ದಾಸೋಹ ತತ್ವದ ಸಾಕಾರ ಮೂರ್ತಿ

ಯಾದಗಿರಿಯಲ್ಲಿ ಬುಧವಾರ ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಆಚರಿಸಲಾಯಿತು. ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್​, ಡಾ.ಸಿದ್ಧರಾಜರೆಡ್ಡಿ, ಅಯ್ಯಣ್ಣ ಹುಂಡೇಕಾರ, ಶರಣಪ್ಪಗೌಡ ಕರೆಡ್ಡಿ ಮಲ್ಹಾರ, ಹಣಮಂತರಡ್ಡಿ ಮುದ್ನಾಳ್​, ಚನ್ನಪ್ಪಗೌಡ ಮೋಸಂಬಿ, ಸಿದ್ಧಪ್ಪ ಹೊಟ್ಟಿ, ಸಂಗಾರೆಡ್ಡಿಗೌಡ ಮಲ್ಹಾರ, ಸೋಮಶೇಖರ ಮಣ್ಣೂರ ಇತರರಿದ್ದರು.
ಯಾದಗಿರಿಯಲ್ಲಿ ಬುಧವಾರ ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮಿಗಳ 119ನೇ ಜಯಂತಿ ಆಚರಿಸಲಾಯಿತು. ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್​, ಡಾ.ಸಿದ್ಧರಾಜರೆಡ್ಡಿ, ಅಯ್ಯಣ್ಣ ಹುಂಡೇಕಾರ, ಶರಣಪ್ಪಗೌಡ ಕರೆಡ್ಡಿ ಮಲ್ಹಾರ, ಹಣಮಂತರಡ್ಡಿ ಮುದ್ನಾಳ್​, ಚನ್ನಪ್ಪಗೌಡ ಮೋಸಂಬಿ, ಸಿದ್ಧಪ್ಪ ಹೊಟ್ಟಿ, ಸಂಗಾರೆಡ್ಡಿಗೌಡ ಮಲ್ಹಾರ, ಸೋಮಶೇಖರ ಮಣ್ಣೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವ ಮುಖಂಡ ಮುದ್ನಾಳ್​ ಬಣ್ಣನೆ
  • ಯಾದಗಿರಿಯಲ್ಲಿ ಶಿವಕುಮಾರ ಶ್ರೀಗಳ ಜಯಂತಿ ಆಚರಣೆ
ಯಾದಗಿರಿ: ಸಿದ್ಧಗಂಗಾ ಮಠದ ಲಿಂ. ಶ್ರೀ ಡಾ.ಶಿವಕುಮಾರ ಮಹಾಸ್ವಾಮಿ ದಾಸೋಹ ತತ್ವದ ಸಾಕಾರ ಮೂರ್ತಿಯಾಗಿದ್ದರು ಎಂದು ವೀರಶೈವ ಲಿಂಗಾಯತ ಸಮಾಜದ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್​ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ವೀರಶೈವ ಸಮಾಜದಿಂದ ಬುಧವಾರ ಹಮ್ಮಿಕೊಂಡ ಶ್ರೀ ಶಿವಕುಮಾರ ಮಹಾಸ್ವಾಮಿಗಳ 119ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ದಾಸೋಹ ಸಿದ್ಧಾಂತವನ್ನು ಬದುಕಿನುದ್ಧಕ್ಕೂ ಅಳವಡಿಸಿಕೊಂಡು ಲಾಂತರ ಜನರ ಬಾಳು ಬೆಳಗಿದ ದಾಸೋಹ ತತ್ವದ ಸಾಕಾರ ಮೂರ್ತಿಯಾಗಿದ್ದಾರೆ ಎಂದರು. ಒಬ್ಬ ಮಠಾಧೀಶರ ಕರ್ತವ್ಯವೇನು ಎಂಬುದನ್ನು ಕೇವಲ ಮಾತಿನಲ್ಲಿ ಹೇಳದೆ ಜೀವಂತವಾಗಿ ನಡೆದು ತೋರಿಸಿದ ಮಹಾಯತಿಯಾಗಿದ್ದವರು ಸಿದ್ಧಗಂಗಾ ಮಠದ ಶ್ರೀಗಳು ಎಂದು ಬಣ್ಣಿಸಿದರು.
ನಿತ್ಯ ಸಹಸ್ರಾರು ಮಕ್ಕಳಿಗೆ ಅನ್ನದಾನ ಮತ್ತು ಅರದಾನಗಳ ಮೂಲಕ ಆಶ್ರಯ ನೀಡಿ ಲಾಂತರ ಬಡ ಮಕ್ಕಳನ್ನು ತಾಯಿಯಂತೆ ಪೊರೆದ ಸಿದ್ಧಗಂಗಾಶ್ರೀಗಳು ಸಾರ್ಥಕವಾದ 111 ವರ್ಷಗಳ ಕಾಲ ಜೀವನ ನಡೆಸಿ ಸಮಾಜದ ಒಳಿತಿಗಾಗಿ ದುಡಿದು, ಶತ ಶತಮಾನಗಳವರೆಗೆ ಮರೆಯದಂತಹ ಕಾರ್ಯ ಮಾಡಿದ್ದಾರೆ ಎಂದು ಸ್ಮರಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧರಾಜರೆಡ್ಡಿ, ಹಿರಿಯ ಸಾಹಿತಿ ಹಾಗೂ ವೀರಶೈವ ಸಮಾಜದ ಮುಖಂಡ ಅಯ್ಯಣ್ಣ ಹುಂಡೇಕಾರ ಮಾತನಾಡಿದರು. ಸಮಾರಂಭದಲ್ಲಿ ಸಮಾಜದ ಹಿರಿಯರಾದ ಶರಣಪ್ಪಗೌಡ ಕರೆಡ್ಡಿ ಮಲ್ಹಾರ,ಹಣಮಂತರೆಡ್ಡಿ ಮುದ್ನಾಳ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯ ಚನ್ನಪ್ಪಗೌಡ ಮೋಸಂಬಿ,ಶರಣ ಸಾಹಿತ್ಯ ಪರಿಷತ್​ನ ಜಿಲ್ಲಾಧ್ಯ ಸಿದ್ಧಪ್ಪ ಹೊಟ್ಟಿ, ಸಂಗಾರೆಡ್ಡಿಗೌಡ ಮಲ್ಹಾರ, ಸೋಮಶೇಖರ ಮಣ್ಣೂರ, ಬಸವಂತರಾಯಗೌಡ ಮಾಲಿ ಪಾಟೀಲ್​, ಚನ್ನಮಲ್ಲಿಕಾರ್ಜುನ ಅಕ್ಕಿ, ಬಸವರಾಜ ಅರಳಿ ಮೋಟ್ನಳ್ಳಿ, ಅನ್ನಪೂರ್ಣ ಜವಳಿ, ಆರ್​.ಮಹಾದೇವಪ್ಪ ಅಬ್ಬೆತುಮಕೂರ, ಶ್ರೀನಾಥ ಜೈನ್​, ವಿಶ್ವನಾಥ ಕಾಜಗಾರ, ಸೋಮಶೇಖರ ಗಣಪೂರ, ವಿನಾಯಕ ಮಾಲಿ ಪಾಟೀಲ್​, ಚನ್ನಪ್ಪ ಸಾಹು ಠಾಣಗುಂದಿ, ಮಲ್ಲು ಸ್ವಾಮಿ ಗುಡಿಮಠ, ಲ್ಮಪುತ್ರ ಮಾಲಿ ಪಾಟೀಲ್​, ನೀಲಕಂಠ ಶೀಲವಂತ, ರಾಜಶೇಖರ ಕಿಲ್ಲನಕೇರಾ, ಶರಣಪ್ಪ ಜಾಕಾ, ಶೀಲವಂತಪ್ಪ ಲದ್ದಿ, ಶರಣು ಪಡಶೆಟ್ಟಿ, ಅಯ್ಯಣ್ಣಗೌಡ ಕ್ಯಾಸಪ್ಪನಹಳ್ಳಿ, ನಾಗಪ್ಪ ಸಜ್ಜನ್​, ಶರಣಪ್ಪ ಸಜ್ಜನ್​ ಜಾಲಿಬೆಂಚಿ ಸೇರಿ ಇತರರಿದ್ದರು.
ನಂತರ ದಾಸೋಹ ದಿನಾಚರಣೆಯ ಪ್ರಯುಕ್ತ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net