ತಿಪಟೂರು:ಉದ್ಯೋಗ ಸೃಷ್ಟಿ ವಿಚಾರದಲ್ಲಿ ಯುವಕರನ್ನು ನಿರಾಸೆಗೊಳಿಸಿರುವ ರಾಜ್ಯ ಸರ್ಕಾರ ಹುಷಾರಾಗಿ ನಡೆಯದಿದ್ದರೆ ಈಶಾನ್ಯ ರಾಜ್ಯಗಳ ಪರಿಸ್ಥಿತಿ ಇಲ್ಲೂ ನಿರ್ವಾಣವಾಗಬಹುದು ಎಂದು ಯುವ ಜೆಡಿಎಸ್ ಘಟಕದ ಅಧ್ಯಕ್ಷ ನಿಖಿಲ್ ಕುವಾರಸ್ವಾಮಿ ಎಚ್ಚರಿಸಿದರು.
ನಗರದ ಜಿ.ಕೆ.ಬಡಾವಣೆಯಲ್ಲಿ ಜೆಡಿಎಸ್‌ನಿಂದ ಸೋಮವಾರ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳದ ಬೆಳ್ಳಿಹಬ್ಬ ಸಂಭ್ರವಾಚರಣೆಯಲ್ಲಿ ವಾತನಾಡಿದ ಅವರು, ಕಿತ್ತೂರು, ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್ ಬಾಗಿಲು ಮುಚ್ಚಿದೆ ಎಂಬ ವಾತಿಗೆ ತದ್ವಿರುದ್ಧವಾಗಿ ಅಲ್ಲಿ ಅಪಾರ ಜನಬೆಂಬಲ ಸಿಗಲು ಎಚ್.ಡಿ. ದೇವೇಗೌಡರು ಅಲ್ಲಿನ ಜನರಿಗೆ ರೂಪಿಸಿದ ಕೃಷ್ಣಾ ನದಿ ನೀರಿನ ಯೋಜನೆಯೇ ಕಾರಣ. ರಾಜಕಾರಣ ಸಮುದ್ರವಿದ್ದಂತೆ, ಬದಲಾವಣೆ ಪರ್ವ ಬಂದೇ ಬರುತ್ತೆ. ಇದಕ್ಕೆ ತಕ್ಕಂತೆ ಈಗ ಬದಲಾವಣೆ ಪರ್ವ ಆರಂಭವಾಗಿದೆ ಎಂದರು.
ಪಕ್ಷದ ವರಿಷ್ಠರ ಸೂಚನೆ ಪಾಲಿಸಲು ಇಲ್ಲಿನ ಕಾರ್ಯಕರ್ತರು ಕಟಿಬದ್ಧರಾಗಿದ್ದಾರೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್.ಡಿ. ಕುವಾರಸ್ವಾಮಿ ಒಟ್ಟು 34 ತಿಂಗಳು ರಾಜ್ಯವನ್ನು ಆಳಿದ ಸಮಯ ಸುವರ್ಣಯುಗ ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಲಕ್ಷ ಕೋಟಿಗಳಷ್ಟು ದೊಡ್ಡ ಪ್ರವಾಣದಲ್ಲಿ ಬಜೆಟ್ ಮಂಡಿಸಿದರೆ ಸಾಲದು, ಇದರಿಂದ ಬಡವರ ಕಲ್ಯಾಣ ಆಯಿತೇ ಎಂಬುದು ಮುಖ್ಯ ಎಂದರು.
ರಾಜ್ಯದ 7.64 ಲಕ್ಷ ಕೋಟಿ ರೂ. ಒಟ್ಟು ಸಾಲದ ಪೈಕಿ ಸಿದ್ದರಾಮಯ್ಯ ಅವಧಿಯಲ್ಲಿ 5 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ ಎಂದ ಅವರು, ಗ್ಯಾರಂಟಿ ಯೋಜನೆಗಳ ಪರಿಶೀಲನೆ ಅಗತ್ಯ ಎಂದು ಇತ್ತೀಚೆಗೆ ಎಂ.ಬಿ.ಪಾಟೀಲ್ ಮತ್ತು ಡಿಸಿಎಂ ಹೇಳಿದ್ದಾರೆ. ಜನಪರ ಕಾಳಜಿ ಇಲ್ಲದವರಿಂದ ಸಂಪದ್ಭರಿತ ರಾಜ್ಯ ಸೊರಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುವಾರಸ್ವಾಮಿ ಹೇಳಿದಂತೆ ಮಹಿಳೆಯರಿಗೆ ವಾಸಿಕ 2 ಸಾವಿರ ಹಣ ಕೊಡುವುದು ದುಬಾರಿಯಲ್ಲ. ತಿಂಗಳಿಗೆ 10 ಸಾವಿರ ಬೇಕಾದರೂ ಕೊಡಬಹುದು. ಆದರೆ, ಆಳುವವರ ಕೈ, ಬಾಯಿ ಶುದ್ಧವಾಗಿದ್ದರಷ್ಟೇ ಇದು ಸಾಧ್ಯ. ಎಸ್‌ಸಿಪಿ ಟಿಎಸ್‌ಪಿ ಯೋಜನೆಯಿಂದ ಬಡವರ ಕಲ್ಯಾಣಕ್ಕೆ ಮೀಸಲಿಟ್ಟ 37 ಸಾವಿರ ಕೋಟಿ ಹಣವನ್ನು ಹಂತ, ಹಂತವಾಗಿ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಹರಿಹಾಯ್ದರು ಜೆಡಿಎಸ್ ಮುಖಂಡ ಕೆ.ಟಿ.ಶಾಂತಕುವಾರ್ ವಾತನಾಡಿ, ರಾಜ್ಯ ಸರ್ಕಾರ ಹುಸಿ ಭರವಸೆ ನೀಡುತ್ತ ಜನರನ್ನು ಮರಳು ವಾಡುತ್ತಿರುವುದು ಹೆಚ್ಚು ದಿನ ನಡೆಯಲ್ಲ ಎಂದರು.
ಶಾಸಕ ಎಂ.ಟಿ.ಕೃಷ್ಣಪ್ಪ ವಾತನಾಡಿ, ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗ್ಡೆ, ಡಿ.ದೇವರಾಜ ಅರಸು, ಎಸ್.ಬಂಗಾರಪ್ಪ ಸೇರಿ ಅನೇಕರು ಪ್ರಾದೇಶಿಕ ಪಕ್ಷ ಕಟ್ಟಿದರೂ ಗೆಲ್ಲಲಾಗಲಿಲ್ಲ. ಆದರೆ, ಜೆಡಿಎಸ್ 25 ವರ್ಷ ರಾಜ್ಯದಲ್ಲಿ ಅಸ್ತಿತ್ವ ಉಳಿಸಿಕೊಂಡಿರುವುದಕ್ಕೆ ಕಾರಣ ಎಚ್. ದೇವೇಗೌಡರು ಮತ್ತು ಕುವಾರಸ್ವಾಮಿ ಅವರ ಮಣ್ಣಿನ ಮಕ್ಕಳ ಗುಣ ಕಾರಣವಾಗಿದೆ ಎಂದರು.