ಸರ್ಕಾರಿ ಮೈದಾನ, ಶಾಲಾ/ಕಾಲೇಜು ಆವರಣ, ಸಮುದಾಯ ಭವನದಲ್ಲಿ ಸಭೆ ನಡೆಸಲು ವ್ಯವಸ್ಥೆ ಮಾಡಬೇಕು. ಇಲಾಖಾವಾರು ಅರ್ಜಿ ಸ್ವೀಕೃತಿ ಕೌಂಟರ್ ಸ್ಥಾಪಿಸಬೇಕು, ಕಂಪ್ಯೂಟರ್/ಲ್ಯಾಪ್‌ಟಾಪ್, ಪ್ರಿಂಟರ್, ಇಂಟರ್‌ನೆಟ್ ಸೌಲಭ್ಯ ಒದಗಿಸಬೇಕು. ಸಮಸ್ಯೆಗಳ ಪರಿಹಾರದ ಜತೆಗೆ ಸರ್ಕಾರದ ವಿವಿಧ ಯೋಜನೆ, ಕಾರ್ಯಕ್ರಮಗಳ ಅರ್ಹ ಲಾನುಭವಿಗಳ ನೋಂದಣಿಗೂ ಅವಕಾಶ ಕಲ್ಪಿಸಬೇಕು. ಸ್ವೀಕರಿಸಿದ ಅರ್ಜಿಗಳನ್ನು ಸ್ಥಳದಲ್ಲಿಯೇ ಸರ್ಕಾರದ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ ಸ್ವೀಕೃತಿ ನೀಡಬೇಕೆಂದು ಕಡ್ಡಾಯ ಮಾಡಲಾಗಿದೆ.