ದೋರನಹಳ್ಳಿ: ಗುರುಪೂರ್ಣಿಮೆ ನಿಮಿತ್ತ ಪಟ್ಟಣದ ಹಿರೇಮಠ, ಚಿಕ್ಕಮಠ, ಸಿದ್ಧಾಶ್ರಮ ಮತ್ತು ಏಕದಂಡಗಿ ಮಠದಲ್ಲಿ ಗುರುಗಳ ಪಾದಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಗುರುಗಳ ದರ್ಶನಾಶೀರ್ವಾದ ಪಡೆದರು.
ಪಟ್ಟಣದ ಶಾಂಭವಿಮಾತಾ ಚಿಕ್ಕಮಠದಲ್ಲಿ ಬುಧವಾರ ಗುರು ಪೂರ್ಣಿಮೆ ನಿಮಿತ್ತ ಭಕ್ತರಿಂದ ಪಾದಪೂಜೆ ಸ್ವೀಕರಿಸಿ ನಂತರ ಆಶೀರ್ವಚನ ನೀಡಿದ ಶ್ರೀ ಶಿವಲಿಂಗರಾಜೇAದ್ರ ಶಿವಾಚಾರ್ಯರು, ಗುರು ಪೂರ್ಣಿಮೆ ಇದು ಬಹಳ ವಿಶೇಷ ದಿನವಾಗಿದೆ. ಈ ದಿನಕ್ಕೆ ವ್ಯಾಸ ಪೂರ್ಣಿಮೆ ಎಂತಲೂ ಕರೆಯುತ್ತಾರೆ. ವ್ಯಾಸ ಎಂದರೆ ಸಂಸ್ಕೃತದಲ್ಲಿ ವಿಸ್ತಾರ ಎಂಬ ಅರ್ಥ ಪಡೆಯುತ್ತದೆ ಎಂದರು.
ಗುರು ಮತ್ತು ಶಿಷ್ಯರ ಸಂಬAಧ ವೇದಗಳ ಕಾಲದಿಂದಲೂ, ಯುಗ ಯುಗಾಂತರದಿAದಲೂ ಇದೆ. ಅದು ಇಂದಿಗೂ ವಿಸ್ತಾರವಾಗುತ್ತಲೇ ಇದೆ. ವೇದಗಳನ್ನು ಋಗ್ವೇದ, ಅಥರ್ವಣವೇದ, ಯಜುರ್ವೇದ, ಸಾಮವೇದ ಎಂದೂ ನಾಲ್ಕು ಭಾಗಗಳಾಗಿ ವಿಂಗಡಿಸಿ ತಮ್ಮ ಶಿಷ್ಯರಿಗೆ ಸರಳ ಜÁ್ಞನೋದಯವಾಗುವಂತೆ ಗುರು ಶಿಷ್ಯರ ಮೇಲೆ ದಯಪಾಲಿಸಿದ ದಿನವಾಗಿದ್ದು ಈ ದಿನದಿಂದಲೇ ಗುರು ಶಿಷ್ಯರ ಸಂಬAಧದ ವಿಸ್ತಾರ ವ್ಯಾಪ್ತಿ ಹೆಚ್ಚಾಯಿತು. ಆದ್ದರಿಂದಲೇ ಇಂದಿಗೂ ಹರ ಮುನಿದರು ಗುರು ಕಾಯುವ ಎಂಬ ನುಡಿ ಜೀವಂತವಾಗಿದೆ ಎಂದು ಹೇಳಿದರು.
ಗುಡ್ಡದ ಮಹಾಂತೇಶ್ವರ ದೇವಸ್ಥಾನದಲ್ಲಿ ಶ್ರೀ ಅಭಿನವ ಮಹಾಂತೇಶ್ವರ ಶಿವಾಚಾರ್ಯರಿಗೆ ಪಾದಪೂಜೆ ಸಲ್ಲಿಸಲಾಯಿತು. ನಂತರ ಪೂಜ್ಯರು ಗುರು ಆಶೀರ್ವಚನ ನೀಡಿ, ಗುರು ಮತ್ತು ಶಿಷ್ಯರು ಅಥವಾ ಭಕ್ತರು ನಾವು ಒಂದೇ ನಾಣ್ಯದ ಎರಡು ಮುಖವಿದ್ದಂತೆ ಒಬ್ಬರನ್ನೋಬ್ಬರ ಬಿಟ್ಟುಕೊಡದಂತಹ ಅನುಬಂಧದ ಸಂಬAಧವಿದೆ. ಶಿಷ್ಯ, ಭಕ್ತ ಮುಂದೆ ಒಂದು ಗುರಿ ಮುಟ್ಟಲು ಹಿಂದೆ ಒಬ್ಬ ಗುರುವಿದ್ದಾಗ ಮಾತ್ರ ಸಾಧ್ಯ ಎಂದರು.
ಸಿದ್ಧಾರೂಢ ಸಿದ್ದಾಶ್ರಮದಲ್ಲೂ ಭಕ್ತಿಪೂರ್ವಕವಾದ ಗುರುಪೂರ್ಣಿಮಾ ಜರುಗಿತು. ಅವಧೂತರಾದ ಭೀಮಾಶಂಕರಾನAದ ಅವಧೂತರು ಭಕ್ತರಿಂದ ಪಾದಪೂಜೆ ಸ್ವೀಕರಿಸಿದರು. ಈ ವೇಳೆ ಚಿಕ್ಕಮಠದಲ್ಲಿ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಗುರು ಪೂರ್ಣಿಮೆ ದಿನವಾಗಿದ್ದರಿಂದ ಜಿಲ್ಲೆಯ ರಾಜಕೀಯ ಮುಖಂಡರುಗಳಾದ ಮಹೇಶರಡ್ಡಿ ಮುದ್ನಾಳ್, ಡಾ.ಭೀಮಣ್ಣ ಮೇಟಿ, ಚಂದ್ರಶೇಖರ ಮಾಗನೂರ, ಪರಶುರಾಮ ಕುರಕುಂದಿ, ಅಡಿವೆಪ್ಪ ಜÁಕಾ, ಬಸವರಾಜ ಅರುಣಿ, ರಾಜು ಆನೇಗುಂದಿ ಸೇರಿ ಅನೇಕರು ಗಣ್ಯರು ಶ್ರೀಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನಾಶೀರ್ವಾದ ಪಡೆದರು.