಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ 18ನೇ ವಾರ್ಷಿಕೋತ್ಸವದಲ್ಲಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಇಂದಿನ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ನಾವು ಮಕ್ಕಳಿಗೆ ಉತ್ತಮ ಶಿಣದೊಂದಿಗೆ ಉತ್ತಮ ಸಂಸ್ಕಾರಗಳನ್ನು ನೀಡಿದಾಗ ಮಾತ್ರ ನಾವು ಸಭ್ಯ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದರು.
ಅಮೋ ಕಣ್ಣಿನ ಆಸ್ಪತ್ರೆಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು. ಡಾ.ಅಮೋ ಹರಸೂರ ಉಚಿತ ನೇತ್ರ ತಪಾಸಣೆ ನೆರವೇರಿಸಲಾಯಿತು. ಕಾರ್ಯದರ್ಶಿ ಶಿವಶಂಕರ ಗಚ್ಚಿನಮಠ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ.ಬಿ.ಎಸ್.ಮಾಲಿ ಪಾಟೀಲ್, ವಿಜಯಕುಮಾರ ಕರಡಿ ನಾಲವಾರ ಅವರಿಂದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಹೊನಗುಂಟಾ ಗ್ರಾಮದ ಶ್ರೀ ಸಂಗಮೇಶ್ವರ ಭಜನಾ ಮಂಡಳಿಯಿಂದ ಸಂಗೀತ ಸೇವೆ ಮಾಡಲಾಯಿತು.