ಎಲ್ಲ ಧರ್ಮಗಳ ಸಾರ ಒಂದೇ

ಹುನಗುಂದ ತಾಲೂಕಿನ ಚಿತ್ತವಾಡಗಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಮಾಸಿಕ  ಶಿವಾನುಭವ ಕಾರ್ಯಕ್ರಮದಲ್ಲಿ ನಿವತ್ತ ಶಿಕ್ಷಕ ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿದರು. ಟ್ರಸ್ಟಿಗಳಾದ ಎಂ.ಎಸ್ ಮಠ, ಬಸಯ್ಯ ನವಲಿಮಠ, ಭರಮ ಗೌಡರ ಇತರರಿದ್ದರು.
ಹುನಗುಂದ ತಾಲೂಕಿನ ಚಿತ್ತವಾಡಗಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ನಡೆದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ನಿವತ್ತ ಶಿಕ್ಷಕ ವಿಜಯ ಮಹಾಂತೇಶ ಗದ್ದನಕೇರಿ ಮಾತನಾಡಿದರು. ಟ್ರಸ್ಟಿಗಳಾದ ಎಂ.ಎಸ್ ಮಠ, ಬಸಯ್ಯ ನವಲಿಮಠ, ಭರಮ ಗೌಡರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಜಯ ಮಹಾಂತೇಶ ಗದ್ದನಕೇರಿ ಹೇಳಿಕೆ
  • 426ನೇ ಮಾಸಿಕ ಶಿವಾನುಭವ ಕಾರ್ಯಕ್ರಮ
ಹುನಗುಂದ: ಧರ್ಮವೆಂದರೆ ಇತರರಿಗೆ ಒಳಿತು ಬಯಸುವುದು ಎಂಬ ಅರ್ಥ ಹೊಂದಿದ್ದು, ಎಲ್ಲ ಧರ್ಮಗಳ ಬೋಧನೆಯ ಸಾರ ಒಂದೇ ಆಗಿದೆ ಎಂದು ನಿವತ್ತ ಶಿಕ್ಷಕ ವಿಜಯ ಮಹಾಂತೇಶ ಗದ್ದನಕೇರಿ ಹೇಳಿದರು.
ತಾಲೂಕಿನ ಚಿತ್ತವಾಡಗಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಶನಿವಾರ ನಡೆದ 426ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಭಜನೆಗೆ ಯಾವುದೇ ಧರ್ಮ ಪ್ರೋತ್ಸಾಹ ನೀಡುವುದಿಲ್ಲ, ಜೋಡಣೆ ಮತ್ತು ಮಾನವೀಯತೆಯೇ ಅದರ ಮೂಲ ಸತ್ವ ಎಂದು ಅವರು ಹೇಳಿದರು.
ವ್ಯಕ್ತಿಯ ಆಚಾರ-ವಿಚಾರ ಮತ್ತು ನಡವಳಿಕೆಗಳೇ ವ್ಯಕ್ತಿತ್ವವನ್ನು ನಿರ್ಧರಿಸಬೇಕು, ವೇಷಭೂಷಣ ಅಥವಾ ಸಾಂಪ್ರದಾಯಿಕ ಲಾಂಛನಗಳಿಂದಲ್ಲ ಎಂದರು.
ನಿವತ್ತ ಉಪನ್ಯಾಸಕ ನಾಗರಾಜ ನಾಡಗೌಡ ಮಾತನಾಡಿ, ದ್ವೇಷ ಮತ್ತು ಅಸೂಯೆಗಳಿಂದ ದೂರವಾದ ಪಾರದರ್ಶಕ ಜೀವನ ನಡೆಸಬೇಕು. ತೀರ್ಥಯಾತ್ರೆಗಿಂತ ದೃಢ ಭಕ್ತಿಯ ಪ್ರಾರ್ಥನೆಯೆ ದೇವರ ಕಪೆಗೆ ಕಾರಣವಾಗುತ್ತದೆ ಎಂದರು.
ಪುರತಗಿರಿಯ ಕೈಲಾಸಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಟ್ರಸ್ಟಿಗಳಾದ ಎಂ.ಎಸ್ ಮಠ, ಬಸಯ್ಯ ನವಲಿಮಠ, ಭರಮಗೌಡ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net