ಮುಂದಿನ ವರ್ಷದ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದ ಶಿಕ್ಷಣ ಇಲಾಖೆ

ಶೈಕ್ಷಣಿಕ ವೇಳಾಪಟ್ಟಿ ಪ್ರಕಟ
ಶೈಕ್ಷಣಿಕ ವೇಳಾಪಟ್ಟಿ ಪ್ರಕಟ
Published on

ಪ್ರಮುಖ ಮುಖ್ಯಾಂಶಗಳು

  • ಮೇ 29ರಂದು ಶಾಲೆ ಆರಂಭವಾಗಲಿದ್ದು, ಮೊದಲ ಅವಧಿಯು ಅಕ್ಟೋಬರ್ 2ರಂದು ಕೊನೆಗೊಳ್ಳಲಿದೆ.
  • ಎರಡನೇ ಅವಧಿಯು ಅ.22ರಿಂದ 2027ರ ಏ.10ರವರೆಗೆ ನಡೆಯಲಿದೆ. ಅ.3ರಿಂದ 21ರವರೆಗೆ ದಸರಾ ರಜೆ
  • 119 ರಜಾದಿನಗಳಿದ್ದು, 245 ಕರ್ತವ್ಯದ ದಿನಗಳೆಂದು ಪ್ರಕಟಿಸಲಾಗಿದೆ.
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ರಾಜ್ಯಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಶೈಕ್ಷಣಿಕ ಅವಧಿ ಮತ್ತು ರಜಾ ಅವಧಿಗಳನ್ನು ಒಳಗೊಂಡ ವಾರ್ಷಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮೇ 29ರಂದು ಶಾಲೆ ಆರಂಭವಾಗಲಿದ್ದು, ಮೊದಲ ಅವಧಿಯು ಅಕ್ಟೋಬರ್ 2ರಂದು ಕೊನೆಗೊಳ್ಳಲಿದೆ. ಎರಡನೇ ಅವಧಿಯು ಅ.22ರಿಂದ 2027ರ ಏ.10ರವರೆಗೆ ನಡೆಯಲಿದೆ. ಅ.3ರಿಂದ 21ರವರೆಗೆ ದಸರಾ ರಜೆ ಇರಲಿದೆ. ಒಟ್ಟು 365 ದಿನಗಳಲ್ಲಿ 119 ರಜಾದಿನಗಳಿದ್ದು, 245 ಕರ್ತವ್ಯದ ದಿನಗಳೆಂದು ಪ್ರಕಟಿಸಲಾಗಿದೆ.
245 ದಿನಗಳಲ್ಲಿ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ (ಎ್ಎ ಮತ್ತು ಎಸ್‌ಎ) 26 ದಿನಗಳು, ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳ ನಿರ್ವಹಣೆಗಾಗಿ 24 ದಿನಗಳು, ಮೌಲ್ಯಮಾಪನ ಮತ್ತು ಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನಗಳು, ಶಾಲಾ ಸ್ಥಳೀಯ ರಜೆ 4 ದಿನಗಳು ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಗೆ 181 ದಿನಗಳನ್ನು ಮೀಸಲಿಡುವಂತೆ ಸೂಚಿಸಲಾಗಿದೆ.
ಇನ್ನುಳಿದಂತೆ ದಾಖಲಾತಿ ಆಂದೋಲನ, ಶಾಲಾ ಪ್ರಾರಂಭೋತ್ಸವ ಕುರಿತು ಎಂದಿನಂತೆ ಚಟುವಟಿಕೆಗಳನ್ನು ನೀಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net