ಸ್ವಚ್ಛ ಪರಿಸರಕ್ಕೆ ಪೌರಕಾರ್ಮಿಕರ ಶ್ರಮ ಅಪಾರ

The efforts of civil servants for a clean environment are immense.
The efforts of civil servants for a clean environment are immense.
Published on
ಪಾವಗಡ: ಸ್ವಚ್ಛ ಪರಿಸರ ನಿರ್ಮಿಸುವಲ್ಲಿ ಪೌರಕಾರ್ಮಿಕರ ಪಾತ್ರ ಬಹುಮುಖ್ಯವಾಗಿದೆ ಎಂದು ಅಧಿಕ ಸಿವಿಲ್​ ನ್ಯಾಯಾಧೀಶೆ ಸಿ.ಎನ್​.ಮುನಿರತ್ನಮ್ಮ ತಿಳಿಸಿದರು.
ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪುರಸಭೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಮತ್ತು ನ್ಯಾಯ ಜಾಗೃತಿ ಅಭಿಯಾನವನ್ನು ಉದ್ದೇಶಿಸಿ ಮಾತನಾಡಿದರು.
ಚಳಿ, ಗಾಳಿ, ಮಳೆ ಎನ್ನದೇ ದಿನನಿತ್ಯ ಬೆಳಗಿನ ಜಾವ ಪಟ್ಟಣ ಸೇರಿದಂತೆ ಗ್ರಾಮಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ಸ್ವಚ್ಛ ಪಟ್ಟಣ ನಿಮಾರ್ಣದಲ್ಲಿ ಪೌರಕಾರ್ಮಿಕರು ಬಹುಮುಖ್ಯ ಪಾತ್ರ ವಹಿಸುತ್ತಾರೆ. ಪೌರಕಾರ್ಮಿಕರು ಒಂದು ವಾರ ತಮ್ಮ ಕರ್ತವ್ಯ ನಿರ್ವಹಣೆ ಮಾಡದಿದ್ದರೆ ಅನಾರೋಗ್ಯ ಪರಿಸರ ನಿಮಾರ್ಣವಾಗಲಿದ್ದು, ಪೌರಕಾರ್ಮಿಕರ ಆರೋಗ್ಯಕ್ಕೆ ಸರ್ಕಾರ ಒತ್ತು ನೀಡಲಿ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ರಂಗನಾಥಪ್ಪ ಮಾತನಾಡಿ, ಎಲ್ಲರ ಆರೋಗ್ಯವನ್ನು ಕಾಪಾಡುವ ಪೌರ ಕಾರ್ಮಿಕರ ಆರೋಗ್ಯಕ್ಕೆ ಸರ್ಕಾರ ಹೆಚ್ಚಿನ ಒತನ್ನು ನೀಡಿ ಪೌರಕಾರ್ಮಿಕರಿಗೆ ಅಗತ್ಯ ಸವಲತ್ತುಗಳನ್ನು ಮತ್ತು ಸುರಕ್ಷಿತ ಸಾಮಗ್ರಿಗಳನ್ನು ನೀಡಬೇಕೆಂದರು.
ಪುರಸಭೆಯ ಮುಖ್ಯಾಧಿಕಾರಿ ಜಾಫರ್​ ಷರೀಫ್​ ಮಾತನಾಡಿ, ಸ್ವಚ್ಛತೆಯಿಂದ ಮಾತ್ರ ಸುಂದರ, ರೋಗಮುಕ್ತ ಪರಿಸರ ನಿಮಾರ್ಣ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವಚ್ಛತೆ ಕಡೆಗೆ ಗಮನ ನೀಡಬೇಕು. ಸಾರ್ವಜನಿಕರು ಪೌರಕಾರ್ಮಿಕರು ಮತ್ತು ಪುರಸಭೆಯೊಂದಿಗೆ ಕೈ ಜೋಡಿಸಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net