ಚೀಲ ಹೊರಗೆಳೆದು ಅಕ್ಕಿ ತಿಂದ ಆನೆ

ಗುಂಡ್ಲುಪೇಟೆ ಬಂಡೀಪುರದಲ್ಲಿ ಕಾಡಾನೆ ಅಕ್ಕಿ ಲಾರಿಯಿಂದ ಚೀಲವನ್ನು ಹೊರಗೆಳೆದು ತಿನ್ನುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು.
ಗುಂಡ್ಲುಪೇಟೆ ಬಂಡೀಪುರದಲ್ಲಿ ಕಾಡಾನೆ ಅಕ್ಕಿ ಲಾರಿಯಿಂದ ಚೀಲವನ್ನು ಹೊರಗೆಳೆದು ತಿನ್ನುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಬಂಡೀಪುರದಲ್ಲಿ ಕಾಡಾನೆ
  • ಲಾರಿಯಿಂದ ಅಕ್ಕಿ ಮೂಟೆಯನ್ನು ಹೊರಗೆಳೆದು ತಿಂದಿದ್ದು
ಗುಂಡ್ಲುಪೇಟೆ: ಬಂಡೀಪುರ ಅರಣ್ಯದಲ್ಲಿ ಕಾಟಾನೆ ಲಾರಿಯಿಂದ ಅಕ್ಕಿ ಮೂಟೆಯನ್ನು ಹೊರಗೆಳೆದು ತಿಂದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಬಂಡೀಪುರ ಊಟಿ ರಸ್ತೆಯ ಕೆಕ್ಕನಹಳ್ಳ ಸಮೀಪ ತಡೆದಿರುವ ಆನೆ ಪ್ಲಾಸ್ಟಿಕ್ ಚೀಲವನ್ನು ಹೊರಗೆಳೆದು ಅಕ್ಕಿಯನ್ನು ತಿಂದಿದೆ ಎನ್ನಲಾಗಿದೆ. ಆದರೆ, ಸೆರೆಯಾಗಿರುವ ಸ್ಥಳ ಬಂಡೀಪುರದ್ದೋ ಬೇರೆಯದ್ದೋ ಎಂಬುದು ಖಚಿತವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net