ಅನಾದಿ ಶಿವನೇ ಗುರುಪರಂಪರೆಯ ಮೂಲ; ಗುರುಪೂರ್ಣಿಮೆಯಲ್ಲಿ ಶ್ರೀಶೈಲ ಜಗದ್ಗುರುಗಳ ಅಭಿಮತ

ಶ್ರೀಜಗದ್ಗುರು ಶ್ರೀಪತಿ ಪಂಡಿತಾರಾಧ್ಯರ ಜಯಂತಿ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಶ್ರೀಶೈಲ ಜಗದ್ಗುರುಗಳು, ವಿವಿಧ ಶ್ರೀಗಳು, ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಶ್ರೀಜಗದ್ಗುರು ಶ್ರೀಪತಿ ಪಂಡಿತಾರಾಧ್ಯರ ಜಯಂತಿ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಶ್ರೀಶೈಲ ಜಗದ್ಗುರುಗಳು, ವಿವಿಧ ಶ್ರೀಗಳು, ಗಣ್ಯರು ಪುಷ್ಪ ನಮನ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅನಾದಿ ಶಿವನೇ ಗುರುಪರಂಪರೆಯ ಮೂಲ
  • ಗುರುಪೂರ್ಣಿಮೆಯಲ್ಲಿ ಶ್ರೀಶೈಲ ಜಗದ್ಗುರುಗಳ ಅಭಿಮತ
  • ಶ್ರೀಶೈಲ ಜಗದ್ಗುರು ಶ್ರೀಪತಿ ಪಂಡಿತಾರಾಧ್ಯರ ಜಯಂತಿ

ಬೆಂಗಳೂರು: ಜಗತ್ತಿನಗುರುಪರಂಪರೆಗೆ ಮೂಲ ಸದಾಶಿವ.ಅದಕ್ಕೆ ಸದಾಶಿವನನ್ನುಅನಾದಿ ಜಗದ್ಗುರು ಎಂದು ಕರೆಯಲಾಗುತ್ತದೆ.ಸದಾಶಿವನುಗುರುವಿನ ರೂಪದಲ್ಲಿ ಧರೆಗಿಳಿದದಿನವೇ ಗುರು ಪೂರ್ಣಿಮೆ ಎಂದುಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮಪಂಡಿತಾರಾಧ್ಯ ಭಗವತ್ಪಾದರುತಿಳಿಸಿದ್ದಾರೆ.

ವಿಜಯನಗರದಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನಫೌಂಡೇಶನ್ ಗುರು ಪೂರ್ಣಿಮೆಅಂಗವಾಗಿ ಹಮ್ಮಿಕೊಂಡಿದ್ದಶ್ರೀಜಗದ್ಗುರು ಶ್ರೀಪತಿಪಂಡಿತಾರಾಧ್ಯರ ಜಯಂತಿ ಸಮಾರಂಭದಸಾನ್ನಿಧ್ಯ ವಹಿಸಿ ಆಶೀರ್ವಚನನೀಡಿದರು.

ವೀರಶೈವಧರ್ಮದ ಗುರುಪರಂಪರೆಗೆ ಯುಗ ಯುಗಗಳಇತಿಹಾಸವಿದೆ.ಜಗತ್ತಿನಲ್ಲಿರುವಎಲ್ಲ ಜ್ಞಾನ ಸಂಪತ್ತಿಗೆ ಪರಮೇಶ್ವರನೇಅಧಿಪತಿಯಾಗಿದ್ದು,ಅವನಿಂದಲೇ ಉಪದೇಶ,ದೀಕ್ಷೆ ಪಡೆದುಬಂದ ಆದಿ ಜಗದ್ಗುರು ಪಂಚಾಚಾರ್ಯರುಭೂತಲದಲ್ಲಿ ಪಂಚಸೂತ್ರವನ್ನುಉಪದೇಶ ಮಾಡಿ ಶಿವಾದ್ವೆತಸಿದ್ಧಾಂತವನ್ನು ಪ್ರತಿಷ್ಠಾಪಿಸಿದ್ದಾರೆ.ಆದ್ದರಿಂದಗುರುಪೂರ್ಣಿಮೆಯಂದು ಎಲ್ಲಗುರುಗಳಿಗೆ ಮೂಲಗುರುವಾಗಿರುವ,ಅನಾದಿ ಜಗದ್ಗುರುಸದಾಶಿವನನ್ನು ಪೂಜಿಸುವ ಪರಿಪಾಠಬೆಳೆದು ಬಂದಿದೆ ಎಂದು ಜಗದ್ಗುರುಗಳುವಿವರಿಸಿದರು.

ಸಮಾರಂಭದಲ್ಲಿ ಪಂ.ರವೀಂದ್ರಸೊರಗಾವಿಯವರಿಗೆ ‘ನಾದಭಾಸ್ಕರ’ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಮಾರಂಭದ ನಂತರಗುರುಪೂರ್ಣಿಮೆ ನಿಮಿತ್ತ ಶ್ರೀಶೈಲಜಗದ್ಗುರುಗಳ ಪಾದಪೂಜೆ ನೆರವೇರಿತು.

ಸಮಾರಂಭದಲ್ಲಿಶಿವಗಂಗೆ,ವಿಭೂತಿಪುರ,ಮತ್ತಿತರ ಮಠಗಳಶ್ರೀಗಳು,ಕೆವಿವಿಎಸ್ಅಧ್ಯಕ್ಷ ಬಿ.ಎಸ್.ಪರಮಶಿವಯ್ಯಮತ್ತಿತರರು ಪಾಲ್ಗೊಂಡಿದ್ದರು.

ಗುರುಪೂರ್ಣಿಮೆ ಅಂಗವಾಗಿ ನಡೆದ ಶ್ರೀಶೈಲ ಜಗದ್ಗುರುಗಳ ಕಾರ್ಯಕ್ರಮದಲ್ಲಿ ಗಾಯಕ ರವೀಂದ್ರ ಸೊರಗಾವಿಯವರಿಗೆ ನಾದಭಾಸ್ಕರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ಮಠಗಳ ಶ್ರೀಗಳು, ಗಣ್ಯರು ಉಪಸ್ಥಿತರಿದ್ದರು.

ಜಗದ್ಗುರುಶ್ರೀಪತಿ ಪಂಡಿತಾರಾಧ್ಯ ಜಯಂತಿ

ಕೇದಾರಪೀಠದ ಜಗದ್ಗುರು ಘಂಟಾಕರ್ಣಭಗವತ್ಪಾದರಿಂದ ಉಪದೇಶವನ್ನುಪಡೆದು ಶಿವತತ್ವದ ಸಾರವನ್ನುತಿಳಿದುಕೊಂಡ ವ್ಯಾಸರು 18ಪುರಾಣ,ಬ್ರಹ್ಮಸೂತ್ರವನ್ನುರಚಿಸಿ ಜ್ಞಾನಾಮೃತವನ್ನು ಜಗತ್ತಿಗೆನೀಡಿದ್ದಾರೆ.ಅದೇ ಕಾರಣಕ್ಕೆಗುರುಪೂರ್ಣಿಮೆಯನ್ನು ವ್ಯಾಸಪೂರ್ಣಿಮೆ ಎಂಬ ಹೆಸರಿನಿಂದಆಚರಿಸಲಾಗುತ್ತದೆ.ಅಂತಹ ವ್ಯಾಸರುರಚಿಸಿದ ಬ್ರಹ್ಮಸೂತ್ರಗಳಿಗೆಶ್ರೀಕರ ಭಾಷ್ಯ ಎಂಬ ಗ್ರಂಥದ ಮೂಲಕವೀರಶೈವ ಪರವಾದ ವ್ಯಾಖ್ಯಾನವನ್ನುಬರದ ಶ್ರೀಶೈಲ ಪೀಠದ ಜಗದ್ಗುರುಶ್ರೀಪತಿ ಪಂಡಿತಾರಾಧ್ಯರ ಜಯಂತಿಯನ್ನುಗುರುಪೂರ್ಣಿಮೆಯಂದು ಆಚರಿಸಲಾಗುತ್ತದೆಎಂದು ಶ್ರೀಶೈಲ ಜಗದ್ಗುರುಗಳುತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net