

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಹೊಸ ಮನೆನಿರ್ಮಾಣದಲ್ಲಿ ವಿಸ್ತೀರ್ಣ,ವಿನ್ಯಾಸ,ಬಣ್ಣ ಇತ್ಯಾದಿಪ್ರಮುಖ ಅಂಶಗಳ ಜೊತೆಗೆ ಒಳಾಂಗಣಆಕರ್ಷಣೆ ಮತ್ತು ಅಲಂಕಾರಕ್ಕೆವಿಶೇಷ ಒತ್ತು ನೀಡಲಾಗುತ್ತದೆ.ಆ ನಿಟ್ಟಿನಲ್ಲಿಮನೆಯೊಳಗೆ ಅಳವಡಿಸುವ ಕಾರಂಜಿಹೆಚ್ಚು ಪ್ರಚಲಿತಕ್ಕೆ ಬರುತ್ತಿದೆ.
ಪ್ರತಿಯೊಬ್ಬರಿಗೂಒಂದು ಸ್ವಂತ ಮನೆಯ ಕನಸುಸಹಜವಾಗಿರುತ್ತದೆ.ಬಡ ಮತ್ತು ಮಧ್ಯಮವರ್ಗದವರು ತಮ್ಮ ಆರ್ಥಿಕಶಕ್ತಿಗನುಗುಣವಾಗಿ ಮೂಲಭೂತಸೌಲಭ್ಯದೊಂದಿಗೆ ಸಾಮಾನ್ಯ ಮನೆನಿರ್ಮಿಸಿದರೆ;ಶ್ರೀಮಂತರುತಮ್ಮ ಬೃಹತ್ ಮನೆ ನಿರ್ಮಾಣದಲ್ಲಿವಿನ್ಯಾಸ ಮತ್ತು ಅಲಂಕಾರಕ್ಕೆಹೆಚ್ಚು ಆದ್ಯತೆ ನೀಡುತ್ತಾರೆ.ಅಂತಹ ಬೃಹತ್ಬಂಗಲೆಗಳಲ್ಲಿ ಕಾರಂಜಿ ಕೂಡಾಒಂದು ಪ್ರಮುಖ ಆಕರ್ಷಣೆಯಾಗಿರುತ್ತದೆ.
ಕಾರಂಜಿಗಳುಸಾಮಾನ್ಯವಾಗಿ ಸಾರ್ವಜನಿಕಉದ್ಯಾನವನ, ಬೃಹತ್ಸರ್ಕಾರಿ ಅಥವಾ ಖಾಸಗಿ ಕಟ್ಟಡಗಳಮುಂಭಾಗದಲ್ಲಿ ಮೊದಲಿನಿಂದಲೂಕಂಡು ಬರುತ್ತಿದ್ದವು.ಆದರೆ ಇತ್ತೀಚೆಗೆಮನೆಯ ಒಳಗೆ ಲಭ್ಯ ಇರುವ ಸ್ಥಳಾವಕಾಶವನ್ನುಆಧರಿಸಿ ವಿವಿಧ ಗಾತ್ರದಲ್ಲಿಕಾರಂಜಿಗಳನ್ನು ನಿರ್ಮಿಸಲಾಗುತ್ತಿದೆ.ಮನೆಯ ಪ್ರಮುಖಹಾಲ್, ಡೈನಿಂಗ್ಹಾಲ್, ಪೂಜಾಮಂದಿರದ ಮುಂಭಾಗದಲ್ಲಿ ಕಾರಂಜಿನಿರ್ಮಾಣ ಸಾಮಾನ್ಯ.ಕಾರಂಜಿಯ ಗಾತ್ರಕ್ಕೆಅನುಗುಣವಾಗಿ ನೀರಿನ ಹರಿವು ಮತ್ತುವಿನ್ಯಾಸವನ್ನು ಮಾಡಲು ಸಾಧ್ಯ.ಬಣ್ಣದ ವಿದ್ಯುತ್ದೀಪದ ಅಳವಡಿಕೆ,ಸಂಗೀತ ಸಂಯೋಜನೆಯಿಂದಕಾರಂಜಿಯನ್ನು ಮತ್ತಷ್ಟುಆಕರ್ಷಕಗೊಳಿಸಬಹುದು.ಜೊತೆಗೆ ನೀರುಬೀಳುವ ಕುಂಡದಲ್ಲಿ ನೀರಿನಲ್ಲಿಬೆಳೆಯುವ ತಾವರೆ ಜಾತಿಯ ಹೂವಿನಗಿಡಗಳನ್ನುಬೆಳೆಸುವುದಕ್ಕೂ ಅವಕಾಶವಿರುತ್ತದೆ.
ಇತ್ತೀಚೆಗೆಮಾರುಕಟ್ಟೆಯಲ್ಲಿ ರೆಡಿಮೇಡ್ಕಾರಂಜಿಗಳು ದೊರೆಯುತ್ತ್ತಿವೆ. ಟಿಪಾಯಿ ಮೇಲೆಇಡಬಹುದಾದ ಚಿಕ್ಕ ಗಾತ್ರದಎಲೆಕ್ಟ್ರಿಕ್ ಫೌಂಟೇನ್,ದೊಡ್ಡ ಗಾತ್ರದಅಮೃತಶಿಲೆಯ ಕಾರಂಜಿ ಸೇರಿದಂತೆಹಲವು ವಿಧಗಳಿವೆ.ಆಧುನಿಕವಾಗಿಅತ್ಯಾಕರ್ಷಕವಾಗಿರುವ ಕಾರಂಜಿಗಳುದೊರೆಯುತ್ತವೆ.ಕೆಲವು ವಾಸ್ತುಶಿಲ್ಪಿಗಳುಮನೆಯ ಒಂದು ಗೋಡೆಯನ್ನು ಕೃತಕಝರಿಯಂತೆ ವಿನ್ಯಾಸಗೊಳಿಸಿ,ನೀರಿನ ಹರಿವಿನನೈಸರ್ಗಿಕ ಶಬ್ಧ ಮತ್ತು ದೃಶ್ಯವನ್ನುಸೃಷ್ಟಿಸುತ್ತಾರೆ.ಹೆಚ್ಚಿನ ಮನೆಗಳಲ್ಲಿಈಗಾಗಲೇ ಈ ತಂತ್ರಜ್ಞಾನವನ್ನುಅಳವಡಿಸಿದ್ದಾರೆ.
ಈ ಭೂಮಿಮತ್ತು ಮನುಷ್ಯನ ದೇಹದಲ್ಲಿಬಹುಪಾಲು ನೀರಿನ ಅಂಶವೇ ಇರುವುದರಿಂದ,ನೀರು ವಾತಾವರಣಮತ್ತು ಮನಸ್ಸು ಎರಡನ್ನೂ ತಿಳಿಗೊಳಿಸುವಮಹತ್ವದ ವಸ್ತು.ಈ ಕಾರಣದಿಂದನೀರನ್ನು ಉಪಯೋಗಿಸಿ ಕೆಲ ಅಲಂಕಾರಿಕವಸ್ತುಗಳು ಮನೆಯ ವಾತಾವರಣವನ್ನುಉತ್ತಮಗೊಳಿಸಲು ಸಹಕಾರಿಯಾಗಿರುತ್ತದೆ.ಅಕ್ವೇರಿಯಂ,ೌಂಟೇನ್‌ನಲ್ಲಿನೀರು ಪ್ರಧಾನವಾಗಿರುತ್ತದೆ.ಜೊತೆಗೆ ಮನೆಯಒಳಗೆ ನೀರು ಹರಿಯುವುದರಿಂದ ಮನೆಯಒಳಗಿನ ಉಷ್ಣಾಂಶವು ನಿಯಂತ್ರಣದಲ್ಲಿರುತ್ತದೆ.ಆದ್ದರಿಂದಕಾರಂಜಿಗಳ ನಿರ್ಮಾಣದ ಹಿಂದೆಅಲಂಕಾರದ ಜೊತೆ ವೈಜ್ಞಾನಿಕ ಲಾಭವೂಇವೆ.
ಮನೆಯಒಳಗೆ ಮಾತ್ರವಲ್ಲದೆ ಮನೆ ಮುಂಭಾಗದಉದ್ಯಾನದಲ್ಲೂ ಕಾರಂಜಿ ನಿರ್ಮಾಣಕ್ಕೆಅವಕಾಶವಿದೆ.ವಿಶಾಲವಾದಸ್ಥಳವಿದ್ದರೆ ದೊಡ್ಡದಾಗಿಯೇಕಾರಂಜಿ ನಿರ್ಮಿಸಿ ಸುತ್ತಲೂವಾಕಿಂಗ್ ಪಾತ್ ಮಾಡಬಹುದು.ಬೆಳಗ್ಗೆ ಮತ್ತುಸಂಜೆಯ ವೇಳೆಯಲ್ಲಿ ಕಾರಂಜಿಸುತ್ತಲೂ ವಾಕ್ ಮಾಡುವುದರಿಂದಮನಸ್ಸು ಪ್ರಪುಲ್ಲಗೊಳ್ಳುತ್ತದೆ.