ಗೌರಿಬಿದನೂರಲ್ಲಿ ಮುಂದುವರಿದ ಪಕ್ಷಾಂತರ ಪರ್ವ Gauribidanur

ಗೌರಿಬಿದನೂರಲ್ಲಿ ಮುಂದುವರಿದ ಪಕ್ಷಾಂತರ ಪರ್ವ Gauribidanur
ಗೌರಿಬಿದನೂರಲ್ಲಿ ಮುಂದುವರಿದ ಪಕ್ಷಾಂತರ ಪರ್ವ Gauribidanur
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕರ ಪುಟ್ಟಸ್ವಾಮಿ ಗೌಡ ಬಣಕ್ಕೆ ಸೇರಿದ ಕಾಂಗ್ರೆಸ್​ ಕಾರ್ಯಕರ್ತರು
ಗೌರಿಬಿದನೂರು: ಕಾಂಗ್ರೆಸ್​ನ ಮುಖಂಡರು, ಕಾರ್ಯಕರ್ತರು ಪಕ್ಷ ತೊರೆದು ಶಾಸಕ ಕೆ.ಎಚ್​.ಪುಟ್ಟಸ್ವಾಮಿ ಗೌಡ ಬಣಕ್ಕೆ ವಲಸೆ ಹೋಗುವ ಪರ್ವ ಕ್ಷೇತ್ರದಲ್ಲಿ ಮುಂದುವರಿಸಿದೆ. Gauribidanur
ಜಿಪಂ, ತಾಪಂ, ಗ್ರಾಪಂ ಸೇರಿ ಇತರ ಸ್ಥಳಿಯ ಸಂಸ್ಥೆಗಳ ಚುನಾವಣೆ ಘೋಷಣೆ ಹೊತ್ತಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಪಕ್ಷ ತೊರೆಯುತ್ತಿರುವುದು ಕಾಂಗ್ರೆಸ್​ ಪಾಲಿಗೆ ನುಂಗಲಾರದ ತುತ್ತಾಗಿದೆ.
ನಗರದ ಸುಮಂಗಲಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ನ ಮುಖಂಡ, ನಗರಸಭೆ ಮಾಜಿ ಸದಸ್ಯ, ಹಿರೇಬಿದನೂರು ಡೇರಿ ಅಧ್ಯಕ್ಷ ಡಿ.ಎನ್​.ವೆಂಕಟರೆಡ್ಡಿ, ಕುರುಬರಹಳ್ಳಿ ಗ್ರಾಪಂ ಅಧ್ಯಕ್ಷ ವಿಜಯರಾಘವ ರೆಡ್ಡಿ, ಬೆಂಬಲಿಗರೊಂದಿಗೆ ಶಾಸಕರ ಬಣಕ್ಕೆ ಸೇರ್ಪಡೆಯಾದರು.
ಕೆ.ಎಚ್​.ಪುಟ್ಟಸ್ವಾಮಿ ಗೌಡ ಮಾತನಾಡಿ, ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಬಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅಭಿವೃದ್ಧಿಪರ ನಿಲುವು ತತ್ವ&ಸಿದ್ಧಾಂತ ಮೆಚ್ಚಿ ಬರುವವರನ್ನು ಮುಕ್ತವಾಗಿ ಸ್ವಾಗತಿಸುತ್ತೇನೆ. ಪಕ್ಷಾತಿತವಾಗಿ ಬೆಂಬಲ ವ್ಯಕ್ತವಾಗುತ್ತಿರುವುದು ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಕ್ಕೆ ಹುರುಪು ನೀಡಿದೆ ಎಂದರು.
ಹಿರೇಬಿದನೂರು ಡೇರಿ ಅಧ್ಯಕ್ಷ ಡಿ.ಎನ್​.ವೆಂಕಟರೆಡ್ಡಿ ಮಾತನಾಡಿ, ಮುಂದೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕರ ಜತೆ ಸಾಗುತ್ತೇವೆ ಎಂದರು.
ಮಾಜಿ ಶಾಸಕಿ ಎನ್​.ಜ್ಯೋತಿ ರೆಡ್ಡಿ ಮಾತನಾಡಿ, ಸರ್ಕಾರದಿಂದ ಅನುದಾನ ತರುವುದು ಎಷ್ಟು ಕಷ್ಟ ಎಂಬುದರ ಅರಿವು ಇದೆ. ಆದರೆ, ಪುಟ್ಟಸ್ವಾಮಿ ಗೌಡರು ಸವಾಲು ಮೆಟ್ಟಿನಿಂತು ಮುಖ್ಯಮಂತ್ರಿ, ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರಕ್ಕೆ ಅನುದಾನ ತಂದು ತಾಲೂಕನ್ನು ಮಾದರಿಯಾಗಿ ಅಭಿವೃದ್ಧಿಪಡಿಸಲು ಶ್ರಮಿಸುತ್ತಿದ್ದಾರೆ. ಆದ್ದರಿಂದ ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ ಮುಖಂಡರು ಕಾರ್ಯಕರ್ತರು ಶಾಸಕರ ಬಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಇದು ಬಣದ ಶಕ್ತಿ ಹೆಚ್ಚಿಸಿದೆ ಎಂದರು.
ಮುಖಂಡ ಆರ್​.ಅಶೋಕ್​ ಕುಮಾರ್​ ಮಾತನಾಡಿ, ತಾಲೂಕಿನ ಡಿ.ಪಾಳ್ಯ ರಾಮಚಂದ್ರಪುರ ಗ್ರಾಮ ಹೊಸೂರು ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇದಕ್ಕೆ ಶಾಸಕರ ಶ್ರಮವೇ ಕಾರಣ ಎಂದರು.
ಮುಖಂಡ ಜೆ.ಕಾಂತರಾಜು ಮಾತನಾಡಿ, ದಶಕಗಳಿಂದ ತುಳಿತಕ್ಕೊಳಗಾದವರಿಗೆ ಶಾಸಕರಿಂದ ಈಗ ಅವಕಾಶ ಸಿಗುತ್ತಿವೆ ಎಂದರು.
ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ್​ ರೆಡ್ಡಿ, ಡಿಸಿಸಿ ಬ್ಯಾಂಕ್​ ನಿರ್ದೇಶಕ ವೆಂಕಟರಾಮರೆಡ್ಡಿ, ಮುಖಂಡರಾದ ಎಸ್​.ಎಲ್​.ಲಕ್ಷಿ$್ಮ ನಾರಾಯಣ ಶೆಟ್ಟಿ, ಬಿ.ಆರ್​.ಶ್ರೀನಿವಾಸ ಮೂರ್ತಿ, ನರಸಿಂಹಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಲಕ್ಷಿ$್ಮನಾರಾಯಣಪ್ಪ, ನಗರಸಭೆ ಮಾಜಿ ಸದಸ್ಯರಾದ ಕೆ.ಎಸ್​.ಅನಂತರಾಜು, ಕಲೀಮ್​, ಅಮರ್​ ಶೆಟ್ಟಿ, ರಾಜಕುಮಾರ್​, ಸುಬ್ಬರಾಯಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net