

ಪ್ರಮುಖ ಮುಖ್ಯಾಂಶಗಳು
ಪ್ರಮುಖ ಆರೋಪಗಳೇನು?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಸಂಬಂಧಿಸಿದ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಸಿಎ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಜಯರಾಘವ ಮರಾಠೆ ಅವರು ಖಾಸಗಿ ದೂರು ದಾಖಲಿಸಿದ್ದಾರೆ. ಎಸ್ಸಿ/ಎಸ್ಟಿ ಸಮುದಾಯಕ್ಕೆ ಮಾತ್ರ ಮೀಸಲಾದ ಟ್ರಸ್ಟ್ ಅಲ್ಲವಾದರೂ, ಆ ವರ್ಗಕ್ಕೆ ಮೀಸಲಾದ ಸೌಲಭ್ಯಗಳನ್ನು ಪಡೆದುಕೊಳ್ಳಲಾಗಿದೆ. ಟ್ರಸ್ಟ್ಗೆ ಬನಶಂಕರಿ 6ನೇ ಹಂತದಲ್ಲಿ 8,125 ಚ.ಮೀ. ಸಿಎ ನಿವೇಶನ ಮಂಜೂರಾಗಿದ್ದು, ಲೀಸ್ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡಲಾಗಿತ್ತು. ಬಳಿಕ ಟ್ರಸ್ಟ್ನ ಮನವಿಯ ಮೇರೆಗೆ ಬಿಟಿಎಂ 4ನೇ ಹಂತದಲ್ಲಿ 8,002 ಚ.ಮೀ. ವಿಸ್ತೀರ್ಣದ ಪರ್ಯಾಯ ನಿವೇಶನವನ್ನೂ ಮಂಜೂರು ಮಾಡಲಾಗಿತ್ತು. ಈ ಎಲ್ಲ ಪ್ರಕ್ರಿಯೆಯಲ್ಲಿ ಅಧಿಕಾರ ದುರುಪಯೋಗ ಮತ್ತು ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ.