ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದಿಂದ ನಗರದ ವೀರಶೈವ ಸಾಂಸ್ಕೃತಿಕ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 78ನೇ ಮಾಸಿಕ ಶಿವಾನಭವ ಗೋಷ್ಠಿಯಲ್ಲಿ ಶರಣ ಸೊಡ್ಡಳ ಬಾಚರಸ ಅವರ ಅನುಭಾವ ಕುರಿತು ಅವರು ಉಪನ್ಯಾಸ ನೀಡಿದರು.
ಗುಜರಾತ ಸೌರಾಷ್ಟ್ರದ ಸೋಮನಾಥನ ಪರಮ ಭಕ್ತ ಸೊಡ್ಡಳ ಬಾಚರಸರು ಕಲ್ಯಾಣದಲ್ಲಿ ಕುದುರೆ, ಆನೆಗಳಿಗೆ ಆಹಾರ ಧಾನ್ಯಗಳ ಲೆಕ್ಕ ಬರೆಯುವ ಕಾಯಕ ಮಾಡುತ್ತ ಶಿವನ ಕುರಿತು ಧ್ಯಾನಸ್ಥರಾಗಿ ಶಿವನನ್ನು ಒಲಿಸಿಕೊಂಡವರು. ಮನುಷ್ಯರ ಮನಸ್ಸನ್ನು ಶಿವಪೂಜೆ ಲಿಂಗದ ಮೇಲೆ ಕೇಂದ್ರೀಕರಿಸಲು ಕಾಯಕ ತತ್ವ ತಿಳಿಸುತ್ತ ಜನರ ಜೀವನ ಪಾವನಗೊಳಿಸಿದವರು. ಲಿಂಗಪೂಜೆಯು ಮನಸ್ಸಿಗೆ ಮುಟ್ಟಬೇಕು. ನಿಷ್ಕಲ್ಮಶ ಮನಸ್ಸಿನಿಂದ ದಾಸೋಹ ಮಾಡಿದಾಗ ದೇವನಿಗೆ ಸಲ್ಲುತ್ತದೆ ಎಂದು ಸೊಡ್ಡಳ ಬಾಚರಸ ಅವರು ತಮ್ಮ ವಚನಗಳ ಮೂಲಕ ಜನರ ಜೀವನವನ್ನು ಪಾವನಗೊಳಿಸಿದವರು. ಸದ್ಯ ಅವರು ರಚಿಸಿದ 108 ವಚನಗಳು ಲಭ್ಯವಾಗಿವೆ ಎಂದರು.
ಮಹಾಸಭೆ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿದರು. ಮಹಾಸಭೆ ಉಪಾಧ್ಯಕ್ಷ ಸಹದೇವ ನಾಡಗೌಡರ ಮಾತನಾಡಿದರು. ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಂಗಮೇಶ ಬಾದಾಮಿ ನಿರೂಪಿಸಿದರು. ವಿಠ್ಠಲ ತೇಲಿ ವಂದಿಸಿದರು.
ಶರಣೆ ಅಕ್ಕಮಹಾದೇವಿ ಬುರ್ಲಿ, ಶಾರದಾ ಕೊಪ್ಪ ಐಹೊಳ್ಳಿ, ಶಶಿಧರ ಶಿರಹಟ್ಟಿ, ಎಸ್.ಎನ್. ಶಿವಣಗಿ, ಮಹಾದೇವ ಹಾಲಳ್ಳಿ, ಜಗದೀಶ ಮೋಟಗಿ, ಮಲ್ಲಿಕಾರ್ಜುನ ಅಮರಣ್ಣವರ, ಪ್ರಶಾಂತ ಪಟ್ಟಣಶೆಟ್ಟಿ, ಎಂ.ವೈ. ಜಾವಡಗಿ, ಎಂ.ಜಿ. ಯಾದವಾಡ, ಈರಣ್ಣ ತೊಂಡಿಕಟ್ಟಿ, ಬಸವರಾಜ ಒಂಟಗೂಡಿ ಮತ್ತಿತರರಿದ್ದರು.