ಶಾಲೆಗಳ ವಿಲೀನ ನಿರ್ಧಾರ ಕೈಬಿಡಲಿ

ಸಂಡೂರು ತಾಲೂಕು ನರಸಾಪುರ ಹಾಗೂ ಚಪ್ಪರದಳ್ಳಿ ಶಾಲೆಗಳನ್ನು ಕೆಪಿಎಸ್‌ನಲ್ಲಿ ವಿಲೀನ ಮಾಡದಂತೆ ಆಗ್ರಹಿಸಿ ಪಾಲಕರು ಹಾಗೂ ವಿದ್ಯಾರ್ಥಿಗಳು ನರಸಿಂಗಾಪುರ ಗ್ರಾಪಂ ಕಾರ್ಯದರ್ಶಿ ಹುಲುಗಪ್ಪಗೆ ಮನವಿ ಸಲ್ಲಿಸಿದರು. ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಎನ್.ಪ್ರಮೋದ್, ಪ್ರಮುಖರಾದ ಸುರೇಶ್, ಅಂಬರೀಷ, ಉಷಾ, ಗಂಗಮ್ಮ ಇತರರಿದ್ದರು.

Published on
ಸಂಡೂರು: ನರಸಾಪುರ ಹಾಗೂ ಚಪ್ಪರದಳ್ಳಿ ಶಾಲೆಗಳನ್ನು ಕೆಪಿಎಸ್‌ನಲ್ಲಿ ವಿಲೀನ ಮಾಡದಂತೆ ಆಗ್ರಹಿಸಿ ಪಾಲಕರು, ವಿದ್ಯಾರ್ಥಿಗಳು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಶಾಲೆಗಳ ಮುಖ್ಯೋಪಾಧ್ಯಾಯರು, ನರಸಾಪುರ ಗ್ರಾಪಂ ಪಿಡಿಒಗೆ ಸೋಮವಾರ ಮನವಿ ಸಲ್ಲಿಸಿದರು. 
ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಎನ್.ಪ್ರಮೋದ್ ಮಾತನಾಡಿ, ರಾಜ್ಯ ಸರ್ಕಾರ ಜೂನ್‌ನಿಂದಲೇ ಹೊಸ ಕೆಪಿಎಸ್ ಶಾಲೆಗಳನ್ನು ಆರಂಭಿಸುತ್ತಿದ್ದು, 3ರಿಂದ 5 ಕಿ.ಮೀ. ವ್ಯಾಪ್ತಿಯ ಶಾಲೆಗಳನ್ನು ವಿಲೀನಗೊಳಿಸಲಾಗುವುದೆಂದು ತಿಳಿಸಿದೆ.
ನಮ್ಮೂರ ಶಾಲೆ ಉಳಿಯಬೇಕು ಮತ್ತು ಕೆಪಿಎಸ್ ಯೋಜನೆ ರದ್ದಾಗಬೇಕೆಂದು ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಿಕೊಂಡು ಕಳೆದ 5 ತಿಂಗಳಿಂದ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ, 1ನೇ ತರಗತಿಯಿಂದಲೇ ಕನ್ನಡದೊಂದಿಗೆ ಇಂಗ್ಲಿಷ್ ಮಾಧ್ಯಮ ಕೂಡ ಆರಂಭಿಸುತ್ತಿದೆ. ಕನ್ನಡ ಮಾಧ್ಯಮ ಉಳಿಸಿ ಇಂಗ್ಲಿಷ್ ಮಾಧ್ಯಮಕ್ಕಾಗಿ ಪ್ರತ್ಯೇಕ ಶಿಕ್ಷಕರ ನೇಮಕ ಮಾಡಿಕೊಳ್ಳಿ ಎಂದರು.
ಪ್ರಮುಖರಾದ ವಿದ್ಯಾ, ಸುರೇಶ್, ಅಂಬರೀಷ, ಉಷಾ, ಫಕ್ರುದ್ದೀನ್, ಅರ್ಜುನ್, ಗಂಗಮ್ಮ, ರೇಣುಕಾ, ಶಿಲ್ಪಾ ಇದ್ದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net