ಜಿಲ್ಲೆಯ ಶೈಕ್ಷಣಿಕ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಅಭೂತಪೂರ್ವ ಬದಲಾವಣೆಯೊಂದು ನಡೆದಿದ್ದು, 2024-25ನೇ ಸಾಲಿನ ಪರೀಕ್ಷೆ-1 ರಲ್ಲಿದ್ದ ಶೇ.42.43 ರಷ್ಟು ಫಲಿತಾಂಶವು 2025-26ನೇ ಸಾಲಿನಲ್ಲಿ ಬರೋಬ್ಬರಿ ಶೇ.85.06 ಕ್ಕೆ ಏರಿಕೆಯಾಗಿದೆ. ಒಟ್ಟು 37,352 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 31,770 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಡಳಿತಾತ್ಮಕ ಶೈಕ್ಷಣಿಕ ಸುಧಾರಣೆಗಳು ಯಶಸ್ವಿಯಾಗಿವೆ ಎಂದು ಹೇಳಿದರು.